Electric Car: ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು ಎಂಜಿ ಕಾಮೆಟ್ ಬಿಡುಗಡೆ, ಬೆಲೆ 8 ಲಕ್ಷಕ್ಕಿಂತ ಕಡಿಮೆ.. ಎರಡು ವೆರಿಯಂಟ್‌ಗಳಲ್ಲಿ ಮಾರಾಟ
MG Comet Electric Car: ಎಂಜಿ ಕಾಮೆಟ್ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು. ಈ ಕಾರು ಎರಡು ವೆರಿಯಂಟ್‌ಗಳಲ್ಲಿ ಮಾರಾಟವಾಗಲಿದೆ. ಈ ಕಾರಿನ ಬುಕಿಂಗ್ ಮೇ 15 ರಿಂದ ಪ್ರಾರಂಭವಾಗಲಿದೆ. ಇದು 2 ಬಾಗಿಲಿನ 4 ಆಸನಗಳ ಕಾರು. ಇದು ತುಂಬಾ ಕಾಂಪ್ಯಾಕ್ಟ್ ಗಾತ್ರದಲ್ಲಿ ಬರುತ್ತದೆ.
MG Comet Electric Car: MG ಮೋಟಾರ್ಸ್ ಭಾರತದಲ್ಲಿ ತನ್ನ ಎರಡನೇ ಎಲೆಕ್ಟ್ರಿಕ್ ಕಾರು MG Comet ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇದರ ಬೆಲೆ ರೂ.7.98 ಲಕ್ಷ ಎಂದು ಘೋಷಿಸಿದೆ. ಇದು ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು.
ಈ ಕಾರು ಎರಡು ವೆರಿಯಂಟ್‌ಗಳಲ್ಲಿ ಮಾರಾಟವಾಗಲಿದೆ. ಈ ಕಾರಿನ ಬುಕಿಂಗ್ ಮೇ 15 ರಿಂದ ಪ್ರಾರಂಭವಾಗಲಿದೆ. ಇದು 2 ಬಾಗಿಲಿನ 4 ಆಸನಗಳ ಕಾರು. ಇದು ತುಂಬಾ ಕಾಂಪ್ಯಾಕ್ಟ್ ಗಾತ್ರದಲ್ಲಿ ಬರುತ್ತದೆ.
ಇದರ ಉದ್ದವು 3 ಮೀಟರ್ಗಿಂತ ಕಡಿಮೆಯಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 230 ಕಿ.ಮೀ. ಪ್ರಯಾಣಿಸಬಹುದು. ಒಂದು ತಿಂಗಳ ಓಡಾಟದ ವೆಚ್ಚ ಕೇವಲ 599 ರೂ. ಎಂದು ಕಂಪನಿ ಹೇಳಿಕೊಂಡಿದೆ. ಒಂದೊಳ್ಳೆ ಬಜೆಟ್ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸಲು ಯೋಜಿಸುತ್ತಿದ್ದರೆ ಈ ಕಾರನ್ನೊಮ್ಮೆ ಪರಿಶೀಲಿಸಿ.
EV Scooter: ಬೆಂಗಳೂರು ಮೂಲದ EV ಸ್ಟಾರ್ಟ್ಅಪ್ ನಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆ!
ಕಾರು ಅದರ ವಿಶಿಷ್ಟ, ಕಾಂಪ್ಯಾಕ್ಟ್ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಇದು ಸ್ಪ್ಲಿಟ್ ಹೆಡ್‌ಲೈಟ್‌ಗಳು, ಪೂರ್ಣ LED ದೀಪಗಳು, ಸೊಗಸಾದ ಚಕ್ರಗಳು, ಎತ್ತರದ C-ಪಿಲ್ಲರ್, 2 ಬಾಗಿಲುಗಳು ಮತ್ತು ಡ್ಯುಯಲ್-ಟೋನ್ ಪೇಂಟ್‌ನೊಂದಿಗೆ ಬರುತ್ತದೆ. MG ಕಾಮೆಟ್ 2,974 mm ಉದ್ದ, 1,505 mm ಅಗಲ, 1,631 mm ಎತ್ತರವನ್ನು 2,010 mm ವ್ಹೀಲ್ ಬೇಸ್ ಹೊಂದಿದೆ.
ಈ ಕಾರಿನಲ್ಲಿ 10.25 ಇಂಚಿನ ಎರಡು ಪರದೆಗಳನ್ನು ನೀಡಲಾಗಿದೆ. ಇದು Apple iPod ಮಾದರಿಯಲ್ಲಿ ಕಂಟ್ರೋಲ್ ಬಟನ್‌ಗಳೊಂದಿಗೆ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ.
ವೈಶಿಷ್ಟ್ಯಗಳ ಪಟ್ಟಿಯು ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್, ಡಿಜಿಟಲ್ ಕೀ, ಪವರ್ ವಿಂಡೋಗಳು, ಗ್ರೇ ಇಂಟೀರಿಯರ್ ಥೀಮ್, ಲೆದರ್-ಲೇಯರ್ಡ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ.
MG ಕಾಮೆಟ್ EV 17.3 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಸಾಮಾನ್ಯ ಮನೆಯ ಸಾಕೆಟ್ ಮೂಲಕ 0-100% ರಿಂದ ಚಾರ್ಜ್ ಮಾಡಲು ಸುಮಾರು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
MG ಕಾರು 3.3 kW ಚಾರ್ಜರ್ ಹೊಂದಿದೆ. ಅಧಿಕೃತ ಮಾಹಿತಿಯ ಪ್ರಕಾರ, ಇದರ ವ್ಯಾಪ್ತಿಯು 230 ಕಿಲೋಮೀಟರ್. ಎಲೆಕ್ಟ್ರಿಕ್ ಮೋಟಾರ್ 42 ಪಿಎಸ್ ಗರಿಷ್ಠ ಶಕ್ತಿ ಮತ್ತು 110 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಮನೆಯಲ್ಲೇ ಸುಲಭವಾಗಿ ಲಭ್ಯವಿರುವ ಸಾಕೆಟ್ ಮೂಲಕ ಚಾರ್ಜ್ ಮಾಡುವ ಸೌಲಭ್ಯವಿರುವುದರಿಂದ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ನೀವು ಈ ಕಾರಿನ ಮೇಲೆ ಆಸಕ್ತಿ ಹೊಂದಿದ್ದರೆ ಬುಕ್ ಮಾಡಲು ಮೇ 15ರ ತನಕ ಕಾಯಲೇಬೇಕು.
Amazing electric car mg comet launched at the lowest price
Follow us On
Google News |