ಈಗಿನ ಕಾಲದಲ್ಲಿ ಖರ್ಚುಗಳು ದುಬಾರಿ ಆಗುತ್ತಿದೆ, ಹೀಗಿರುವಾಗ ಹಲವು ಕಾರಣಗಳಿಗೆ ನಾವು ಸಾಲ (Loan) ಪಡೆಯುವ ಸಂದರ್ಭ ಬರುತ್ತದೆ. ಆ ವೇಳೆ ಬೃಹತ್ ಮೊತ್ತ ಸಾಲ ಪಡೆಯಬೇಕು ಎಂದರೆ ಬ್ಯಾಂಕ್ ಮೊರೆ (Bank Loan) ಹೋಗುತ್ತೇವೆ.
ಸಾಲ ಏನೋ ಪಡೆದರು ಅದನ್ನು ವಾಪಸ್ ತೀರಿಸುವುದೇ ದೊಡ್ಡ ಸಮಸ್ಯೆ ಆಗಿಬಿಡುತ್ತದೆ. ಯಾವುದೋ ಪರಿಸ್ಥಿತಿಗೆ ಸಿಲುಕಿ ಸರಿಯಾದ ಸಮಯಕ್ಕೆ ಸಾಲ ಕಟ್ಟಲು ಸಾಧ್ಯ ಆಗದೆ ಇದ್ದಾಗ, ಬ್ಯಾಂಕ್ ಇಂದ ನೋಟಿಸ್ (Bank Notice) ಬರುತ್ತದೆ. ಅದಕ್ಕೂ ಸರಿಯಾದ ಕ್ರಮ ತೆಗೆದುಕೊಳ್ಳದೆ ಹೋದರೆ, ಸಾಲ ವಸೂಲಿ ಮಾಡಲು ಬ್ಯಾಂಕ್ ನವರು ಕ್ರಮ ತೆಗೆದುಕೊಳ್ಳುತ್ತಾರೆ.
ಈ ಬ್ಯಾಂಕ್ ಗಳಲ್ಲಿ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಸಿಗುತ್ತೆ 9% ಗಿಂತ ಹೆಚ್ಚಿನ ಬಡ್ಡಿ, ಇಂದೇ ಅರ್ಜಿ ಸಲ್ಲಿಸಿ
ಒಂದು ವೇಳೆ ಬ್ಯಾಂಕ್ ಈ ರೀತಿ ಮಾಡಿದರೆ ಅದನ್ನು ದೌರ್ಜನ್ಯ ಎಂದು ಕೂಡ ಕರೆಯುತ್ತಾರೆ. ಈ ರೀತಿ ಆದಾಗ ಜನರು ಕೋರ್ಟ್ ಗೆ ಹೋಗಿ ತಮಗೆ ರಕ್ಷಣೆ ಕೊಡಬೇಕು ಎಂದು ಕೇಳಿಕೊಳ್ಳುವುದು ಕೂಡ ಉಂಟು. ಆದರೆ ಇದೀಗ ವಕೀಲನೊಬ್ಬ ತಾನು ಬ್ಯಾಂಕ್ ಇಂದ ಸಾಲ ಪಡೆದಿದ್ದು, ಬ್ಯಾಂಕ್ ನಿಯಮಗಳಿಂದ (Bank rules) ತೊಂದರೆ ಆಗುತ್ತಿರುವ ಕಾರಣ ಬ್ಯಾಂಕ್ ಇಂದ ತನಗೆ ರಕ್ಷಣೆ ಕೊಡಬೇಕು ಎಂದು ತಾನೇ ಬ್ಯಾಂಕ್ ವಿರುದ್ಧ ಕೇಸ್ ಹಾಕಿದ್ದಾನೆ. ಕೊನೆಗೆ ಏನಾಗಿದೆ ಎಂದು ತಿಳಿಸುತ್ತೇವೆ ನೋಡಿ..
ಈ ಲಾಯರ್ ಸುಬ್ರಹ್ಮಣ್ಯೇಶ್ವರ ಕೋ ಆಪರೇಟಿವ್ ಬ್ಯಾಂಕ್ (Subrahmanyeshwara Co Operative Bank) ಇಂದ 1.50 ಕೋಟಿ ರೂಪಾಯಿ ಸಾಲ ತೆಗೆದುಕೊಂಡಿದ್ದಾರೆ, ಆದರೆ ಸರಿಯಾದ ಸಮಯಕ್ಕೆ ಇವರು ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ನವರು ಹಣ ವಸೂಲಿ ಮಾಡುವ ಕ್ರಮ ತೆಗೆದುಕೊಂಡಿದ್ದಾರೆ.
ಆ ರೀತಿ ಆಗುತ್ತಿದ್ದ ಹಾಗೆಯೇ ಈ ಲಾಯರ್ (Lawyer) ಕೋರ್ಟ್ ಗೆ ಹೋಗಿ, ಬ್ಯಾಂಕ್ ವಿರುದ್ಧ ಕೇಸ್ ಹಾಕಿದ್ದಾರೆ. ಸಾಲವನ್ನು ಒತ್ತಾಯದಿಂದ ವಸೂಲಿ ಮಾಡಲಾಗುತ್ತಿದೆ ಎಂದು ಕೇಸ್ ಹಾಕಿದ್ದು, 2002ರ ಕಾಯ್ದೆ ಆಗಿರುವ ಬಲವಂತ ವಸೂಲಿ ಕ್ರಮದ ಕೇಸ್ ಹಾಕಿ, ನ್ಯಾಯಾಲಯಕ್ಕೆ ಹೋಗಿದ್ದಾರೆ.
ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಚಿನ್ನದ ಬೆಲೆ ಭಾರೀ ಇಳಿಕೆ, ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಚಿನ್ನದ ಬೆಲೆ
ಲಾಯರ್ ತಮ್ಮ ಪರವಾಗಿ ಹೇಳಿರುವುದು ಏನು ಎಂದರೆ, ಕೋವಿಡ್ ವೇಳೆ ಕೂಡ ಬಡ್ಡಿ ಹಾಕಿದ್ದು ಆ ಸಮಯದಲ್ಲಿ ಕೂಡ ಬಡ್ಡಿ ವಿಧಿಸುವುದನ್ನು ನಿಲ್ಲಿಸಿಲ್ಲ, 3 ತಿಂಗಳ ಟೈಮ್ ಕೊಟ್ಟರೆ ಪೂರ್ತಿ ಸಾಲವನ್ನು ತೆರವು ಮಾಡಿಬಿಡಬಹುದು ಎಂದು ಹೇಳಿದ್ದಾರೆ.
ಇತ್ತ ಬ್ಯಾಂಕ್ ಪರವಾಗಿ ವಾದ ಮಾಡಿದ ಲಾಯರ್ 1.50 ಕೋಟಿ ಸಾಲವನ್ನು 2017ರಲ್ಲಿ ಪಡೆದಿದ್ದು ಅವರು ಬಡ್ಡಿ ಕಟ್ಟಿಲ್ಲ, ಬಡ್ಡಿ ಕಟ್ಟಲು 5 ತಿಂಗಳ ಸಮಯ ಕೊಟ್ಟಿದ್ದರು ಕೂಡ, ಬಡ್ಡಿ ಕಟ್ಟುವಲ್ಲಿ ಸೋತಿದ್ದಾರೆ. ಅವರಿಗೆ ಈಗಾಗಲೇ ಹಲವು ಸಾರಿ ನೋಟಿಸ್ ಕೊಡಲಾಗಿದೆ, ಮಧ್ಯಂತರ ಆದೇಶ ನೀಡಲಾಗಿದೆ ಆದರೆ ಯಾವುದೇ ಶರತ್ತನ್ನು ಅವರು ಪಾಲಿಸಿಲ್ಲ, ಅವರು ಕೊಟ್ಟಿದ್ದ ಚೆಕ್ ಕೂಡ ಬೌನ್ಸ್ ಆಗಿದೆ ಎಂದು ಬ್ಯಾಂಕ್ ಲಾಯರ್ ಹೇಳಿದ್ದಾರೆ.
ಬೆಂಗಳೂರಿನ ಹೈಕೋರ್ಟ್ (Bangalore High Court) ನಲ್ಲಿ ಜಡ್ಜ್ ಕೃಷ್ಣ ದೀಕ್ಷಿತ್ (Krishna Dixit) ಅವರ ನೇತೃತ್ವದ ಏಕಪೀಠ ಸದಸ್ಯ ಈ ಬಗ್ಗೆ ತೀರ್ಪು ನೀಡಿದೆ. ಕೇಸ್ ಹಾಕಿರುವ ಲಾಯರ್ ಗೆ ಕೊಡಗಿನಲ್ಲಿ ಆಸ್ತಿ ಇದೆ ಎನ್ನುವುದು ಸರ್ಕಾರಕ್ಕೆ ಗೊತ್ತಾಗಿದೆ. ಸಾಲ ತೀರಿಸಲು ಸಮಯ ನೀಡಿದ್ದರು ಕೂಡ, ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗಿದೆ.
ಸಾಲ ತೆಗೆದುಕೊಂಡವರು ಲಾಯರ್ (Lawyer) ಅಗಿರಬಹುದು ಅಥವಾ ಇನ್ಯಾವುದೇ ಉನ್ನತ ಹುದ್ದೆಯಲ್ಲಿ ಇರಬಹುದು ಅವರು ಸಾಲಗಾರರೆ ಆಗಿರುತ್ತಾರೆ ಅವರಿಗಾಗಿ ವಿಶೇಷವಾದ ತೀರ್ಪು ಕೊಡಲಾಗುವುದಿಲ್ಲ, ಸಾಲ ವಸೂಲಿಗೆ ಬ್ಯಾಂಕ್ ಕ್ರಮ ತೆಗೆದುಕೊಂಡರೆ ನ್ಯಾಯಾಲಯ (Court) ರಕ್ಷಣೆ ಕೊಡಲು ಆಗುವುದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
Important order of the court for who took Bank Loan and Not Re Payment of Loan
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.