ಜುಲೈ 1ರಿಂದ ಬ್ಯಾಂಕಿಂಗ್, ಏಟಿಎಂ, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್!

ICICI ಹಾಗೂ HDFC ಬ್ಯಾಂಕ್‌ಗಳು ಜುಲೈ 1ರಿಂದ ತಮ್ಮ ಬ್ಯಾಂಕಿಂಗ್ ಸೇವೆಗಳ ಶುಲ್ಕಗಳಲ್ಲಿ ಬದಲಾವಣೆ ತಂದಿವೆ. ಡೆಬಿಟ್ ಕಾರ್ಡ್, ಎಟಿಎಂ, ಕ್ರೆಡಿಟ್ ಕಾರ್ಡ್ ಬಳಕೆದಾರರ ಮೇಲೆ ಇದರ ಪರಿಣಾಮ ಬೀರಲಿದೆ.

  • ICICI ಬ್ಯಾಂಕ್ IMPS ಹಾಗೂ ATM ಲಾವಾದೇವಿಗಳ ಮೇಲೆ ಶುಲ್ಕ ಹೆಚ್ಚಳ
  • HDFC Credit Card ಬಳಕೆದಾರರಿಗೆ ಹೊಸ ನಿಯಮಗಳು
  • ಎಟಿಎಂ, ಇಂಧನ, ಬಿಲ್ ಪಾವತಿ ಮೇಲೂ ಅತಿರಿಕ್ತ ಶುಲ್ಕ

ಜುಲೈ 1ರಿಂದ ಆರಂಭವಾಗುವಂತೆ ICICI ಹಾಗೂ HDFC ಬ್ಯಾಂಕ್‌ಗಳು ತಮ್ಮ ಸೇವಾ ಶುಲ್ಕಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತಿವೆ. ಇದರಿಂದಾಗಿ ಗ್ರಾಹಕರು ತಮ್ಮ ದಿನನಿತ್ಯದ ವಹಿವಾಟುಗಳ (banking transactions) ಮೇಲೆ ಹೆಚ್ಚಿನ ಹಣ ಖರ್ಚು ಮಾಡಬೇಕಾಗಲಿದೆ.

ICICI ಬ್ಯಾಂಕ್‌ನ ನಿಯಮಗಳ ಪ್ರಕಾರ, ಗ್ರಾಹಕರು ತಿಂಗಳಲ್ಲಿ ಮೂರೇ ಬಾರಿ ಉಚಿತವಾಗಿ ಎಟಿಎಂ ವಿಥ್ ಡ್ರಾ (ATM withdrawals) ಮಾಡಿಕೊಳ್ಳಬಹುದಾಗಿದೆ. ಇದಕ್ಕಿಂತ ಹೆಚ್ಚು ಹಣ ತೆಗೆಯುವಾಗ ಪ್ರತಿಯೊಂದು ಆರ್ಥಿಕ ಲಾವಾದೇವಿಗೆ ₹23 ಶುಲ್ಕ ವಿಧಿಸಲಾಗುತ್ತದೆ.

ಇದನ್ನೂ ಓದಿ: ಬರಿ ಆಧಾರ್ ಕಾರ್ಡ್ ಇದ್ರೂ ಸಾಕು, ಸಿಗುತ್ತೆ ಪರ್ಸನಲ್ ಲೋನ್! ಬೇಕಾದ್ರೆ ಟ್ರೈ ಮಾಡಿ

ಈ ಮೊದಲು ಈ ಶುಲ್ಕ ₹21 ಆಗಿತ್ತು. ಅಲ್ಲದೆ, ಬೇರೆ ಬ್ಯಾಂಕ್‌ ATM ಬಳಕೆದಾರರಿಗೆ ಈ ನಿಯಮ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

ಬ್ಯಾಂಕ್‌ನ ಮೂಲಕ ಐಎಂಪಿಎಸ್ (IMPS transfer) ಮಾಡುವ ಹಣ ವರ್ಗಾವಣೆ ಮೇಲೂ ಸುಧಾರಿತ ಶುಲ್ಕಗಳಿವೆ. ಉದಾಹರಣೆಗೆ ₹1,000 ರವರೆಗೆ ಹಣ ವರ್ಗಾವಣೆ ಮಾಡಿದರೆ ₹2.50, ₹1 ಲಕ್ಷದ ಒಳಗಾಗಿ ₹5, ₹1 ಲಕ್ಷದಿಂದ ₹5 ಲಕ್ಷದವರೆಗೆ ₹15 ವರೆಗೂ ಶುಲ್ಕ ವಿಧಿಸಲಾಗುತ್ತದೆ. ಇವೆಲ್ಲವೂ ತೆರಿಗೆಯನ್ನು ಹೊರತುಪಡಿಸಿ ಆಗಿದ್ದು, GST ಪ್ರತ್ಯೇಕವಾಗಿ ವಿಧಿಸಲಾಗುತ್ತದೆ.

ICICI ಬ್ಯಾಂಕ್‌ನಲ್ಲಿ ಹಣ ಠೇವಣಿ ಇಡುವಾಗಲೂ ಹೊಸ ಶುಲ್ಕ ವಿಧಿಸಲಿದೆ. ಡೆಬಿಟ್ ಕಾರ್ಡ್ ಬಗ್ಗೆ ಮಾತನಾಡಿದರೆ, ಸಾಮಾನ್ಯ ಕಾರ್ಡ್‌ಗೆ ₹300 ವಾರ್ಷಿಕ ಶುಲ್ಕವಿದೆ, ಗ್ರಾಮೀಣ ಪ್ರದೇಶದವರಿಗೆ ₹150.

ಇದನ್ನೂ ಓದಿ: ಪೋಸ್ಟ್ ಆಫೀಸ್‌ನಲ್ಲಿ 2 ಲಕ್ಷ ಫಿಕ್ಸೆಡ್ ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ! ಇಲ್ಲಿದೆ ಲೆಕ್ಕಾಚಾರ

Banks

ಇದನ್ನೂ ಓದಿ: ಹೊಸ ಆಸ್ತಿ ನೋಂದಣಿ ನಿಯಮ 2025, ದಾಖಲೆ ಸರಿ ಇಲ್ಲದ ಜಮೀನು ಅಮಾನ್ಯ!

ಇದರ ಜೊತೆಗೆ HDFC ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ (credit card) ನಿಯಮಗಳಲ್ಲಿ ಕೂಡ ಬದಲಾವಣೆ ತಂದಿದೆ. ನೀವು Dream11 ಅಥವಾ MPL ಪ್ಲಾಟ್‌ಫಾರ್ಮ್‌ಗಳಲ್ಲಿ ತಿಂಗಳಿಗೆ ₹10,000 ಕ್ಕಿಂತ ಹೆಚ್ಚು ವೆಚ್ಚ ಮಾಡಿದರೆ, 1% ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕದ ಗರಿಷ್ಠ ಮಿತಿಯು ₹4,999 ಆಗಿದೆ.

ಇದೆ ರೀತಿ, Paytm, Mobikwik, Ola Money ಮುಂತಾದ (wallet services) ಬಳಕೆ ಮಾಡಿದರೂ ತಿಂಗಳಿಗೆ ₹10,000 ಮೀರುತ್ತಿದ್ದರೆ 1% ಶುಲ್ಕ ತೆರಬೇಕಾಗುತ್ತದೆ. ಇನ್ನು ಮನೆ ಬಾಡಿಗೆ, ಇಂಧನ ವೆಚ್ಚ ಹಾಗೂ ಯುಟಿಲಿಟಿ ಬಿಲ್ಲುಗಳ (utility bills) ಪಾವತಿಯ ಮೇಲೂ ಹೊಸ ನಿಗದಿಯ ಪ್ರಕಾರ 1% ಅತಿರಿಕ್ತ ಶುಲ್ಕ ವಿಧಿಸಲಾಗುತ್ತದೆ.

ಇದನ್ನೂ ಓದಿ: ಇಂಟರ್‌ನೆಟ್‌ ಇಲ್ಲದೆ ಇದ್ರೂ ಯುಪಿಐ ಪೇಮೆಂಟ್ ಮಾಡೋ ಟ್ರಿಕ್ ಇಲ್ಲಿದೆ

ಗ್ರಾಹಕರು ಈ ಬದಲಾವಣೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತಾಗಿದ್ದು, ತಮ್ಮ ಬ್ಯಾಂಕಿಂಗ್ (bank charges) ವಿವರಗಳನ್ನು ಚೆಕ್ ಮಾಡಿಕೊಳ್ಳುವುದು ಅತ್ಯಂತ ಅಗತ್ಯ.

Bank Charges Revised from July 1, Debit Card, ATM, and Credit Card Users Beware

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories