Business News

ಬರಿ ಆಧಾರ್ ಕಾರ್ಡ್ ಇದ್ರೂ ಸಾಕು, ಸಿಗುತ್ತೆ ಪರ್ಸನಲ್ ಲೋನ್! ಬೇಕಾದ್ರೆ ಟ್ರೈ ಮಾಡಿ

ಆಧಾರ್‌ ಕಾರ್ಡ್‌ ಮೂಲಕ ಸೀಮಿತ ಡಾಕ್ಯುಮೆಂಟ್‌ಗಳಲ್ಲಿ ಪರ್ಸನಲ್‌ ಲೋನ್‌ ಪಡೆಯುವುದು ಇತ್ತೀಚೆಗೆ ಸುಲಭವಾಗಿದೆ. ಈ ವಿಧಾನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Publisher: Kannada News Today (Digital Media)

  • ಆಧಾರ್ ಮೂಲಕ ತಕ್ಷಣ ಲೋನ್ ಪಡೆಯುವ ಸುಲಭ ವಿಧಾನ
  • ಕೇವಲ ಮೊಬೈಲ್‌ನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ
  • ಬ್ಯಾಂಕ್‌ ಲಿಂಕ್ ಹಾಗೂ KYC ಮಾಹಿತಿ ಅವಶ್ಯಕ

Personal Loan: ಇಂದು ಸಾಲ ಪಡೆಯುವ ಪ್ರಕ್ರಿಯೆ ಒಂದು ಕಡೆ ತಲೆನೋವಾಗಿದ್ದರೆ, ಆಧಾರ್ ಕಾರ್ಡ್‌ (Aadhaar card loan) ಆಧಾರಿತ ಲೋನ್‌ಗಳು ಆ ಸಮಸ್ಯೆಗಳನ್ನು ಕಡಿಮೆ ಮಾಡಿವೆ. ಈಗಾಗಲೇ ಹಲವು ಬ್ಯಾಂಕುಗಳು, NBFC ಗಳು ಮತ್ತು ಫಿನ್ಟೆಕ್ ಸಂಸ್ಥೆಗಳು ಆಧಾರ್ ಆಧಾರಿತ ತಕ್ಷಣದ ಲೋನ್‌ಗಳನ್ನು (instant loans) ನೀಡುತ್ತಿವೆ.

ಆಧಾರ್ ಕಾರ್ಡ್‌ ಬಳಸಿ ಪರ್ಸನಲ್‌ ಲೋನ್‌ (Personal Loan) ಪಡೆಯುವುದು ಸುಲಭವಾಗಿದೆ, ಏಕೆಂದರೆ ಇದರಿಂದ ಗುರುತಿನ ಪುರಾವೆ, ವಯಸ್ಸು ಮತ್ತು ವಿಳಾಸವನ್ನು ದೃಢೀಕರಿಸಲು ಬೇರೆ ದಾಖಲೆಗಳ ಅಗತ್ಯವಿಲ್ಲ. ಕೆಲ ಹಣಕಾಸು ಸಂಸ್ಥೆಗಳು ₹10,000 ದಷ್ಟು ತಕ್ಷಣ ಲೋನ್‌ ನೀಡುತ್ತವೆ, ಉದಾ: NoBroker InstaCash, Credmudra ಹಾಗೂ ಫೋನ್ ಪೇ, ಗೂಗಲ್ ಪೇ ಸೇರಿದಂತೆ ಹಲವು ಪ್ಲಾಟ್ ಫಾರಂ ಗಳು ಈ ಸೇವೆ ಒದಗಿಸುತ್ತಿವೆ

ಇದನ್ನೂ ಓದಿ: ಇಂಟರ್‌ನೆಟ್‌ ಇಲ್ಲದೆ ಇದ್ರೂ ಯುಪಿಐ ಪೇಮೆಂಟ್ ಮಾಡೋ ಟ್ರಿಕ್ ಇಲ್ಲಿದೆ

ಈ ರೀತಿಯಲ್ಲಿ ನೀವು ಲೋನ್ ಪಡೆಯಬಹುದು:

  • ಲೆಂಡರ್ ಆಯ್ಕೆಮಾಡಿ – ಆಧಾರ್ ಆಧಾರಿತ ಲೋನ್ ನೀಡುವ ಸಂಸ್ಥೆ ಆಯ್ಕೆಮಾಡಿ
    ಆಪ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಅರ್ಜಿ ಭರ್ತಿ ಮಾಡಿ – ಆಧಾರ್ ನಂಬರ್ ಮತ್ತು ಉದ್ಯೋಗ ಮಾಹಿತಿ ನಮೂದಿಸಿ
    KYC ಪ್ರಕ್ರಿಯೆ ಪೂರ್ಣಗೊಳಿಸಿ
  • ಅರ್ಜಿ ಸಲ್ಲಿಸಿ – ಲೋನ್ ನ ಮಂಜೂರಾತಿ ನಂತರ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ

ಅರ್ಹತೆ ಏನು?

  • ವಯಸ್ಸು: ಕನಿಷ್ಟ 21 ರಿಂದ 55 ವರ್ಷ
  • ಆದಾಯ: ಕನಿಷ್ಟ ₹12,000 – ₹15,000 ತಿಂಗಳ ವೇತನ
  • ಕ್ರೆಡಿಟ್ ಸ್ಕೋರ್: ಶೇ. 700 ಕ್ಕಿಂತ ಹೆಚ್ಚು ಉತ್ತಮ
  • ಉದ್ಯೋಗ: ಖಾಸಗಿ, ಸರ್ಕಾರಿ ಅಥವಾ ಸ್ವಯಂ ಉದ್ಯೋಗಿಯೂ ಇರಬಹುದು
  • ಅನುಭವ: ಕನಿಷ್ಠ ಒಂದು ವರ್ಷ

ಇದನ್ನೂ ಓದಿ: ಪೋಸ್ಟ್ ಆಫೀಸ್‌ನಲ್ಲಿ 2 ಲಕ್ಷ ಫಿಕ್ಸೆಡ್ ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ! ಇಲ್ಲಿದೆ ಲೆಕ್ಕಾಚಾರ

Personal Loan

ಲೋನ್ ಗೆ ಬೇಕಾಗುವ ಡಾಕ್ಯುಮೆಂಟ್‌ಗಳು:

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಕೊನೆಯ 3 ತಿಂಗಳ ವೇತನ ರಸೀದಿ
  • ಬ್ಯಾಂಕ್ ಸ್ಟೇಟ್‌ಮೆಂಟ್
  • ಆರ್ಜಿ ಭರ್ತಿ ಮಾಡಿದವರಿಗೆ ಫೋಟೋ ಅಥವಾ ಸೆಲ್ಫಿ
  • ಎನ್‌ಇಆರ್‌ಇಜಿಎ ಕಾರ್ಡ್ ಅಥವಾ ಇತರ KYC ಪುರಾವೆ

ಇದನ್ನೂ ಓದಿ: ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ಫೋಟೋ ಚನ್ನಾಗಿಲ್ವಾ? ಈ ರೀತಿ ಅಪ್ಡೇಟ್ ಮಾಡ್ಕೊಳಿ

Aadhaar Card

ಲೋನ್ ಮಂಜೂರಾತಿ ಹೆಚ್ಚು ಆಗಬೇಕೆ?

  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರಲಿ
  • ಚೆನ್ನಾಗಿರುವ ಕ್ರೆಡಿಟ್ ಸ್ಕೋರ್‌ ಇರಲಿ
  • ಎಲ್ಲಾ ದಾಖಲೆಗಳನ್ನು ಸರಿಯಾಗಿ ಮತ್ತು ಸಮಯಕ್ಕೆ ಸಲ್ಲಿಸಿ
  • ಮಿತಿಯೊಳಗಿನ ಲೋನ್ ಹಾಗೂ ಇಎಂಐ ಆಯ್ಕೆಮಾಡಿ

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಹೋಲ್ಡರ್ ಮೃತಪಟ್ಟರೆ, ಸಾಲದ ಕಂತು ತೀರಿಸೋದು ಯಾರು?

ಬಡ್ಡಿದರ ಮತ್ತು ಶುಲ್ಕದ ಬಗ್ಗೆ ಎಚ್ಚರಿಕೆ

ಆಧಾರ್ ಆಧಾರಿತ ಪರ್ಸನಲ್ ಲೋನ್‌ಗಳು (Personal Loan) ಸೌಲಭ್ಯಮಯವಾದರೂ, ಇವುಗಳ ಮೇಲಿನ ಬಡ್ಡಿದರ (interest rate) ಹಾಗೂ ಇತರ ಶುಲ್ಕಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ. ಲೋನ್ ಕ್ಯಾಲ್ಕುಲೇಟರ್ ಬಳಸಿ EMI ಗಳು ಎಷ್ಟು ಬರುತ್ತದೆ ಎಂಬ ಲೆಕ್ಕಾಚಾರ ಮಾಡುವುದು ಉತ್ತಮ.

How to Get a Personal Loan Using Your Aadhaar Card

English Summary

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿ, ಚಿನ್ನದ ಬೆಲೆ (Gold Price), ಬ್ಯಾಂಕ್ ಲೋನ್ (Bank Loan) ಅಪ್ಡೇಟ್‌ಗಳು, ಪರ್ಸನಲ್ ಲೋನ್ (Personal Loan), ಫೈನಾನ್ಸ್ ಟಿಪ್ಸ್ (Finance Tips), ಮ್ಯೂಚುಯಲ್ ಫಂಡ್ಸ್ (Mutual Funds), ಇನ್ಸೂರೆನ್ಸ್ (Insurance) ಸುದ್ದಿಗಳಿಗಾಗಿ ಕನ್ನಡ ನ್ಯೂಸ್ ಟುಡೇ ತಪ್ಪದೆ ಭೇಟಿ ನೀಡಿ.

Related Stories