ಆಧಾರ್ ಬಿಗ್ ಅಪ್ಡೇಟ್! ಇನ್ಮುಂದೆ ಇಂತಹವರು ಆಧಾರ್ ಕಾರ್ಡ್ ಬಳಸಲು ಸಾಧ್ಯವಿಲ್ಲ
Aadhaar Card : ಭಾರತೀಯ ನಾಗರಿಕರ ಅತ್ಯಂತ ಪ್ರಮುಖ ಗುರುತಿನ ಚೀಟಿಗಳಲ್ಲಿ ಒಂದಾಗಿರುವ ಆಧಾರ್ ಕಾರ್ಡ್ (Aadhaar Card) ಗೆ ಸಂಬಂಧಪಟ್ಟ ಹಾಗೆ ಹೊಸ ಅಪ್ಡೇಟ್ ಒಂದನ್ನು ಸರ್ಕಾರ ನೀಡಿದೆ.
ಇನ್ನು ಮುಂದೆ ಆಧಾರ್ ಕಾರ್ಡ್ ಬಳಕೆ ಮಾಡಲು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
ಆಧಾರ್ ಕಾರ್ಡ್ ಇಲ್ಲದೆ ನಾವು ಯಾವ ಕೆಲಸಕ್ಕೂ ಕೂಡ ಸರಿಯಾದ ಅಡ್ರೆಸ್ ಪ್ರೂಫ್ (address proof) ನೀಡಲು ಸಾಧ್ಯವೇ ಇಲ್ಲ, ಒಬ್ಬ ವ್ಯಕ್ತಿ ತನ್ನ ಐಡೆಂಟಿಟಿಗಾಗಿ (person identity) ಆಧಾರ್ ಕಾರ್ಡ್ ಬಳಸಲೇಬೇಕು
ಶಾಲಾ-ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಹಿಡಿದು ಡ್ರೈವಿಂಗ್ ಲೈಸೆನ್ಸ್ (driving licence) ಪಾಸ್ಪೋರ್ಟ್ ಟಿಕೆಟ್ ಬುಕಿಂಗ್ ಹೀಗೆ ಪ್ರತಿಯೊಂದಕ್ಕೂ ಕೂಡ ಆಧಾರ್ ಕಾರ್ಡ್ ಎನ್ನುವುದೇ ಪ್ರಮುಖ ಆಧಾರವಾಗಿದೆ.
Study Abroad: ವಿದೇಶದಲ್ಲಿ ಓದಬೇಕು ಅನ್ನೋರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ!
ಅಧಾರ್ ಕಾರ್ಡ್ ಅಪ್ಡೇಟ್ ಬಗ್ಗೆ ಮಾಹಿತಿ! (Aadhar Card update)
ಆಧಾರ್ ಕಾರ್ಡ್ ಪಡೆದು ಎಷ್ಟು ವರ್ಷಗಳ ನಂತರವೂ ಹೆಸರು ವಿಳಾಸ ಹಾಗೂ ಮತ್ತಿತರ ಬದಲಾವಣೆಗಳನ್ನು ಜನರು ಮಾಡಿಕೊಂಡಿಲ್ಲ, ಇದರ ಜೊತೆಗೆ ಕೆವೈಸಿ (KYC) ಕೂಡ ಆಗಿಲ್ಲ
ಈ ರೀತಿ ಹಳೆಯ ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಅಪ್ಡೇಟ್ ಮಾಡಿಕೊಳ್ಳದಿದ್ದರೆ ಅಂತಹ ಆಧಾರ್ ಕಾರ್ಡ್ ಲಾಕ್ ಆಗಲಿದೆ ಎಂದು ಆಧಾರ್ ಕೇಂದ್ರದ ಉಸ್ತುವಾರಿ (ಫಾಜಿಯಾಬಾದ್) ನಿಶು ಶುಕ್ಲಾ ತಿಳಿಸಿದ್ದಾರೆ.
ವಿದೇಶಕ್ಕೆ ಹೋಗೋ ಪ್ಲಾನ್ ಇದ್ರೆ ಪ್ರಯಾಣ ವಿಮೆ ತೆಗೆದುಕೊಳ್ಳೋದು ಮರೆಯಬೇಡಿ! ಯಾಕೆ ಗೊತ್ತಾ?
ಶುಕ್ಲ ಅವರು ತಿಳಿಸಿರುವ ಪ್ರಕಾರ ಶೇಕಡಾ 60ರಷ್ಟು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಆಗಿಲ್ಲ. ಹಾಗಾಗಿ ಇಷ್ಟು ಆಧಾರ್ ಕಾರ್ಡ್ ಬಳಕೆದಾರರು ಇನ್ನು ಮುಂದೆ ಆಧಾರ್ ಕಾರ್ಡ್ ಬಳಸಲು ಸಾಧ್ಯವಿಲ್ಲ
ಆಧಾರ್ ಅಪ್ಡೇಟ್ ಮಾಡದೇ ಇದ್ರೆ ಅಂಥವರ ಕಾರ್ಡ್ ಲಾಕ್ (Aadhar lock) ಆಗುತ್ತೆ ಎಂದಿದ್ದಾರೆ. ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈಗಾಗಲೇ ತಿಳಿಸಿರುವಂತೆ ಸಾಕಷ್ಟು ಜನರ ಆಧಾರ್ ಕಾರ್ಡ್ ಹಳೆಯದಾಗಿದೆ ಇದನ್ನು ಅಪ್ಡೇಟ್ ಮಾಡಿಕೊಳ್ಳುವುದು ಬಹಳ ಮುಖ್ಯ
ಯುಪಿಐ ಜೊತೆಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವಾಗ ತಿಳಿಯಬೇಕಾದ ವಿಚಾರಗಳಿವು
ಈ ನಿಯಮ ಕಡ್ಡಾಯ ಆಗದೇ ಇದ್ದರೂ ಕೂಡ ಆಧಾರ್ ಅಪ್ಡೇಟ್ (Aadhaar Card Update) ಮಾಡಿಕೊಳ್ಳಬೇಕು, ಇಲ್ಲದೆ ಹೋದರೆ ಇತರ ಬ್ಯಾಂಕಿಂಗ್ ವ್ಯವಹಾರಗಳನ್ನು (banking transaction) ಮಾಡಿಕೊಳ್ಳಲು ಕಷ್ಟವಾಗುತ್ತದೆ. ಯಾವುದೇ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ನೀವು ಇದುವರೆಗೆ ಆಧಾರ್ ಅಪ್ಡೇಟ್ ಮಾಡಿಸಿಲ್ಲವಾದರೆ ಇದೇ ಸರಿಯಾದ ಸಮಯ ಎಂದು ಭಾವಿಸಿ. ಕೂಡಲೇ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಬೇಕಾಗಿರುವ ಬದಲಾವಣೆಗಳನ್ನು ಮಾಡಿಕೊಂಡು ಆಧಾರ್ ಅಪ್ಡೇಟ್ ಮಾಡಿಸಿ.
Aadhaar Big Update, Henceforth such people will not be able to use Aadhaar card
Our Whatsapp Channel is Live Now 👇