ಈ ತಳಿ ಮೇಕೆ ಸಾಕಾಣಿಕೆ ಮಾಡಿದ್ರೆ ಒಂದೇ ತಿಂಗಳಲ್ಲಿ ಲಕ್ಷ ಗಟ್ಟಲೆ ಆದಾಯ! ಯಾವ ತಳಿ ಗೊತ್ತಾ?
Goat Farming Details : ಈ ಮೇಕೆ ಸಾಕಣೆ ಮಾಡುವ ಮೂಲಕ ಲಕ್ಷಗಳಲ್ಲಿ ಹಣವನ್ನು ಸಂಪಾದಿಸಬಹುದು. ಹಾಗಾದರೆ ಈ ಒಂದು ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ
Goat Farming Details : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಹ ತಮ್ಮದೇ ಆದ ಒಂದು ಸ್ವಂತ ಉದ್ಯಮ ಮಾಡಿ ಹಣ ಸಂಪಾದಿಸಬೇಕು ಎಂದು ಬಯಸುತ್ತಾರೆ. ಬೇರೊಬ್ಬರ ಬಳಿ ಕೆಲಸ ಮಾಡಿ ಕೈಚಾಚಿ ನಿಲ್ಲುವುದಕ್ಕಿಂತ, ತಮ್ಮದೇ ಆದ ವ್ಯಾಪಾರ (Own Business) ಮಾಡಿ ಹಣ ಸಂಪಾದಿಸಬೇಕು ಎನ್ನುವುದು ಅನೇಕರ ಬಯಕೆ.
ಇನ್ನು ಕೆಲವರು ಇದೇ ರೀತಿ ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡಿ ದೊಡ್ಡ ಮೊತ್ತದ ಹಣವನ್ನು ಸಂಪಾದಿಸುತ್ತಿದ್ದಾರೆ. ಇನ್ನು ಇಂದಿನ ಪುಟದಲ್ಲಿ ನಾವು ನಿಮಗೆ ಈ ಒಂದು ವ್ಯಾಪಾರ ಮಾಡಿ ಲಕ್ಷಗಟ್ಟಲೆ ಹಣವನ್ನು ಸಂಪಾದಿಸುವುದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಒಮ್ಮೆ ಚಾರ್ಜ್ ಮಾಡಿದರೆ 195 ಕಿಮೀ ಗ್ಯಾರಂಟಿ! ಭಾರತದ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳು
ತಮ್ಮದೇ ಸ್ವಂತ ಉದ್ಯೋಗ ಮಾಡುವವರಿಗೆ ಇದೀಗ ಅನೇಕ ಆಯ್ಕೆಗಳು ಇದೆ, ಈ ಆಯ್ಕೆಗಳಲ್ಲಿ ಒಂದು ಮೇಕಸಾಕಣಿಕೆ. ನೀವು ಯಾವುದೇ ದೊಡ್ಡ ಮಟ್ಟದ ಹೂಡಿಕೆ ಮಾಡುವ ಅಗತ್ಯವಿಲ್ಲದೆ, ಈ ಮೇಕೆ ಸಾಕಣೆ ಮಾಡುವ ಮೂಲಕ ಲಕ್ಷಗಳಲ್ಲಿ ಹಣವನ್ನು ಸಂಪಾದಿಸಬಹುದು. ಹಾಗಾದರೆ ಈ ಒಂದು ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ…
ಇತ್ತೀಚಿನ ದಿನಗಳಲ್ಲಿ ಮಾಂಸಹಾರ ಪ್ರಿಯರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನು ಇದೆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಕುರಿ, ಕೋಳಿ ಹಾಗೆ ಮೇಕೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ.
ಕುರಿ ಮತ್ತು ಮೇಕೆಗಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ನೀವು ಈ ಒಂದು ವ್ಯಾಪಾರ ಮಾಡುವ ಮೂಲಕ ಹೆಚ್ಚಿನ ಹಣ ಗಳಿಸಬಹುದು. ನೀವು ಮೇಕೆ ಸಾಕುವ ಮೂಲಕ ಅದರ ಮಾಂಸದ ಜೊತೆಗೆ ಮೇಕೆಯ ಹಾಲನ್ನು ಸಹ ಮಾರಿ ಸಾಕಷ್ಟು ಹಣ ಸಂಪಾದಿಸಬಹುದು.
ಮೇಕೆಗಳಲ್ಲಿ ಸಹ ಕೆಲವು ರೀತಿಯ ತಳಿಗಳು ಇದ್ದು, ಇದರಲ್ಲಿ ಉತ್ತಮವಾದ ತಳಿ ಎಂದರೆ ಅದು ಬೀಟಲ್ ತಳಿ. ಹೌದು, ಏಕೆಂದರೆ ಈ ಬೀಟಲ್ ತಳಿ ಮೇಕೆ ಪ್ರತಿದಿನ ಸುಮಾರು 4 ರಿಂದ 5 ಲೀಟರ್ ಹಾಲನ್ನು ನೀಡುವ ಸಾಮರ್ಥ್ಯ ಹೊಂದಿದೆ.
ಇನ್ನು ಮಾರುಕಟ್ಟೆಯಲ್ಲಿ ಹಸುವಿನ ಹಾಲಿಗಿಂತ ಮೇಕೆಯ ಹಾಲಿಕೆ ಬೇಡಿಕೆ ಹೆಚ್ಚು, ಹಾಗೆ ಇದರ ದರ ಕೂಡ ಹಸುವಿನ ಹಾಲಿಗಿಂತ ಹೆಚ್ಚಿದೆ. ಅಲ್ಲದೆ ಈ ತಳಿಯ ಮೇಕೆಯ ತೂಕ ಸುಮಾರು 90 ರಿಂದ 110 ಕೆಜಿ ಇರುತ್ತದೆ.
ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿ! ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ಕೊಂಚ ಬ್ರೇಕ್ ಬಿದ್ದಿದೆ
ಈ ತಿಳಿಯ ಮೇಕೆಯ ಮಾಂಸದ ಗುಣ ಮಟ್ಟ ಸಹ ಅದ್ಭುತವಾಗಿದ್ದು, ಮಾರುಕಟ್ಟೆಯಲ್ಲಿ ಈ ಮೆಕೆಗೆ ವಿಶೇಷವಾಗಿ ಬೇಡಿಕೆ ಇದೆ ಎಂದರೆ ತಪ್ಪಾಗುವುದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಈ ಬೀಟಲ್ ತಳಿ ಮೇಕೆಯ ಬೆಲೆ ಸುಮಾರು 30 ಸಾವಿರ ಇದೆ.
ಬೀಟಲ್ ತಳಿ ಮೇಕೆಯನ್ನು ಹೆಚ್ಚಾಗಿ ನಾವು ಪಂಜಾಬ್ ರಾಜ್ಯದಲ್ಲಿ ನೋಡಬಹುದು. ಇನ್ನು ರಾಜ್ಯದ ಅನೇಕ ವ್ಯಾಪಾರಸ್ಥರು ಪಂಜಾಬ್ ನಿಂದ ಈ ತಳಿಯ ಮೇಕೆಗಳನ್ನು ತರಿಸಿಕೊಂಡು, ಸಾಕುವ ಮೂಲಕ ಲಕ್ಷಗಳಲ್ಲಿ ಲಾಭವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಈ ಮೇಕೆ ಸಾಕಾಣಿಕೆ ಉದ್ಯಮ ಒಂದು ಅದ್ಭುತ ಆಯ್ಕೆಯಾಗಿದೆ ಎಂದರೆ ತಪ್ಪಾಗುವುದಿಲ್ಲ.
Beetal Goat Farming Details with Income