ಹಿರಿಯರಿಗೆ ಪ್ರತಿ ತಿಂಗಳು ₹5,000 ಪಿಂಚಣಿ! ಅರ್ಜಿ ಪ್ರಕ್ರಿಯೆ ಆರಂಭ, ಬೇಗ ಅರ್ಜಿ ಸಲ್ಲಿಸಿ

ಹಿರಿಯರಿಗೆ ಭದ್ರತೆ ಒದಗಿಸುವ ಅಟಲ್ ಪಿಂಚಣಿ ಯೋಜನೆ ಮೂಲಕ 60 ವರ್ಷ ದಾಟಿದ ನಂತರ ತಿಂಗಳಿಗೆ ₹1,000 ರಿಂದ ₹5,000 ವರಗೆ ನಿಶ್ಚಿತ ಪಿಂಚಣಿ ಸಿಗಲಿದೆ. ಅರ್ಜಿ ಪ್ರಕ್ರಿಯೆ ಸುಲಭ.

Govt Pension Scheme: ಹಿರಿಯರಿಗೆ ನಿಶ್ಚಿತ ಆದಾಯದ ಭರವಸೆಯಾಗಿ ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ (APY) ಕಾರ್ಯನಿರ್ವಹಿಸುತ್ತಿದೆ. 60 ವರ್ಷ ಪೂರೈಸಿದ ನಂತರ ತಿಂಗಳಿಗೆ ₹1,000 ದಿಂದ ₹5,000 ವರಗೆ ಖಚಿತ ಪಿಂಚಣಿ ಸಿಗುವುದರಿಂದ, ಆರ್ಥಿಕ ಭದ್ರತೆಗಾಗಿ ಇದು ಜನಪ್ರಿಯ ಯೋಜನೆಗಳಲ್ಲೊಂದು.

2015ರಲ್ಲಿ ಆರಂಭಗೊಂಡ ಈ ಯೋಜನೆ ವೃದ್ದಾಪ್ಯ ಭದ್ರತಾ ಯೋಜನೆಯಾಗಿ ಗುರುತಿಸಿಕೊಂಡಿದೆ. ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ರೈತರು, ಸ್ವಯಂ ಉದ್ಯೋಗಿಗಳು ಸೇರಿದಂತೆ ಎಲ್ಲರೂ ಇದರಲ್ಲಿ ಭಾಗವಹಿಸಬಹುದು. ಬ್ಯಾಂಕ್ ಖಾತೆಯಿಂದ ಪ್ರೀಮಿಯಂ ಸ್ವಯಂ ಕಟ್ ಆಗುವುದರಿಂದ ಪ್ರಕ್ರಿಯೆ ತೊಂದರೆ ರಹಿತ.

ಯೋಜನೆಗೆ ಸೇರಲು 18 ರಿಂದ 40 ವರ್ಷದೊಳಗಿನ ವಯಸ್ಸು ಇರಬೇಕು. ತಿಂಗಳಿಗೆ 42 ರೂಪಾಯಿಯಿಂದಲೇ ಹೂಡಿಕೆ ಪ್ರಾರಂಭಿಸಬಹುದಾದ್ದರಿಂದ ಕಡಿಮೆ ಆದಾಯವಿರುವವರಿಗೆ ಇದು ದೊಡ್ಡ ನೆರವಿನ ಯೋಜನೆ.

ಇದನ್ನೂ ಓದಿ: ಇಲ್ಲಿದೆ ಸರ್ಕಾರದಿಂದ ಹೊಸ ಗಿಫ್ಟ್! ಪ್ರತಿ ಸಿಲಿಂಡರ್‌ಗೆ ₹300 ರೂಪಾಯಿ ಸಬ್ಸಿಡಿ ಘೋಷಣೆ

ಖಾತೆದಾರರ ಮರಣದ ನಂತರ ಪಿಂಚಣಿ ನಾಮಿನಿಗೆ ವರ್ಗಾವಣೆಯಾಗುವ ವ್ಯವಸ್ಥೆಯೂ ಇದೆ. ಜೊತೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80CCD ಅಡಿಯಲ್ಲಿ ತೆರಿಗೆ ವಿನಾಯಿತಿಯೂ ದೊರಕುತ್ತದೆ.

APY ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ನಡಸಲಾಗುತ್ತಿದ್ದು, ಭವಿಷ್ಯದ ಆರ್ಥಿಕ ಭದ್ರತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಯಾವುದೇ ಅಪಾಯವಿಲ್ಲದೆ ನಿಶ್ಚಿತ ಆದಾಯ ಸಿಗುವ ಕಾರಣ, ಹೆಚ್ಚು ಜನರು ಇದಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಅರ್ಜಿ ಸಲ್ಲಿಸುವ ವಿಧಾನ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ, APY ಸೇವೆಯನ್ನು ಆಯ್ಕೆ ಮಾಡಿ, ಅಗತ್ಯ ಮಾಹಿತಿಯನ್ನು ಪೂರೈಸಿ. OTP ಮೂಲಕ ನೋಂದಣಿ ಪೂರ್ತಿಯಾಗುತ್ತದೆ.

ಆಫ್‌ಲೈನ್ ವಿಧಾನದಲ್ಲಿ ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ನೀಡಿ, ಫಾರ್ಮ್ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಪ್ರಕ್ರಿಯೆ ಸರಳವಾಗಿದ್ದು, ಬ್ಯಾಂಕ್ ಸಿಬ್ಬಂದಿ ಮಾರ್ಗದರ್ಶನ ನೀಡುತ್ತಾರೆ.

Atal Pension Yojana, Get 5,000 Monthly After 60

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories