ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸಕಾಲ! ಇಲ್ಲಿದೆ ಮನೆ ಭಾಗ್ಯ ಸಾಲ ಸೌಲಭ್ಯ
ಹೋಮ್ ಲೋನ್ (Housing Loan) ತೆಗೆದುಕೊಳ್ಳಲು ಈಗ ಸೂಕ್ತ ಸಮಯ! ಇತ್ತೀಚೆಗೆ ಬ್ಯಾಂಕುಗಳು ಹೌಸಿಂಗ್ ಲೋನ್ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದ್ದು, ನಿಮ್ಮ ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಲು ಇದು ಉತ್ತಮ ಅವಕಾಶ.
- ಬ್ಯಾಂಕುಗಳು ಹೋಮ್ ಲೋನ್ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿವೆ.
- EMI ಪಾವತಿಸುವವರು ಮತ್ತು ಹೊಸದಾಗಿ ಲೋನ್ ತೆಗೆದುಕೊಳ್ಳುವವರಿಗೆ ಲಾಭ.
- RBI ಹೊಸ ನಿರ್ಧಾರದಿಂದ ಲೋನ್ ಪಡೆಯುವುದು ಹೆಚ್ಚು ಲಾಭದಾಯಕ.
Home Loan : ಹೋಮ್ ಲೋನ್ ಪಡೆದು ಸ್ವಂತ ಮನೆ ಕಟ್ಟಿಕೊಳ್ಳಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ಇದಕ್ಕಿಂತ ಒಳ್ಳೆಯ ಸಮಯ ಬೇರೆ ಇಲ್ಲ!🏡 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ರೆಪೋ ರೇಟ್ ಅನ್ನು ಇತ್ತೀಚೆಗೆ 6.50% ನಿಂದ 6.25% ಗೆ ಇಳಿಸಿದೆ.
ದೇಶದ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ನಿರ್ದೇಶನಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಅದು ತೆಗೆದುಕೊಳ್ಳುವ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ರೆಪೊ ದರ ಕಡಿತದಿಂದಾಗಿ ಎಲ್ಲಾ ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ತಕ್ಷಣವೇ ಕಡಿಮೆ ಮಾಡಿವೆ. ಇದರಿಂದ ಸಾಲ (Home Loan) ಪಡೆಯುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಈಗಾಗಲೇ ಸಾಲ ಪಡೆದು ಮಾಸಿಕ ಕಂತುಗಳನ್ನು ಪಾವತಿಸುತ್ತಿರುವವರಿಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ಎಸ್‌ಬಿಐ ಬಂಪರ್ ಸ್ಕೀಮ್, 500 ರೂಪಾಯಿ ಕಟ್ಟಿದ್ರೆ ನಿಮ್ಮ ಕಿಸೆಗೆ ಸೇರುತ್ತೆ 10 ಲಕ್ಷ
ಇದರ ಪರಿಣಾಮವಾಗಿ ಬಹುತೇಕ ಬ್ಯಾಂಕುಗಳು ತಮ್ಮ ಹೌಸಿಂಗ್ ಲೋನ್ (Housing Loan) ಬಡ್ಡಿದರವನ್ನು ಕಡಿಮೆ ಮಾಡಿವೆ. ನಿಮ್ಮ EMI ಕಂನ್ಟ್ರೋಲ್ (EMI Control) ಮಾಡುವುದೋ, ಇಲ್ಲವೇ ಹೊಸ ಲೋನ್ ತೆಗೆದುಕೊಳ್ಳುವುದೋ, ಈ ಹೊಸ ಬದಲಾವಣೆ ನಿಮಗೆ ನಿಜಕ್ಕೂ ಲಾಭಕರ!
ಹೌಸಿಂಗ್ ಲೋನ್ ತೆಗೆದುಕೊಳ್ಳುವ ಮುನ್ನ ನಿಮ್ಮ ಬ್ಯಾಂಕ್ ಯಾವ ಬಡ್ಡಿದರಕ್ಕೆ ಲೋನ್ ನೀಡುತ್ತಿದೆ ಎಂಬುದನ್ನು ಪರಿಶೀಲಿಸಿ. ಹಲವು ಸಾರ್ವಜನಿಕ (Public) ಮತ್ತು ಖಾಸಗಿ (Private) ಬ್ಯಾಂಕುಗಳು ತಮ್ಮ ಬಡ್ಡಿದರವನ್ನು ಹೊಸದಾಗಿ ಪರಿಷ್ಕರಿಸಿವೆ.
ಪ್ರಮುಖ ಬ್ಯಾಂಕುಗಳ ಬಡ್ಡಿದರ ವಿವರಗಳು
- SBI: 8.25% – 9.40%
- Bank of Baroda: 8.40% – 10.65%
- Canara Bank: 8.15% – 10.90%
- ICICI Bank: 8.75%
- HDFC Bank: 8.70%
- Axis Bank: 8.75% – 9.65%
ಇದನ್ನೂ ಓದಿ: ಹಳೆಯ ಲೋನ್ ತೀರಿಸೋಕೆ ಹೊಸ ಲೋನ್ ತಗೊಂಡ್ರೆ ಏನಾಗುತ್ತೆ ಗೊತ್ತಾ?
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಬಡ್ಡಿದರಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 8.25 ರಿಂದ 9.40 ಪ್ರತಿಶತ, ಬ್ಯಾಂಕ್ ಆಫ್ ಬರೋಡಾದಲ್ಲಿ 8.40 ರಿಂದ 10.65 ಪ್ರತಿಶತ, ಯೂನಿಯನ್ ಬ್ಯಾಂಕ್‌ನಲ್ಲಿ 8.10 ರಿಂದ 10.65 ಪ್ರತಿಶತ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 8.15 ರಿಂದ 9.90 ಪ್ರತಿಶತ, ಬ್ಯಾಂಕ್ ಆಫ್ ಇಂಡಿಯಾದಲ್ಲಿ 8.30 ರಿಂದ 10.85 ಪ್ರತಿಶತ..
ಕೆನರಾ ಬ್ಯಾಂಕ್‌ನಲ್ಲಿ 8.15 ರಿಂದ 10.90 ಪ್ರತಿಶತ, ಯುಕೋ ಬ್ಯಾಂಕ್‌ನಲ್ಲಿ 8.30 ರಿಂದ 10.90 ಪ್ರತಿಶತ, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 8.10 ರಿಂದ 10.90 ಪ್ರತಿಶತ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ 8.35 ರಿಂದ 9.85 ಪ್ರತಿಶತ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 8.15 ರಿಂದ 10.75 ಪ್ರತಿಶತ ಮತ್ತು ಇಂಡಿಯನ್ ಬ್ಯಾಂಕ್‌ನಲ್ಲಿ 8.15 ರಿಂದ 9.55 ಪ್ರತಿಶತದಷ್ಟು ಬಡ್ಡಿದರ ವಿಧಿಸಲಾಗುತ್ತದೆ.
ಇದನ್ನೂ ಓದಿ: ನಿಮ್ಮದು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ಯಾ? ತಕ್ಷಣ ಈ ಕೆಲಸ ಮಾಡಿ
ನಿಮ್ಮ ಬಡ್ಡಿದರ ಕಡಿಮೆಯಾಗಲು ಈ ಹೊಸ ನಿಯಮಗಳು ಅನ್ವಯವಾಗುತ್ತವೆ. ಫ್ಲೋಟಿಂಗ್ (Floating) ಬಡ್ಡಿದರ ಹೊಂದಿರುವ ಹೌಸಿಂಗ್ ಲೋನ್ ಹೊಂದಿದ್ದರೆ, ನಿಮ್ಮ EMI ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ. ಸ್ಥಿರ (Fixed) ಬಡ್ಡಿದರ ಹೊಂದಿದ್ದರೆ, ಹೊಸ ಲೋನ್ (Home Loan) ಆಪ್ಷನ್ ಬಗ್ಗೆ ಯೋಚಿಸಿ.
ಲೋನ್ ಮೊತ್ತ ಕಡಿಮೆ ಬಡ್ಡಿದರದಲ್ಲಿ ಪಡೆಯಲು ಈ ಸಮಯವನ್ನು ಬಿಟ್ಟುಕೊಡಬೇಡಿ. ನಿಮ್ಮ ಸೊಂತ ಮನೆ ಕನಸು ಈಗ ನನಸಾಗಿಸುವ ಸಮಯ!
Best Time to Buy a House with Low Interest Home Loan
Our Whatsapp Channel is Live Now 👇