ಹಳೆಯ 100 ರೂಪಾಯಿ ನೋಟುಗಳು ರದ್ದು! ಏನಿದು ವೈರಲ್ ಸುದ್ದಿಯ ಸತ್ಯಾಂಶ
100 Rupees Note : ಹಳೆಯ 100 ರೂಪಾಯಿ ನೋಟುಗಳು ನಿಜವಾಗಿಯೂ ರದ್ದಾಗಿವೆಯೇ? ಈ ಬಗ್ಗೆ ನಿಜ ಸಂಗತಿ ನೋಡೋಣ
100 Rupees Note : ಹಳೆಯ 100 ರೂಪಾಯಿ ನೋಟು ರದ್ದಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಸ್ಟ್ ವೈರಲ್ ಆಗುತ್ತಿದೆ. ಇದಲ್ಲದೆ, ಆರ್‌ಬಿಐ ಮಾರ್ಚ್ 31, 2024 ಅನ್ನು ಇದಕ್ಕೆ ಕೊನೆಯ ದಿನಾಂಕ ಎಂದು ನಿಗದಿಪಡಿಸಿರುವುದರಿಂದ ಈ ನೋಟುಗಳನ್ನು ತಕ್ಷಣವೇ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕು ಎಂದು ಉಲ್ಲೇಖಿಸಿ ವೈರಲ್ (Viral) ಮಾಡಿದ್ದು ಜನರಲ್ಲಿ ಆತಂಕ ಮೂಡಿದೆ
ಹಳೆ 100 ರೂಪಾಯಿ ನೋಟುಗಳ ಬಗ್ಗೆ ಜನರಲ್ಲಿ ಚರ್ಚೆ ಶುರುವಾಗಿದೆ. ಇದೇ ವೇಳೆ ಮತ್ತೊಬ್ಬ ಸೋಶಿಯಲ್ ಮೀಡಿಯಾ ಬಳಕೆದಾರ ಪೋಸ್ಟ್ ಮಾಡಿದ್ದು, “ಅಂಗಡಿ ಮಾಲೀಕರೊಬ್ಬರು ಹಳೆಯ 100 ರೂಪಾಯಿ ನೋಟು ತೆಗೆದುಕೊಳ್ಳುತ್ತಿಲ್ಲ, ಈ ಬಗ್ಗೆ ಯಾವುದಾದರೂ ಆದೇಶ ಹೊರಡಿಸಲಾಗಿದೆಯೇ? ಎಂದು ಪ್ರಶ್ನಿಸಿ ಆರ್‌ಬಿಐಗೆ ಟ್ಯಾಗ್ ಮಾಡಿದ್ದಾರೆ.
ಜನವರಿ 1 ರಂದು ಬ್ಯಾಂಕ್‌ಗಳಿಗೆ ರಜೆ ಇದೆಯೇ? ಅಥವಾ ಇಲ್ಲವೇ? ಇಲ್ಲಿದೆ ಮಾಹಿತಿ
ಹಳೆಯ 100 ರೂಪಾಯಿ ನೋಟುಗಳು (Indian Currency) ನಿಜವಾಗಿಯೂ ರದ್ದಾಗಿವೆಯೇ? ನೀವು ಮಾರುಕಟ್ಟೆಯಲ್ಲಿ ಈ ನೋಟು ಚಲಾವಣೆ ಮಾಡುವುದನ್ನು ನಿಲ್ಲಿಸಲಿದ್ದೀರಾ? ಈ ಬಗ್ಗೆ ನಿಜ ಸಂಗತಿ ನೋಡೋಣ.
ಮೂಲ ಹಳೆಯ 100 ರೂಪಾಯಿ ನೋಟುಗಳ ಬಗ್ಗೆ ಆರ್‌ಬಿಐ (RBI) ಯಾವುದೇ ಘೋಷಣೆ ಮಾಡಿಲ್ಲ. ಇವುಗಳನ್ನು ರದ್ದುಪಡಿಸಲು ಹೊರಟಿರುವುದು ಸುಳ್ಳು. ಈ ಬಗ್ಗೆ ಆರ್‌ಬಿಐ ಪ್ರತಿನಿಧಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಬಿದ್ದಿದೆ.
Yogesh Dayal, the spokesperson for RBI, dismissed the viral claims about the withdrawal of the old Rs 100 notes. https://t.co/sXbIBl92VC pic.twitter.com/SzSARAypZ5
— The Quint (@TheQuint) December 26, 2023
ಚಿನ್ನಾಭರಣ ಪ್ರಿಯರಿಗೆ ಕೊಂಚ ರಿಲೀಫ್! ಭಾನುವಾರವೂ ಚಿನ್ನದ ಬೆಲೆ ಸ್ಥಿರ
ಭಾರತ ಸರ್ಕಾರ ನವೆಂಬರ್ 2016 ರಲ್ಲಿ ರೂ.500 ಮತ್ತು ರೂ.1,000 ನೋಟುಗಳನ್ನು ರದ್ದುಗೊಳಿಸಿದೆ. ಈ ನೋಟುಗಳನ್ನು ರದ್ದುಗೊಳಿಸಿದ ತಕ್ಷಣವೇ ಆರ್ ಬಿಐ ಹೊಸ ರೂ.500 ನೋಟು ಹಾಗೂ ರೂ.2,000 ನೋಟುಗಳನ್ನು ಮುದ್ರಿಸಿದೆ. ಹೊಸ 100 ರೂಪಾಯಿ ನೋಟನ್ನೂ ಸಹ ಮುದ್ರಿಸಿದೆ.
https://twitter.com/anilbjpofficial/status/1740052805338181805
Are old 100 rupee notes getting cancelled, Fact Check