ಜನರಿಗೆ ಶಾಕ್! ಇದ್ದಕ್ಕಿದ್ದಂತೆ ಆಧಾರ್ ಕಾರ್ಡ್ ಅಪ್‌ಡೇಟ್ ಚಾರ್ಜ್‌ಗಳು ಹೆಚ್ಚಳ
UIDAI ಹೊಸ ಮಾರ್ಗಸೂಚಿಯಂತೆ ಆಧಾರ್ ಕಾರ್ಡ್ ವಿವರ ಬದಲಾವಣೆಗಳ ಶುಲ್ಕವನ್ನು ಹೆಚ್ಚಿಸಿದೆ. ಹೆಸರು, ವಿಳಾಸ, ಫೋಟೋ, ಫಿಂಗರ್‌ಪ್ರಿಂಟ್ ಅಪ್‌ಡೇಟ್‌ಗೆ ಈಗ ಹೆಚ್ಚು ಹಣ ಪಾವತಿಸಬೇಕು.

Aadhaar Card Update : ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಗಮನಿಸಬೇಕಾದ ಪ್ರಮುಖ ಮಾಹಿತಿ ಪ್ರಕಟಗೊಂಡಿದೆ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಆಧಾರ್ ಅಪ್‌ಡೇಟ್ ಸೇವೆಗಳ ಶುಲ್ಕವನ್ನು ಹೆಚ್ಚಿಸಿದ್ದು, ಹೊಸ ದರಗಳು ಈಗಿನಿಂದಲೇ ಅನ್ವಯವಾಗುತ್ತಿವೆ.
ಹೆಸರು, ವಿಳಾಸ ಅಥವಾ ಮೊಬೈಲ್ ನಂಬರ್ ಬದಲಾವಣೆಗಾಗಿ ಮೊದಲು ₹50 ಪಾವತಿಸಬೇಕಾಗಿತ್ತು. ಆದರೆ ಈಗ ಈ ಸೇವೆಗೆ ₹75 ನಿಗದಿಪಡಿಸಲಾಗಿದೆ.
ಫೋಟೋ ಅಥವಾ ಫಿಂಗರ್‌ಪ್ರಿಂಟ್‌ಗಳಂತಹ ಬೈಯೋಮೆಟ್ರಿಕ್ ಅಪ್‌ಡೇಟ್‌ಗಳಿಗೂ ದರ ಏರಿಕೆಯಾಗಿದೆ. ಹಿಂದೆ ಈ ಸೇವೆಗೆ ₹100 ಆಗಿದ್ದರೆ, ಈಗ ಅದು ₹125ಕ್ಕೆ ಏರಿಕೆಯಾಗಿದೆ. UIDAI ಪ್ರಕಾರ, ಸೇವಾ ವೆಚ್ಚಗಳು ಹಾಗೂ ತಂತ್ರಜ್ಞಾನ ನವೀಕರಣದಿಂದ ಈ ಬದಲಾವಣೆ ಅಗತ್ಯವಾಯಿತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಿ, 1 ಲಕ್ಷ 50 ಸಾವಿರದ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲಿ! ಭರ್ಜರಿ ಆಫರ್
ಸಾಮಾನ್ಯರಿಗೆ ಈ ಹೆಚ್ಚುವರಿ ಭಾರ ಬಂದರೂ, ಮಕ್ಕಳಿಗೆ ಕೆಲವು ಸೌಲಭ್ಯಗಳು ಉಚಿತವಾಗಿಯೇ ಮುಂದುವರಿಯುತ್ತವೆ. ಹೊಸ ಜನಿಸಿದ ಶಿಶುಗಳ ಆಧಾರ್ ನೋಂದಣಿ ಹಾಗೂ 5 ವರ್ಷ ಮತ್ತು 15 ವರ್ಷ ವಯಸ್ಸಿನಲ್ಲಿ ಮಾಡಬೇಕಾದ ಬೈಯೋಮೆಟ್ರಿಕ್ ಅಪ್‌ಡೇಟ್‌ಗಳು ಸಂಪೂರ್ಣ ಉಚಿತವಾಗಿವೆ. 5 ರಿಂದ 7 ಮತ್ತು 15 ರಿಂದ 17 ವರ್ಷದೊಳಗಿನ ಮಕ್ಕಳಿಗೂ ಇದು ಕಡ್ಡಾಯ.
ಇದರ ಜೊತೆಗೆ UIDAI ಈಗ ಮನೆಯಲ್ಲೇ ಆಧಾರ್ ಸೇವೆಗಳನ್ನು ಸಹ ನೀಡುತ್ತಿದೆ. ಆದರೆ ಇವುಗಳಿಗೂ ಹೊಸ ದರಗಳು ನಿಗದಿಯಾಗಿವೆ. ಮನೆಯಲ್ಲೇ ಆಧಾರ್ ನೋಂದಣಿ ಅಥವಾ ಅಪ್‌ಡೇಟ್ ಮಾಡಲು ಬಯಸುವವರು ಈಗ ₹700 (GST ಸೇರಿ) ಪಾವತಿಸಬೇಕಾಗುತ್ತದೆ. ಅದೇ ಮನೆದಲ್ಲಿ ಮತ್ತೊಬ್ಬ ಸದಸ್ಯರು ಸೇವೆ ಪಡೆಯುತ್ತಿದ್ದರೆ, ಪ್ರತಿ ಹೆಚ್ಚುವರಿ ಸದಸ್ಯರಿಗೆ ₹350 ಶುಲ್ಕ ವಿಧಿಸಲಾಗುತ್ತದೆ.
ಇದನ್ನೂ ಓದಿ: ಕೇವಲ ₹5,000ಕ್ಕೆ ಖರೀದಿಸಿ ಹೋಂಡಾ ಶೈನ್ 125! ಪ್ರತಿ ಲೀಟರ್‌ಗೆ 65 ಕಿ.ಮೀ. ಮೈಲೇಜ್
UIDAI ಅಧಿಕಾರಿಗಳು ನಾಗರಿಕರಿಗೆ ಈ ಹೊಸ ದರಗಳನ್ನು ಗಮನದಲ್ಲಿಟ್ಟುಕೊಂಡು ಅಪ್‌ಡೇಟ್ ಸೇವೆಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ. ಸರ್ಕಾರದ ಪ್ರಕಾರ, ಈ ಕ್ರಮದಿಂದ ಸೇವಾ ಗುಣಮಟ್ಟ ಮತ್ತು ಸುರಕ್ಷತೆ ಹೆಚ್ಚಲಿದೆ ಎಂದು ನಂಬಲಾಗಿದೆ.
Aadhaar Update Charges Increased by UIDAI




