Business News

ಮೇ 1ರಿಂದ ಎಟಿಎಂ ನಿಯಮಗಳು ಬದಲಾವಣೆ! ಶುಲ್ಕಗಳು ಭಾರೀ ಹೆಚ್ಚಳ

Atm Withdrawal Limit: ಹೋಂ ಬ್ಯಾಂಕ್ ಹೊರತು ಬೇರೆ ಎಟಿಎಂ ಬಳಕೆ ಹೆಚ್ಚು ಖರ್ಚು ತರಲಿದೆ! ಎಟಿಎಂ ವ್ಯವಹಾರಗಳಿಗೆ ಹೊಸ ದರ, ಉಚಿತ ಲಿಮಿಟ್‌ ಬಳಿಕ ಹೆಚ್ಚುವರಿ ಶುಲ್ಕ!

Publisher: Kannada News Today (Digital Media)

Atm Withdrawal Limit: ನೀವು ಎಟಿಎಂ ಬಳಸಿ ಹಣ ತೆಗೆಯುವವರಾ? ಹಾಗಾದರೆ ಮೇ 1, 2025 ರಿಂದ ಎಟಿಎಂ ನಿಯಮಗಳು ಬದಲಾಗುತ್ತಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಇದರಿಂದ ನಿಮ್ಮ ಜೇಬಿಗೆ ಹೆಚ್ಚುವರಿ ಹೊರೆ ಬೀಳಬಹುದು. ವಿಶೇಷವಾಗಿ ಇತರ ಬ್ಯಾಂಕ್ ಎಟಿಎಂ (ATM) ಬಳಸುವವರಿಗೆ ಹೊಸ ದರ ಜಾರಿಯಾಗಲಿದೆ!

ಹೌದು, ಇದುವರೆಗೆ ನೀವು ಹೋಮ್ ಬ್ಯಾಂಕ್ (Home Bank) ಹೊರತುಪಡಿಸಿ ಬೇರೆ ಎಟಿಎಂ ಬಳಸಿ ಹಣ ತೆಗೆಯಲು ₹17 ಶುಲ್ಕ ಕೊಟ್ಟಿದ್ದರೆ, ಈಗ ಅದೇ ವ್ಯವಹಾರದ ವೆಚ್ಚ ₹19 ಆಗಲಿದೆ. ಹೀಗೇ ಬಾಲೆನ್ಸ್ ಚೆಕ್ (Balance Check) ಮಾಡುವುದಕ್ಕೂ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ – ₹6 ಇರುತ್ತಿದ್ದ ದರ ₹7 ಆಗಲಿದೆ. ಅಂದರೆ, ಎಟಿಎಂ ಬಳಕೆ ಇನ್ನು ಸಸ್ತಾ ಇಲ್ಲ!

ಮೇ 1ರಿಂದ ಎಟಿಎಂ ನಿಯಮಗಳು ಬದಲಾವಣೆ! ಶುಲ್ಕಗಳು ಭಾರೀ ಹೆಚ್ಚಳ

ಇದನ್ನೂ ಓದಿ: ಏಪ್ರಿಲ್ 1ರಿಂದ ಈ ಮೊಬೈಲ್ ನಂಬರ್‌ಗಳಲ್ಲಿ UPI ಸೇವೆ ಸ್ಥಗಿತ!

ನಿಮ್ಮ ಹೋಮ್ ಬ್ಯಾಂಕ್‌ನ ಎಟಿಎಂ ಬಳಸಿ ನೀವು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 5 ಬಾರಿ ಹಣ ತೆಗೆಯಬಹುದು. ಆದರೆ ಮೆಟ್ರೋ (Metro) ನಗರಗಳ ಹೊರಗಿನ ಗ್ರಾಹಕರು ಈ ಸೌಲಭ್ಯವನ್ನು ಕೇವಲ 3 ಬಾರಿ ಮಾತ್ರ ಪಡೆಯಬಹುದು. ಇದರ ನಂತರ ಪ್ರತಿ ವಹಿವಾಟಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಈಗಾಗಲೇ ಎಟಿಎಂ ಟ್ರಾನ್ಸಕ್ಷನ್‌ ಮೇಲೆ ಬಿಗಿಯಾದ ನಿಯಮಗಳು ಇದ್ದರೂ, RBI ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊಸ ATM ಫೀಸ್ ಹೆಚ್ಚಳಕ್ಕೆ ಅನುಮೋದನೆ ನೀಡಿವೆ. ಈ ದರ ಹೆಚ್ಚಳದಿಂದ ಬ್ಯಾಂಕುಗಳ ಆದಾಯ ಹೆಚ್ಚಾಗಬಹುದು, ಆದರೆ ಗ್ರಾಹಕರಿಗೆ ಇದು ಭಾರ!

ನಿಮ್ಮ ಹಣ ಉಳಿಸಿಕೊಳ್ಳಲು ಏನು ಮಾಡಬಹುದು?

  • ಅಗತ್ಯವಿದ್ದಾಗ ಮಾತ್ರ ಎಟಿಎಂ ಬಳಸಿ, ಇತರ ಬ್ಯಾಂಕ್ ಎಟಿಎಂ ಬಳಕೆಯನ್ನು ಕಡಿಮೆ ಮಾಡಿ.
  • ನೇರ ಬ್ಯಾಂಕ್ ವರ್ಗಾವಣೆ (UPI/Net Banking) ಆಯ್ಕೆಗಳನ್ನು ಹೆಚ್ಚು ಬಳಸಿ.
  • ನಿಮ್ಮ ಉಚಿತ ವ್ಯವಹಾರ ಲಿಮಿಟ್ ಗಮನಿಸಿ, ಹೆಚ್ಚು ಹಣ ಎಟಿಎಂನಲ್ಲೇ ಹೊರತೆಗೆದರೆ ಲಾಭ.
  • ಆನ್‌ಲೈನ್ ಪೇಮೆಂಟ್ ಆಯ್ಕೆಗಳಿಂದ ಎಟಿಎಂ ಖರ್ಚು ತಪ್ಪಿಸಿ.

ATM Charges to Increase from May 1

English Summary

Our Whatsapp Channel is Live Now 👇

Whatsapp Channel

Related Stories