ಬಡ ವಿದ್ಯಾರ್ಥಿಗಳಿಗೆ ₹2 ಲಕ್ಷ ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಜುಲೈ 20 ಕೊನೆ ದಿನ
ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ IDFC FIRST Bank ನಿಂದ ಪ್ರತಿ ವರ್ಷ ₹1 ಲಕ್ಷ – ಎರಡು ವರ್ಷಗಳ MBA ವ್ಯಾಸಂಗಕ್ಕೆ ಒಟ್ಟು ₹2 ಲಕ್ಷ ವಿದ್ಯಾರ್ಥಿವೇತನ ದೊರೆಯಲಿದೆ.

- ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 20 ಕೊನೆ ದಿನ
- ಆಯ್ದ ಕಾಲೇಜುಗಳಲ್ಲಿ MBA ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
- ವಿದ್ಯಾರ್ಥಿವೇತನ ನೇರವಾಗಿ ಕಾಲೇಜು ಖಾತೆಗೆ ಜಮಾ ಮಾಡಲಾಗುವುದು
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ (IDFC FIRST Bank) ವತಿಯಿಂದ ನೀಡಲಾಗುವ ವಿದ್ಯಾರ್ಥಿವೇತನ ಯೋಜನೆಗೆ 2025ರ ಹೊಸ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಆಯ್ಕೆಯಾದ MBA ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ₹1 ಲಕ್ಷವಂತೆ ಎರಡು ವರ್ಷಗಳ ಕಾಲ ₹2 ಲಕ್ಷವರೆಗೆ ಹಣಕಾಸು ಸಹಾಯ (Education scholarship) ನೀಡಲಾಗುತ್ತದೆ.
ಅಭ್ಯರ್ಥಿಗಳು ಭಾರತದ ನಿವಾಸಿಯಾಗಿದ್ದು, ಆಯ್ದ MBA College ಗಳಲ್ಲಿ ಮೊದಲ ವರ್ಷದ ಪೂರ್ಣಕಾಲಿಕ ಕೋರ್ಸ್‌ಗೆ (full-time MBA course) ಪ್ರವೇಶ ಪಡೆದವರಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯವು ₹6 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂಬುದು ಪ್ರಮುಖ ಶರತ್ತು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 20, 2025 ಆಗಿದೆ.
ಇದನ್ನೂ ಓದಿ: ಬರೀ ₹4799ಕ್ಕೆ ಮನೆಗೆ ತನ್ನಿ ಸ್ಮಾರ್ಟ್ ಟಿವಿ, ಇಷ್ಟು ಕಮ್ಮಿ ಬೆಲೆಗೆ ಮತ್ತೆ ಸಿಗೋಲ್ಲ
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು www.buddy4study.com ಮೂಲಕ ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಿಂದ ಅರ್ಜಿ ಸಲ್ಲಿಸಬಹುದು. ಹೊಸ ಉಪಯೋಗದಾರರು ಖಾತೆ ರಚಿಸಿ, ಲಾಗಿನ್ ಆಗಿ, ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಅರ್ಜಿ ಸಬ್ಮಿಟ್ ಮಾಡಬಹುದು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ (Aadhaar Card)
- ಪಾಸ್‌ಪೋರ್ಟ್ ಅಳತೆಯ ಫೋಟೋ
- ಬ್ಯಾಂಕ್ ಪಾಸ್ ಬುಕ್ (bank passbook)
- ಕಾಲೇಜು ಪ್ರವೇಶ ದೃಢೀಕರಣ ಪತ್ರ
- ಫೀ ಸ್ಟ್ರಕ್ಚರ್ / College Fee Structure
- 12ನೇ ತರಗತಿಯ ಅಂಕಪಟ್ಟಿ
- ಕುಟುಂಬದ ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್, ಇ-ಮೇಲ್ ವಿಳಾಸ
ಇದನ್ನೂ ಓದಿ: ಕೇವಲ ₹4 ಸಾವಿರಕ್ಕೆ ಬ್ರಾಂಡೆಡ್ ಏರ್ ಕೂಲರ್‌ಗಳು! ಬಂಪರ್ ರಿಯಾಯಿತಿ
ವಿಶೇಷ ಸೂಚನೆಗಳು:
ವಿದ್ಯಾರ್ಥಿವೇತನದ ಹಣವನ್ನು ನೇರವಾಗಿ ಕಾಲೇಜು ಖಾತೆಗೆ (Bank Account) ವರ್ಗಿಸಲಾಗುತ್ತದೆ. ವಿದ್ಯಾರ್ಥಿಗಳು ಮೊದಲ ವರ್ಷ ಪಾಸ್ ಆಗಿ ಎರಡನೇ ವರ್ಷಕ್ಕೆ ಬಡ್ತಿ ಹೊಂದಿದರೆ, ಎರಡನೇ ವರ್ಷದ ಸಹಾಯಧನವೂ ಲಭಿಸುತ್ತದೆ. ಬ್ಯಾಂಕ್ ನ ಅಂತಿಮ ಆಯ್ಕೆಯು ಸಂಪೂರ್ಣವಾಗಿ ಅದರ ಆಯ್ಕೆ ಮೇರೆಗೆ ಇರುತ್ತದೆ.
2 Lakh Scholarship for MBA Students from IDFC FIRST Bank




