ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಅಲರ್ಟ್! ಸ್ವಲ್ಪ ಯಾಮಾರಿದರೂ ಖಾತೆ ಖಾಲಿ

Credit Card: ಡಿಜಿಟಲ್ ಪಾವತಿ ಹೆಚ್ಚಾಗುತ್ತಿದ್ದಂತೆ ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳೂ ಜಾಸ್ತಿಯಾಗಿವೆ. ಸಣ್ಣ ನಿರ್ಲಕ್ಷ್ಯದಿಂದಲೇ ಕಾರ್ಡ್ ಖಾತೆ ಖಾಲಿಯಾಗುವ ಅಪಾಯ ಇರುವುದರಿಂದ ಬಳಕೆದಾರರು ಎಚ್ಚರಿಕೆಯಿಂದಿರಬೇಕು.

  • ಕ್ರೆಡಿಟ್ ಕಾರ್ಡ್ ವಂಚನೆ ಹೆಚ್ಚಳ, ಸೈಬರ್ ಅಪಾಯ ಗಂಭೀರ
  • ಉಚಿತ Wi-Fi, ಪೆಟ್ರೋಲ್ ಬಂಕ್‌ಗಳಲ್ಲಿ ಕಾರ್ಡ್ ಬಳಕೆ ಅಪಾಯಕರ
  • ಅಲರ್ಟ್, ಪಿನ್ ಭದ್ರತೆ ಇದ್ದರೆ ಹಣ ಸುರಕ್ಷಿತ

Credit Card: ಡಿಜಿಟಲ್ ಪಾವತಿಗಳ ಬಳಕೆ ದಿನೇದಿನೇ ಹೆಚ್ಚಾಗುತ್ತಿರುವ ನಡುವೆಯೇ, ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳು ಆತಂಕಕಾರಿ ಮಟ್ಟಕ್ಕೆ ಏರುತ್ತಿವೆ. ಸೌಲಭ್ಯಕ್ಕಾಗಿ ಬಳಸುವ ಕಾರ್ಡ್‌ಗಳೇ, ಅಜಾಗರೂಕತೆಯಿಂದ ಖಾತೆ (Bank Account) ಖಾಲಿಯಾಗುವಂತೆ ಮಾಡುತ್ತಿರುವ ಉದಾಹರಣೆಗಳು ಇತ್ತೀಚೆಗೆ ಹೆಚ್ಚಾಗಿವೆ.

ಸಾಮಾನ್ಯವಾಗಿ ಪೆಟ್ರೋಲ್ ಬಂಕ್‌, ಹೋಟೆಲ್‌, ರೆಸ್ಟೋರೆಂಟ್‌, ಎಟಿಎಂ ಕೇಂದ್ರಗಳಲ್ಲಿ ಕಾರ್ಡ್ ಅನ್ನು ಇತರರ ಕೈಗೆ ಕೊಡುವುದು ದೊಡ್ಡ ಅಪಾಯವಾಗಬಹುದು. ಕ್ಷಣಮಾತ್ರದಲ್ಲಿ ಕಾರ್ಡ್ ವಿವರಗಳನ್ನು ನಕಲಿಸುವ ಸಾಧ್ಯತೆ ಇದ್ದು, ನಂತರ ಅದನ್ನೇ ಬಳಸಿ ಹಣ ಕಸಿದುಕೊಳ್ಳಲಾಗುತ್ತಿದೆ ಎಂಬುದು ಹಲವು ತನಿಖೆಗಳಿಂದ ಬಹಿರಂಗವಾಗಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಆಕಾಶಕ್ಕೆ! ಕೈಮೀರಿದ ಬೆಂಗಳೂರು ಮಾರುಕಟ್ಟೆ ಟ್ರೆಂಡ್, ಇಲ್ಲಿದೆ ಗೋಲ್ಡ್ ರೇಟ್ ಅಪ್ಡೇಟ್

ಉಚಿತ Wi-Fi ಮತ್ತು ಅನಧಿಕೃತ ವೆಬ್‌ಸೈಟ್‌ಗಳು ಅಪಾಯಕಾರಿ

ಉಚಿತ Wi-Fi ನೆಟ್‌ವರ್ಕ್ ಬಳಸಿಕೊಂಡು ಆನ್‌ಲೈನ್ ಪಾವತಿ ಮಾಡುವುದು, ಅಥವಾ ಪರಿಚಯವಿಲ್ಲದ ವೆಬ್‌ಸೈಟ್‌, ಗೇಮಿಂಗ್ ಆ್ಯಪ್‌, ಥರ್ಡ್ ಪಾರ್ಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾರ್ಡ್ ವಿವರ ನಮೂದಿಸುವುದು ಸೈಬರ್ ಅಪರಾಧಿಗಳಿಗೆ ದಾರಿ ಮಾಡಿಕೊಡುತ್ತದೆ.

ಫೇಕ್ ಲಿಂಕ್‌, ಇಮೇಲ್‌, ವೆಬ್‌ಸೈಟ್‌ಗಳ ಮೂಲಕ ಬಳಕೆದಾರರನ್ನು ಮರುಳು ಮಾಡಿ ಕಾರ್ಡ್ ನಂಬರ್‌, CVV, ಪಾಸ್‌ವರ್ಡ್ ಪಡೆಯಲಾಗುತ್ತಿದೆ.

ಸ್ಪೈವೇರ್‌, ಮಾಲ್ವೇರ್ ಮೂಲಕವೂ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಿಂದ ಕಾರ್ಡ್ ಮಾಹಿತಿಯನ್ನು ಕದ್ದುಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. ಬಹುತೇಕ ಸಂದರ್ಭಗಳಲ್ಲಿ ಖಾತೆಯಿಂದ ಹಣ ಕಡಿಮೆಯಾದ ನಂತರವೇ ವಂಚನೆ ಗೊತ್ತಾಗುತ್ತದೆ.

ಇದನ್ನೂ ಓದಿ: ಕಡಿಮೆ ಬೆಲೆ, ಹೆಚ್ಚು ಮೈಲೇಜ್: ಬಡವರ ಬಂಡಿ ಅಂತಲೇ ಫೇಮಸ್ ಆಗಿರುವ ಬೈಕ್ ಇದು

ಹಣ ರಕ್ಷಿಸಲು ಏನು ಮಾಡಬೇಕು?

ಪ್ರತಿ ಕ್ರೆಡಿಟ್ ಕಾರ್ಡ್ (Credit Card) ಬಳಕೆದಾರರೂ ವ್ಯವಹಾರ ಅಲರ್ಟ್‌ಗಳನ್ನು ಕಡ್ಡಾಯವಾಗಿ ಆನ್ ಮಾಡಿಕೊಳ್ಳಬೇಕು. ತಿಂಗಳ ಸ್ಟೇಟ್‌ಮೆಂಟ್ ಅನ್ನು ಗಮನದಿಂದ ಪರಿಶೀಲಿಸುವುದು ಬಹಳ ಮುಖ್ಯ. ಯಾವುದೇ ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ ತಕ್ಷಣವೇ ಬ್ಯಾಂಕ್‌ಗೆ ಮಾಹಿತಿ ನೀಡಬೇಕು.

ಕಾರ್ಡ್ ಪಿನ್‌, ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅವುಗಳನ್ನು ಸಮಯಕಾಲಕ್ಕೆ ಬದಲಾಯಿಸುವುದು ಉತ್ತಮ. ಪಬ್ಲಿಕ್ ಕಂಪ್ಯೂಟರ್‌ಗಳು, ಉಚಿತ Wi-Fi ಬಳಸಿ ಕಾರ್ಡ್ ವಿವರ ನಮೂದಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ನಿಮ್ಮ ಕಣ್ಣಮುಂದೆಯೇ ಕಾರ್ಡ್ ಸ್ವೈಪ್ ಆಗುವಂತೆ ನೋಡಿಕೊಳ್ಳುವುದೂ ಅಗತ್ಯ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories