ಲೋನ್ ತಗೊಂಡು EMI ಕಟ್ಟಲು ಆಗುತ್ತಿಲ್ಲ ಅಂತ ಚಿಂತೆ ಬೇಡ, ಈ ಟಿಪ್ಸ್ ಫಾಲೋ ಮಾಡಿ ಸಾಕು!
ಬ್ಯಾಂಕ್ ಲೋನ್ ಪಡೆದು EMI ಕಟ್ಟಲು ಸಾಧ್ಯ ಆಗುತ್ತಿಲ್ಲವಾ? ಭಯ ಪಡದೇ ಈ ನಿಯಮಗಳನ್ನು ತಿಳಿಯಿರಿ
Bank Loan : ಮನುಷ್ಯರಿಗೆ ಹಣಕಾಸಿನ ವಿಷಯದಲ್ಲಿ ಸಮಸ್ಯೆಗಳು ಎದುರಾದಾಗ ಅವರು ಸಾಲದ ಮೊರೆ ಹೋಗುತ್ತಾರೆ. ಸುರಕ್ಷಿತವಾಗಿ ಸಾಲ ಪಡೆಯಬೇಕು ಎನ್ನುವ ಕಾರಣಕ್ಕೆ ಹೆಚ್ಚಿನ ಜನರು ಬ್ಯಾಂಕ್ ಮೊರೆ ಹೋಗುತ್ತಾರೆ. ಬ್ಯಾಂಕ್ ನಲ್ಲಿ ಹೋಮ್ ಲೋನ್ (Home Loan), ಪರ್ಸನಲ್ ಲೋನ್ (Personal Loan), ವೆಹಿಕಲ್ ಲೋನ್ (Vehicle Loan) ಹೀಗೆ ಅನೇಕ ರೀತಿಯ ಸಾಲಗಳು ಲಭ್ಯವಿದೆ. ಅವುಗಳನ್ನು ಪಡೆದು, ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ಹಾಗೆಯೇ ಸಾಲ ತೀರಿಸಲು ಪ್ರತಿ ತಿಂಗಳು ಬ್ಯಾಂಕ್ ಗೆ EMI ಪಾವತಿ ಮಾಡಬೇಕು.
ಸಾಮಾನ್ಯವಾಗಿ ಜನರು ಲೋನ್ ಪಡೆಯುವುದಕ್ಕಿಂತ ಎಲ್ಲಾ ಬ್ಯಾಂಕ್ ಗಳ ಬಗ್ಗೆ ವಿಚಾರಣೆ ನಡೆಸುತ್ತಾರೆ, ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರ ಇದೆ., ಅಂಥ ಬ್ಯಾಂಕ್ ಇಂದ ಸಾಲ ಪಡೆಯುತ್ತಾರೆ. ಸಾಲ ಏನೋ ಸುಲಭವಾಗಿ ಸಿಗುತ್ತದೆ.
ಆದರೆ ಸಾಲ ಪಡೆದ ನಂತರ ಕೆಲವೊಮ್ಮೆ ಅನಿವಾರ್ಯ ಸಮಸ್ಯೆಗಳಿಂದ EMI ಪಾವತಿ ಮಾಡಲು ಸಾಧ್ಯ ಆಗದೆ ಇರುವಂಥ ಪರಿಸ್ಥಿತಿ ಕೂಡ ಎದುರಾಗುತ್ತದೆ. ಈ ರೀತಿ ಆದಾಗ ಲೋನ್ ಪಡೆದವರಿಗೆ ಭಯ ಆಗುವುದಕ್ಕೆ ಶುರುವಾಗುತ್ತದೆ.
ಬ್ಯಾಂಕ್ ಏಜೆಂಟ್ ಗಳು ತಮಗೆ ತೊಂದರೆ ಕೊಡುವುದಕ್ಕೆ ಶುರು ಮಾಡಬಹುದು ಅಥವಾ ತಮ್ಮ ಆಸ್ತಿಯನ್ನು ಬ್ಯಾಂಕ್ ಹರಾಜಿಗೆ ತರಬಹುದು ಎನ್ನುವ ಗೊಂದಲ ಸಾಲ ಪಡೆದವರಿಗೆ ಇರುತ್ತದೆ. ಆದರೆ ನೀವು ಈ ರೀತಿ ಭಯ ಪಡುವುದು ಬೇಡ.
ಬ್ಯಾಂಕ್ ಇಂದ ನಿಮಗೆ ಅಂಥ ತೊಂದರೆಗಳು ಆಗುವುದಿಲ್ಲ, ಸಾಲದ ವಿಷಯದಲ್ಲಿ RBI ಜಾರಿಗೆ ತಂದಿರುವ ಈ ಕೆಲವು ನಿಯಮಗಳನ್ನು ನೀವು ತಿಳಿದರೆ, ಭಯ ಪಡುವ ಅಗತ್ಯವೇ ಬರುವುದಿಲ್ಲ. ಆ ನಿಯಮಗಳು ಯಾವುವು ಎಂದು ನೋಡುವುದಾದರೆ..
ನೀವು ಸಾಲ ಪಡೆದು, ಸತತವಾಗಿ 3 ತಿಂಗಳು EMI ಪಾವತಿ ಮಾಡಿಲ್ಲ ಎನ್ನುವುದಾದರೆ, ಬ್ಯಾಂಕ್ ಇಂದ ಮೊದಲು ನಿಮಗೆ ನೋಟಿಸ್ ಕೊಟ್ಟು, ಒಂದು ಅಥವಾ ಎರಡು ತಿಂಗಳು ಕಾಲಾವಕಾಶ ಕೂಡ ಕೊಡಬೇಕು. ಅಕಸ್ಮಾತ್ ನೀವು ಅದಕ್ಕೆ ಯಾವುದೇ ಉತ್ತರ ನೀಡದೇ ಹೋದರೆ, ಆಗ ಏಜೆಂಟ್ ಗಳಿಂದ ನಿಮಗೆ ಕರೆ ಮಾಡಿಸಬಹುದು ಅಥವಾ ಅವರನ್ನು ಮನೆಗೆ ಕಳಿಸಬಹುದು.
ಲೋನ್ ರಿಕವರಿ ಏಜೆಂಟ್ ಗಳು ನಿಮ್ಮ ಜೊತೆಗೆ ಉತ್ತಮವಾಗಿ ವರ್ತಿಸಬೇಕು, ನಿಮಗೆ ಬೆದರಿಕೆ ಹಾಕುವ ಹಾಗಿಲ್ಲ. ಹಾಗೆಯೇ ಮನೆಗೆ ಬರುವ ಮೊದಲು ಫೋನ್ ಮಾಡಿ, ತಿಳಿಸಿ ಬರಬೇಕು..
ಮನೆಗೆ ಬರುವುದು ಅಥವಾ ಕರೆ ಮಾಡುವುದು ಬೆಳಗ್ಗೆ 7 ಗಂಟೆ ಇಂದ ಸಂಜೆ 7 ಗಂಟೆ ಒಳಗೆ ಮಾತ್ರ ಇರಬೇಕು. ಹಾಗೆಯೇ ನಿಮ್ಮ ಆಸ್ತಿ ಹರಾಜು ಮಾಡುವ ಪರಿಸ್ಥಿತಿ ಬಂದರೆ, ಮೊದಲು ಅದನ್ನು ನಿಮಗೆ ತಿಳಿಸಬೇಕು. ನಿಮ್ಮ ಅನುಮತಿ ಇಲ್ಲದೇ ಆಸ್ತಿಯನ್ನು ಹರಾಜು ಮಾಡುವ ಹಾಗಿಲ್ಲ.
ಲೋನ್ ಮರುಪಾವತಿ ಮೊತ್ತಕ್ಕಿಂತ ಹೆಚ್ಚು ಮೊತ್ತಕ್ಕೆ ಆಸ್ತಿ ಹರಾಜಾದರೆ ಆ ಮೊತ್ತವನ್ನು ನಿಮಗೆ ಕೊಡಬೇಕು, ಹೀಗೆ ಲೋನ್ ಪಡೆಯುವವರ ವಿಷಯಕ್ಕೆ RBI ಮುಖ್ಯವಾದ ನಿಯಮಗಳನ್ನು ಜಾರಿಗೆ ತಂದಿದ್ದು, ಇದನ್ನೆಲ್ಲ ನೀವು ತಿಳಿದರೆ ಭಯ ಪಡುವ ಅಗತ್ಯ ಬರುವುದಿಲ್ಲ..
Bank Loan Recovery Rules, Know the Loan Repayment Rules