Business News

ದಿನಕ್ಕೆ ₹333 ರೂಪಾಯಿ ಈ ಯೋಜನೆಯಲ್ಲಿ ಇಟ್ರೆ, ₹17 ಲಕ್ಷ ನಿಮ್ಮ ಕೈ ಸೇರುತ್ತೆ!

ಮಧ್ಯಮ ವರ್ಗದವರು ಭದ್ರತೆ ಹಾಗೂ ಉತ್ತಮ ಹಣಕಾಸು ಪ್ರಯೋಜನಗಳೊಂದಿಗೆ ಉಳಿತಾಯ ಮಾಡಬಯಸಿದರೆ, ಈ ಪೋಸ್ಟ್ ಆಫೀಸ್ ಯೋಜನೆ ಅತ್ಯುತ್ತಮ ಆಯ್ಕೆಯಾಗಬಹುದು.

Publisher: Kannada News Today (Digital Media)

  • ದಿನಕ್ಕೆ ₹333 ಸೇವಿಂಗ್ ಮಾಡಿದರೆ ಭವಿಷ್ಯದಲ್ಲಿ ಭದ್ರತೆ
  • ಕೇವಲ ₹100 ರೂಪಾಯಿಯಿಂದಲೇ ಖಾತೆ ತೆರೆಯಬಹುದು
  • 10 ವರ್ಷಗಳಲ್ಲಿ ₹17 ಲಕ್ಷ ಪಾವತಿ ಸಾಧ್ಯ

ಇಲ್ಲಿ ನಿಮಗೆ ಆಸಕ್ತಿ ಮೂಡುವದು ಸಹಜ. “ನಾನು ದಿನಕ್ಕೆ ₹333 ಉಳಿಸಿದರೆ ನನಗೆ ₹17 ಲಕ್ಷ ನಿಜಕ್ಕೂ ಸಿಗುತ್ತಾ?” ಎನ್ನುವ ಪ್ರಶ್ನೆಗೆ ಉತ್ತರವೇ ಈ ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಸಿಟ್ (Recurring Deposit – RD) ಯೋಜನೆ.

ಇದು ಮಧ್ಯಮ ವರ್ಗದ ಜನರಿಗಾಗಿಯೇ ರೂಪುಗೊಂಡಿರುವ ಯೋಜನೆ. ಈ ಯೋಜನೆಯು ಸರಳವಾದ ಉಳಿತಾಯದ ಪದ್ದತಿಯಾಗಿದ್ದು, ಅದ್ಭುತವಾದ ಬಡ್ಡಿ ಹಾಗೂ ಸಂಪೂರ್ಣ ಭದ್ರತೆ ನೀಡುತ್ತದೆ.

ದಿನಕ್ಕೆ ₹333 ರೂಪಾಯಿ ಈ ಯೋಜನೆಯಲ್ಲಿ ಇಟ್ರೆ, ₹17 ಲಕ್ಷ ನಿಮ್ಮ ಕೈ ಸೇರುತ್ತೆ!

ಇದನ್ನೂ ಓದಿ: ಬಡ್ಡಿಯೇ 30 ಸಾವಿರ ಸಿಗೋ ಪೋಸ್ಟ್ ಆಫೀಸ್ ಸ್ಕೀಮ್! ಮಹಿಳೆಯರಿಗೆ ಬಂಪರ್ ಕೊಡುಗೆ

ರಿಸ್ಕ್ ಇಲ್ಲದ ಹೂಡಿಕೆ, ಭದ್ರತೆಯ ಖಾತರಿ

ಪೋಸ್ಟ್ ಆಫೀಸ್ ಯೋಜನೆಗಳ (Post Office Schemes) ಪ್ರಮುಖ ವಿಶೇಷತೆ ಎಂದರೆ, ಸರ್ಕಾರದಿಂದಲೇ ಭದ್ರತೆ ಇರುತ್ತದೆ. ಈ RD ಪ್ಲ್ಯಾನ್‌ನಲ್ಲಿ ಯಾವುದೇ ಮಾರುಕಟ್ಟೆ (market) ಅಪಾಯವಿಲ್ಲ. ಸರ್ಕಾರವೇ ಬಡ್ಡಿದರ ನಿಗದಿ ಮಾಡುತ್ತದೆ ಮತ್ತು ಹಣವನ್ನು ಭದ್ರವಾಗಿ ಉಳಿಸಿಕೊಳ್ಳುತ್ತದೆ. ಬಡ್ಡಿದರವು ಪ್ರಸ್ತುತ 6.7% ಇದೆ.

ಹಣವನ್ನು ಹೇಗೆ ಲೆಕ್ಕ ಹಾಕಬಹುದು?

ನೀವು ಈ ಯೋಜನೆಗೆ ದಿನಕ್ಕೆ ₹333 ಹೂಡಿದರೆ, ತಿಂಗಳಿಗೆ ₹10,000 ಹೂಡಿಕೆ ಮಾಡಿರುವಂತೆ. ವರ್ಷಕ್ಕೆ ₹1.2 ಲಕ್ಷ ಹೂಡಿಕೆ ಆಗುತ್ತದೆ. ಐದು ವರ್ಷಗಳ ನಂತರ ₹6 ಲಕ್ಷ ಹೂಡಿಕೆಯಾಗಿರುತ್ತದೆ. ಈ ಮೆಚ್ಯೂರಿಟಿ ಅವಧಿಯೊಳಗೆ ಬಡ್ಡಿಯಾಗಿ ₹1,13,659 ಸಿಗುತ್ತದೆ.

ಇದನ್ನೂ ಓದಿ: ₹80 ರೂಪಾಯಿಗೆ ₹10 ಲಕ್ಷ ಬೆನಿಫಿಟ್, ಈ ಜೀವನ್ ಲಾಭ್ ಯೋಜನೆ ಬಗ್ಗೆ ಅನೇಕರಿಗೆ ಗೊತ್ತಿಲ್ಲ

ಒಟ್ಟಾರೆ ₹7,13,659 ನಿಮ್ಮ ಕೈ ಸೇರಬಹುದು. ಆದರೆ ಅದನ್ನು 10 ವರ್ಷಗಳವರೆಗೆ ಮುಂದುವರೆಸಿದರೆ, ₹12 ಲಕ್ಷ ಹೂಡಿಕೆಗೆ ₹5,08,546 ಬಡ್ಡಿ ಸಿಗುತ್ತದೆ. ಅಂತಿಮವಾಗಿ ₹17,08,546 ಹಣ ನಿಮ್ಮ ಖಾತೆಗೆ ಬರಬಹುದು.

Post office scheme

ಈ ಯೋಜನೆಯು ಮೂಲತಃ 5 ವರ್ಷಗಳ ಮೆಚ್ಯೂರಿಟಿ ಹೊಂದಿದ್ದು, ಮತ್ತಷ್ಟು ಐದು ವರ್ಷಗಳವರೆಗೆ ನವೀಕರಿಸಬಹುದಾಗಿದೆ. ಯೋಜನೆಯು ಮುಂದುವರಿದರೆ, ನೀವು ₹12 ಲಕ್ಷವನ್ನು ಹೂಡಿಕೆ ಮಾಡಬಹುದು. ಇದರೊಂದಿಗೆ ಬಡ್ಡಿಯಾಗಿ ₹5 ಲಕ್ಷಕ್ಕಿಂತ ಹೆಚ್ಚು ಮೊತ್ತ ಸಿಗುತ್ತದೆ. ಇಡೀ ಮೊತ್ತ ನಿಮ್ಮ ಖಾತೆಗೆ ಜಮೆಯಾಗುತ್ತದೆ.

ಇದನ್ನೂ ಓದಿ: ಫೋನ್ ಪೇ, ಗೂಗಲ್ ಪೇ ಸೆಂಡಿಂಗ್ ಫೇಲ್ ಆದ್ರೆ ಏನು ಮಾಡಬೇಕು? ಇಲ್ಲಿದೆ ಟ್ರಿಕ್ಸ್

ಕೇವಲ ₹100 ರುಪಾಯಿಗೆ ಖಾತೆ ಆರಂಭ

ಯೋಜನೆಗೆ ಪ್ರವೇಶಿಸಲು ದೊಡ್ಡ ಮೊತ್ತದ ಅಗತ್ಯವಿಲ್ಲ. ಕೇವಲ ₹100 ರೂಪಾಯಿಯಿಂದ ಖಾತೆಯನ್ನು ಆರಂಭಿಸಬಹುದಾಗಿದೆ. ಸಿಂಗಲ್ ಅಥವಾ ಜಾಯಿಂಟ್ ಖಾತೆ ತೆರೆಯಲು ಅವಕಾಶವಿದೆ. ಆದರೆ, ಸಮಯಕ್ಕೆ ಸರಿಯಾಗಿ ಪಾವತಿಸಬೇಕಾದ ಅಗತ್ಯವಿದೆ.

ತಿಂಗಳ ಪ್ರೀಮಿಯಂ ಮಿಸ್ ಮಾಡಿದರೆ 1% ದಂಡ ವಿಧಿಸಲಾಗುತ್ತದೆ. ನಿರಂತರವಾಗಿ ನಾಲ್ಕು ತಿಂಗಳು ಮಿಸ್ ಮಾಡಿದರೆ ಖಾತೆ ಸ್ವಯಂಚಾಲಿತವಾಗಿ ಮುಚ್ಚಲಾಗುತ್ತದೆ.

333 per Day in Post Office Scheme Returns 17 Lakhs

English Summary

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿ, ಚಿನ್ನದ ಬೆಲೆ (Gold Price), ಬ್ಯಾಂಕ್ ಲೋನ್ (Bank Loan) ಅಪ್ಡೇಟ್‌ಗಳು, ಪರ್ಸನಲ್ ಲೋನ್ (Personal Loan), ಫೈನಾನ್ಸ್ ಟಿಪ್ಸ್ (Finance Tips), ಮ್ಯೂಚುಯಲ್ ಫಂಡ್ಸ್ (Mutual Funds), ಇನ್ಸೂರೆನ್ಸ್ (Insurance) ಸುದ್ದಿಗಳಿಗಾಗಿ ಕನ್ನಡ ನ್ಯೂಸ್ ಟುಡೇ ತಪ್ಪದೆ ಭೇಟಿ ನೀಡಿ.

Related Stories