Car Loan: ಕಾರ್ ಲೋನ್ ಬೇಕಾ? ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್‌ಗಳು ಇಲ್ಲಿವೆ

Car Loan: ಕಾರ್ ಖರೀದಿಸಲು ಕಾರ್ ಲೋನ್ ಪಡೆಯಲು ಯೋಚಿಸುತ್ತಿದ್ದರೆ ಬಡ್ಡಿದರ, ಪ್ರೊಸೆಸಿಂಗ್ ಶುಲ್ಕ ಹಾಗೂ ಸಾಲ ಅವಧಿಯನ್ನು ಪರಿಶೀಲಿಸುವುದು ಮುಖ್ಯ. ಕೆಲವು ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ವಾಹನ ಸಾಲ ನೀಡುತ್ತಿವೆ.

Car Loan: ಇಂದಿನ ದಿನಗಳಲ್ಲಿ ಸೊಂತ ಕಾರು ಹೊಂದುವುದು ಹಲವರ ಕನಸಾಗಿದೆ. ಆದರೆ ಒಂದೇ ಬಾರಿ ಸಂಪೂರ್ಣ ಹಣ ನೀಡಿ ಕಾರು ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ನೀಡುವ ಕಾರು ಲೋನ್ (Car Loan) ಬಹಳ ಜನರಿಗೆ ನೆರವಾಗುತ್ತಿದೆ.

ದೇಶದ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ವಿವಿಧ ಬಡ್ಡಿದರಗಳಲ್ಲಿ ವಾಹನ ಸಾಲ ನೀಡುತ್ತಿವೆ. ಆದರೆ ಪ್ರತಿ ಬ್ಯಾಂಕ್‌ನ ಬಡ್ಡಿದರ ಮತ್ತು ಷರತ್ತುಗಳು ಬೇರೆಬೇರೆ ಆಗಿರುವುದರಿಂದ ಸಾಲ ಪಡೆಯುವ ಮೊದಲು ಸರಿಯಾಗಿ ಹೋಲಿಕೆ ಮಾಡುವುದು ಅಗತ್ಯವಾಗಿದೆ.

ಪ್ರಸ್ತುತ IDBI ಬ್ಯಾಂಕ್ ಸುಮಾರು 7.50 ಶೇಕಡಾ ಆರಂಭಿಕ ಬಡ್ಡಿದರದಲ್ಲಿ ಕಾರು ಲೋನ್ ನೀಡುತ್ತಿದೆ. ಈ ಪಟ್ಟಿಯಲ್ಲಿ ಇದು ಕಡಿಮೆ ಬಡ್ಡಿದರ ಹೊಂದಿರುವ ಆಯ್ಕೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಆದಾಗ್ಯೂ ಅಂತಿಮ ಬಡ್ಡಿದರ ಗ್ರಾಹಕರ ಕ್ರೆಡಿಟ್ ಸ್ಕೋರ್ ಮತ್ತು ಆದಾಯದ ಮೇಲೆ ಅವಲಂಬಿತವಾಗಿರುತ್ತದೆ.

ICICI ಬ್ಯಾಂಕ್ ಕೂಡ ಗ್ರಾಹಕರಿಗೆ ಸುಮಾರು 8.5 ಶೇಕಡಾ ಬಡ್ಡಿದರದಿಂದ ಕಾರು ಲೋನ್ ನೀಡುತ್ತಿದೆ. ಕ್ರೆಡಿಟ್ ಪ್ರೊಫೈಲ್ ಉತ್ತಮವಾಗಿದ್ದರೆ ಇನ್ನಷ್ಟು ಅನುಕೂಲಕರ ಷರತ್ತುಗಳು ದೊರೆಯುವ ಸಾಧ್ಯತೆಯಿದೆ.

Axis ಬ್ಯಾಂಕ್‌ನಲ್ಲಿ ಕಾರು ಸಾಲಕ್ಕೆ ಸುಮಾರು 8.95 ಶೇಕಡಾ ಆರಂಭಿಕ ಬಡ್ಡಿದರ ಇದೆ. ಬ್ಯಾಂಕ್ ಅಂತಿಮ ಬಡ್ಡಿದರವನ್ನು ಗ್ರಾಹಕರ ಆದಾಯ, ಕ್ರೆಡಿಟ್ ಸ್ಕೋರ್ ಮತ್ತು ಸಾಲ ಸಾಮರ್ಥ್ಯವನ್ನು ಗಮನದಲ್ಲಿಟ್ಟು ನಿರ್ಧರಿಸುತ್ತದೆ.

HDFC ಬ್ಯಾಂಕ್ ಕೂಡ ವಾಹನ ಸಾಲ ನೀಡುವ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಇಲ್ಲಿ ಕಾರು ಲೋನ್ ಸುಮಾರು 9 ಶೇಕಡಾ ಬಡ್ಡಿದರದಿಂದ ಆರಂಭವಾಗುತ್ತದೆ. ಗ್ರಾಹಕರ ಅರ್ಹತೆಗಳ ಪ್ರಕಾರ ಈ ದರ ಬದಲಾಗಬಹುದು.

Bandhan ಬ್ಯಾಂಕ್‌ನಲ್ಲಿ ಕಾರು ಸಾಲಕ್ಕೆ ಸುಮಾರು 9.47 ಶೇಕಡಾ ಆರಂಭಿಕ ಬಡ್ಡಿದರ ಇದೆ. ಇದು ಕೂಡ ಗ್ರಾಹಕರ ಕ್ರೆಡಿಟ್ ಪ್ರೊಫೈಲ್ ಹಾಗೂ ಅರ್ಹತೆ ಆಧರಿಸಿ ಬದಲಾಗುತ್ತದೆ.

ತಜ್ಞರ ಪ್ರಕಾರ ಕಾರು ಲೋನ್ ತೆಗೆದುಕೊಳ್ಳುವಾಗ ಕೇವಲ ಬಡ್ಡಿದರ ನೋಡದೇ ಪ್ರೊಸೆಸಿಂಗ್ ಫೀಸ್, ಸಾಲ ಅವಧಿ, ಮುಂಗಡ ಪಾವತಿ ಶುಲ್ಕ ಇತ್ಯಾದಿ ಅಂಶಗಳನ್ನೂ ಪರಿಶೀಲಿಸಬೇಕು. ಸರಿಯಾದ ಬ್ಯಾಂಕ್ ಆಯ್ಕೆ ಮಾಡಿದರೆ ಒಟ್ಟು ಸಾಲದ ವೆಚ್ಚವನ್ನು ಕಡಿಮೆ ಮಾಡಬಹುದು.

Related Stories