ಬರಿ ₹50 ಸಾವಿರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಓಡಿಸೋಕೆ ಲೈಸೆನ್ಸ್ ಕೂಡ ಬೇಕಿಲ್ಲ

ಲೈಸೆನ್ಸ್ ಇಲ್ಲದೆ ಓಡಿಸಬಹುದಾದ, RTO ನೋಂದಣಿ ಅಗತ್ಯವಿಲ್ಲದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ. ₹50,000 ರಲ್ಲಿ 120 ಕಿಮೀ ಮೈಲೇಜ್ ನೀಡುವ EVA 2025 ಬೃಹತ್ ಸೌಲಭ್ಯಗಳೊಂದಿಗೆ ಲಭ್ಯ.

  • ಲೈಸೆನ್ಸ್ ಇಲ್ಲದೆ ಓಡಿಸುವ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಳ
  • ₹50,000 ರಿಂದ ಆರಂಭವಾಗಿ ₹69,000 ವರೆಗೆ ವಿವಿಧ ಮಾದರಿಗಳು
  • 2 ವರ್ಷದ ವಾರಂಟಿ, ಡಿಜಿಟಲ್ ಡಿಸ್‌ಪ್ಲೇ, ಡೇ ಟೈಮ್ ಲೈಟ್ಸ್ ಸೌಲಭ್ಯ

ಹೊಸ ತಲೆಮಾರಿಗೆ ಲೈಸೆನ್ಸ್ ಇಲ್ಲದೆ ಓಡಿಸಬಹುದಾದ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದ್ದು, ಈ ವೆಲ್ ZELIO E Mobility ಸಂಸ್ಥೆಯು ಬಿಡುಗಡೆ ಮಾಡಿರುವ EVA 2025 ಮಾದರಿ ಸ್ಕೂಟರ್‌ ಜನರನ್ನು ಆಕರ್ಷಿಸುತ್ತಿದೆ.

2021ರಲ್ಲಿ ಸ್ಥಾಪಿತವಾದ ಈ ಕಂಪನಿಯು ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ದೇಶದಾದ್ಯಾಂತ 400ಕ್ಕೂ ಹೆಚ್ಚು ಡೀಲರ್ ಶಾಪ್‌ಗಳನ್ನು ಹೊಂದಿದೆ.

ಇದರಲ್ಲಿ ವಿಶೇಷವೆಂದರೆ ಈ ಸ್ಕೂಟರ್‌ ಅನ್ನು ಚಾಲನೆ ಮಾಡಲು ಲೈಸೆನ್ಸ್ (driving license) ಅಗತ್ಯವಿಲ್ಲ ಮತ್ತು RTO ನೋಂದಣಿಯ (registration) ತೊಂದರೆಯೂ ಇಲ್ಲ. ಗಂಟೆಗೆ ಗರಿಷ್ಠ 25 ಕಿಮೀ ವೇಗದೊಂದಿಗೆ, ಒಂದೇ ಚಾರ್ಜ್‌ನಲ್ಲಿ 120 ಕಿಮೀ ದೂರ ಸಾಗಬಲ್ಲ ಸಾಮರ್ಥ್ಯ ಈ ವಾಹನಕ್ಕಿದೆ.

ಇದನ್ನೂ ಓದಿ: ಕುರಿ ಸಾಕಾಣಿಕೆಗೆ ಬಂಪರ್ ಸಬ್ಸಿಡಿ ಯೋಜನೆ! ಖರೀದಿ, ಶೆಡ್ ನಿರ್ಮಾಣಕ್ಕೆ ನೆರವು

EVA 2025 ನಲ್ಲಿ ಲಿಥಿಯಂ-ಅಯಾನ್ ಮತ್ತು ಜೆಲ್ ಬ್ಯಾಟರಿ ಎರಡು ಮಾದರಿಗಳೂ ಲಭ್ಯವಿದ್ದು, ಲಿಥಿಯಂ 60V/30AH ಮಾದರಿಯ ಬೆಲೆ ₹64,000 ಮತ್ತು 74V/32AH ಮಾದರಿ ₹69,000. ಜೆಲ್ ಬ್ಯಾಟರಿಗಳಲ್ಲಿ 60V/32AH ₹50,000, 72V/42AH ₹54,000. ಆಧಾರಿತವಾಗಿ ಈ ಎಲ್ಲಾ ಮಾದರಿಗಳು 80 ರಿಂದ 120 ಕಿಮೀ ಮೈಲೇಜ್ ನೀಡುತ್ತವೆ.

ಸ್ಕೂಟರ್‌ಗೆ 150 mm ಗ್ಯಾಂಪ್ ಕ್ಲಿಯರೆನ್ಸ್ ಇದೆ, ಇದು ಠಿಣ ರಸ್ತೆಗಳ ಮೇಲೆ ಸಹ ಸುಲಭವಾಗಿ ಸಾಗುತ್ತದೆ. ಇದರ BLDC ಮೋಟರ್ 60/72V ಸಾಮರ್ಥ್ಯದ್ದಾಗಿದ್ದು, ಚಾರ್ಜ್‌ ಆಗಲು ಕೇವಲ 1.5 ಯೂನಿಟ್ ವಿದ್ಯುತ್ ಬಳಸುತ್ತದೆ. 85 ಕೆ.ಜಿ ತೂಕವಿರುವ ಈ ವಾಹನ 150 ಕೆ.ಜಿ.ವರೆಗೆ ಭಾರ ಸಾಗಿಸಬಲ್ಲದು, ಅಂದರೆ ಇಬ್ಬರು ಸುಲಭವಾಗಿ ಪ್ರಯಾಣಿಸಬಹುದು.

ಇದನ್ನೂ ಓದಿ: ಮದುವೆಗೆ ದುಡ್ಡು-ಬಂಗಾರ ಗಿಫ್ಟ್ ಬಂದ್ರೆ, ಅದಕ್ಕೂ ಟ್ಯಾಕ್ಸ್ ಕಟ್ಟಬೇಕಾ? ಕಾನೂನು ತಿಳಿಯಿರಿ

Zelio E Mobility Electric Scooter

ಇದರಲ್ಲಿ ಡಿಜಿಟಲ್ ಡಿಸ್‌ಪ್ಲೇ, ಡೇ ಟೈಮ್ ರನ್ನಿಂಗ್ ಲೈಟ್ (DRL), ಆಂಟಿ-ಥೆಫ್ಟ್ ಅಲಾರ್ಮ್ (anti-theft alarm), ಕೀಲೆಸ್ ಡ್ರೈವಿಂಗ್, ಪಾರ್ಕಿಂಗ್ ಗೇರ್, ಯುಎಸ್‌ಬಿ ಚಾರ್ಜಿಂಗ್ (USB charging), ಪ್ಯಾಸೆಂಜರ್ ಫುಟ್‌ರೆಸ್ಟ್ ಮುಂತಾದ ಹಲವು ಫೀಚರ್ಸ್ ಸೇರಿವೆ. ಬ್ಲೂ, ಗ್ರೇ, ವೈಟ್, ಬ್ಲಾಕ್ — ನಾಲ್ಕು ಬಣ್ಣಗಳಲ್ಲಿ ಲಭ್ಯ.

ಇದನ್ನೂ ಓದಿ: ಹೆಂಡತಿ ಹೆಸರಲ್ಲಿ ಆಸ್ತಿ ಇರೋರಿಗೆ ಶಾಕಿಂಗ್ ಸುದ್ದಿ! ಹೈಕೋರ್ಟ್ ಸಂಚಲನ ತೀರ್ಪು

ಬ್ಯಾಟರಿ ಪ್ರಕಾರ ಚಾರ್ಜಿಂಗ್ ಸಮಯ ಬದಲಾಗುತ್ತದೆ — ಲಿಥಿಯಂ-ಅಯಾನ್ ಬ್ಯಾಟರಿಗೆ 4 ಗಂಟೆ, ಜೆಲ್ ಬ್ಯಾಟರಿಗೆ 8–10 ಗಂಟೆ ಬೇಕಾಗುತ್ತದೆ. ಕಂಪನಿಯು ವಾಹನದ ಮೇಲೂ 2 ವರ್ಷ ಹಾಗೂ ಬ್ಯಾಟರಿಗಳ ಮೇಲೆ 1 ವರ್ಷದ ವಾರಂಟಿ ನೀಡುತ್ತಿದೆ.

2025ರ ಅಂತ್ಯಕ್ಕೆ 1,000 ಡೀಲರ್‌ಶಿಪ್‌ ತೆರೆಯುವ ಗುರಿಯನ್ನು ZELIO ಹೊಂದಿದ್ದು, ಕಡಿಮೆ ಬೆಲೆಯ ಈ ಸ್ಕೂಟರ್‌ಗಳಲ್ಲಿ ಬೃಹತ್ ಭವಿಷ್ಯವಿದೆ ಎನ್ನುವುದು ತಜ್ಞರ ಅಭಿಪ್ರಾಯ.

50K Electric Scooter with No License or RTO Hassle

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories