ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಸಂತಸದ ಸುದ್ದಿ, ಇನ್ಮುಂದೆ ನಿಮಗೆ ಸಿಗಲಿಗೆ ಮತ್ತೊಂದು ಹೊಸ ಸೌಲಭ್ಯ

SBI ಗ್ರಾಹಕರಿಗೆ ಇದೊಂದು ಸಂತಸದ ಸುದ್ದಿ, ಇತ್ತೀಚೆಗೆ ಮತ್ತೊಂದು ಹೊಸ ಸೌಲಭ್ಯವನ್ನು ತೆರೆಯಲಾಗಿದೆ. ಇನ್ನು ಮುಂದೆ ಗ್ರಾಹಕರು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ವಿವಿಧ ಸರ್ಕಾರಿ ಯೋಜನೆಗಳಿಗೆ (Government Schemes) ನೋಂದಾಯಿಸಿಕೊಳ್ಳಬಹುದು. ಪಾಸ್ ಬುಕ್ (Bank Pass Book) ಅಗತ್ಯವಿಲ್ಲ.
ಈ ಬಗ್ಗೆ ಪ್ರೆಸ್ ನೋಟ್ ಕೂಡ ಬಿಡುಗಡೆಯಾಗಿದೆ. ಇದು ಯಾವುದೇ ನೋಂದಣಿ (Registration) ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಮೊದಲಿಗಿಂತ ಸುಲಭವಾಗಿದೆ.
ಬ್ಯಾಂಕ್ ಇಂದ ಸಾಲ ಪಡೆದು ಇನ್ನು ಸಾಲ ಪಾವತಿ ಮಾಡದೆ ಇರುವವರಿಗೆ ಕೋರ್ಟ್ ಮಹತ್ವದ ಆದೇಶ
ಸರ್ಕಾರ ಯೋಜನೆಗಳು
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY)
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)
ಅಟಲ್ ಪಿಂಚಣಿ ಯೋಜನೆ (APY)
ಈ ಸಂದರ್ಭದಲ್ಲಿ ಎಸ್‌ಬಿಐ (State Bank Of India) ಅಧ್ಯಕ್ಷ ದಿನೇಶ್ ಖಾರಾ ಮಾತನಾಡಿ, ಆರ್ಥಿಕ ಭದ್ರತೆಗೆ ಯಾವುದೇ ಅಡೆತಡೆಗಳನ್ನು ನಿವಾರಿಸುವುದು ನಮ್ಮ ಗುರಿಯಾಗಿದೆ. ಪಾಸ್‌ಬುಕ್‌ನ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಯು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ನಾವು ಅಂದಾಜು ಮಾಡುತ್ತೇವೆ.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಒಂದು ಜೀವ ವಿಮೆಯಾಗಿದೆ (Life Insurance). 18 ರಿಂದ 50 ವರ್ಷದೊಳಗಿನ ಗ್ರಾಹಕರು ಈ ಪಾಲಿಸಿಯನ್ನು ಖರೀದಿಸಬಹುದು. ಹಣಕಾಸು ಸೇವೆಗಳ ಇಲಾಖೆಯ ವೆಬ್‌ಸೈಟ್ ಪ್ರಕಾರ ಇದು 2 ಲಕ್ಷ ರೂ.ಗಳ ನೇರ ರಕ್ಷಣೆಯನ್ನು ಹೊಂದಿದೆ.
ವಾರ್ಷಿಕ ಪ್ರೀಮಿಯಂ ರೂ. 436 ಮಾತ್ರ. ಈ ಪ್ರೀಮಿಯಂ ಅನ್ನು ವ್ಯಕ್ತಿಯ ಬ್ಯಾಂಕ್ ಖಾತೆಯಿಂದ (Bank Account) ಸ್ವಯಂಚಾಲಿತವಾಗಿ ಡೆಬಿಟ್ ಮಾಡಲಾಗುತ್ತದೆ. ಇದರಿಂದಾಗಿ ಅಪಘಾತದ ಸಂದರ್ಭದಲ್ಲಿ ಸಂತ್ರಸ್ತರಿಗೆ 2 ಲಕ್ಷ ರೂ. ತನಕ ಪರಿಹಾರ ಸಿಗುತ್ತದೆ.
Another new facility available for State Bank customers



