5,000 ಬದಲು ಸಿಗಲಿದೆ 10,000 ರೂಪಾಯಿ; ಅಟಲ್ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ!
ಅಟಲ್ ಪಿಂಚಣಿ ಯೋಜನೆ (Atal Pension Yojana – APY) ದೇಶದ ಕಡಿಮೆ ಆದಾಯ ಹೊಂದಿರುವ ಜನತೆಗೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆ ನೀಡಲು ಉದ್ದೇಶಿತವಾಗಿರುವ ಪ್ರಮುಖ ಯೋಜನೆ. ಈ ಯೋಜನೆಯ ಇತ್ತೀಚಿನ ಬದಲಾವಣೆಗಳು ಪಿಂಚಣಿದಾರರ ಪ್ರಯೋಜನಗಳನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.
ಫೆಬ್ರವರಿ 1, 2025 ರಂದು ಘೋಷಣೆ ಆಗಲಿರುವ ಕೇಂದ್ರ ಬಜೆಟ್ ನಲ್ಲಿ ಸಾಕಷ್ಟು ವಿಷಯಗಳು ಬಹಿರಂಗಗೊಳ್ಳಲಿದೆ. ಅದರಲ್ಲೂ ಹಿರಿಯ ನಾಗರಿಕರಿಗೆ, ರೈತರಿಗೆ ಹಾಗೂ ಮಹಿಳೆಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆ ಇದೆ. ಅದರಲ್ಲೂ ಅಟಲ್ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಟಲ್ ಪಿಂಚಣಿ ಮೊತ್ತ ಹೆಚ್ಚಿಸುವ ಸಾಧ್ಯತೆ?
60 ವರ್ಷ ಮೇಲ್ಪಟ್ಟ ವೃದ್ಧರಿಗಾಗಿ ನೀಡಲ್ಪಡುವ, ಅಟಲ್ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಇದೆ, ಕಳೆದ ವರ್ಷ ಈ ಯೋಜನೆ ಆರಂಭವಾದ ನಂತರ ಸಾಕಷ್ಟು ಜನ ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಸುಮಾರು ಏಳು ಕೋಟಿಗು ಹೆಚ್ಚಿನ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಬಡ ವೃದ್ಧರು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಆರ್ಥಿಕ ಭದ್ರತೆಯನ್ನು ಪಡೆದುಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ. 60 ವರ್ಷದ ನಂತರ 1,000 ಗಳಿಂದ 5000 ವರೆಗೆ ಪಿಂಚಣಿ (Pension) ಪಡೆದುಕೊಳ್ಳುವ ಯೋಜನೆ ಇದಾಗಿದೆ.
ಕೇವಲ ಒಂದು ವರ್ಷಗಳಲ್ಲಿ ಏಳು ಕೋಟಿಗು ಹೆಚ್ಚಿನ ಜನರು ಈ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ ಅಂದ್ರೆ ಈ ಯೋಜನೆಯ ಪ್ರಯೋಜನ ಎಷ್ಟು ಉತ್ತಮವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಹೂಡಿಕೆಯ ವಿಚಾರಕ್ಕೆ ಬಂದ್ರೆ 18 ವರ್ಷ ವಯಸ್ಸಿನಲ್ಲಿ ಹೂಡಿಕೆಯನ್ನು ಆರಂಭಿಸಿದರೆ ಪ್ರತಿ ತಿಂಗಳು 42 ರೂಪಾಯಿಗಳನ್ನು ಪಾವತಿ ಮಾಡಿದರೆ ಸಾಕು ಅರವತ್ತು ವರ್ಷದ ನಂತರ ಸಾವಿರ ರೂಪಾಯಿ ಪಿಂಚಣಿಯನ್ನು ಪ್ರತಿ ತಿಂಗಳು ಪಡೆಯಬಹುದು.
ಅದೇ ರೀತಿ ರೂ.5,000 ಪ್ರತಿ ತಿಂಗಳು ಪಿಂಚಣಿ ಬೇಕು ಎಂದಾದರೆ 40 ವರ್ಷ ವಯಸ್ಸಿನಲ್ಲಿ 1,454 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇನ್ನು ಫಲಾನುಭವಿ ಮರಣ ಹೊಂದಿದ್ದರೆ ಅವನ ಅಥವಾ ಅವಳ ಸಂಗಾತಿಗೆ ಪಿಂಚಣಿ ಹಣವನ್ನು ಕೊಡಲಾಗುತ್ತದೆ.
ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಇನ್ನು ಈ ಬಾರಿ ಬಜೆಟ್ ನಲ್ಲಿ 5,000 ಮೊತ್ತವನ್ನು10,000ಕ್ಕೆ ಏರಿಕೆ ಮಾಡುವ ನಿರೀ,ಕ್ಷೆ ಇದೆ ಹಾಗಾಗಿ ನೀವು ಕೂಡ ಅಟಲ್ ಪಿಂಚಣಿ ಯೋಜನೆಯಲ್ಲಿ ಈಗಲೇ ಹೂಡಿಕೆ ಆರಂಭಿಸಿ ಆರ್ಥಿಕವಾಗಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ.
5,000 to be Replaced with 10,000, Significant Changes in Atal Pension Yojana