UPI Lite ಬಳಕೆದಾರರನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರಿಗೂ ಅನುಕೂಲ ಆಗುವ ಹಾಗೆ, UPI ಗೆ ಹೊಸ ಸೇವೆ ಒಂದನ್ನು ಸೇರಿಸಲು ಮುಂದಾಗಿದೆ RBI
ಭಾರತದಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನ ಶುರು ಆದಾಗಿನಿಂದ ಹೆಚ್ಚಿನ ಜನರು UPI ಬಳಕೆ ಮಾಡುತ್ತಿದ್ದಾರೆ. ಹಣಕಾಸಿನ ವಹಿವಾಟುಗಳನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇದೀಗ UPI ಬಳಕೆದಾರರಿಗೆ RBI ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ನಮಗೆಲ್ಲ ಗೊತ್ತಿರುವ ಹಾಗೆ ಈ ಬಾರಿ ಕೂಡ RBI Repo Rate ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಬ್ಯಾಂಕ್ ಗಳಲ್ಲಿನ (Banks) ಬಡ್ಡಿದರ ಏರಿಕೆ ಆಗದ ಹಾಗೆ ಮಾಡಿದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನೀವು ಹೂಡಿಕೆ ಮಾಡೋ ಹಣಕ್ಕೆ ಸಿಗಲಿದೆ 10 ಲಕ್ಷ ರೂಪಾಯಿ!
ಹೌದು, RBI ಇಂದ ರೆಪೋ ರೇಟ್ ಏರಿಕೆ ಆಗದೇ ಇರುವುದು ಇದು 8ನೇ ಬಾರಿ ಆಗಿದೆ. ಸಾಮಾನ್ಯ ಜನರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು RBI ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಬಡ್ಡಿದರ ಏರಿಕೆ ಆಗುವ ಆತಂಕ ಜನರಿಗೆ ಇಲ್ಲ.
ಅದರ ಜೊತೆಗೆ ಈಗ ಮತ್ತೊಂದು ಸಂತೋಷದ ಸುದ್ದಿಯನ್ನು UPI ಗ್ರಾಹಕರಿಗೆ ನೀಡಲಾಗುತ್ತಿದೆ. UPI Lite ಬಳಕೆದಾರರನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರಿಗೂ ಅನುಕೂಲ ಆಗುವ ಹಾಗೆ, UPI ಗೆ ಹೊಸ ಸೇವೆ ಒಂದನ್ನು ಸೇರಿಸಲು ಮುಂದಾಗಿದೆ RBI..
ಚಿನ್ನದ ಬೆಲೆ ಕ್ರಮೇಣ ಇಳಿಕೆ, ಶನಿವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತ; ಇಲ್ಲಿದೆ ಫುಲ್ ಡೀಟೇಲ್ಸ್
UPI Lite ಗೆ ಹೊಸ ಸೇವೆ
UPI Lite ಅನ್ನು 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಲಾಂಚ್ ಮಾಡಲಾಯಿತು. ಈ ಆಪ್ ಮೂಲಕ UPI ಪಾವತಿ ಮಾಡಿದರೆ ಅದರ ಪ್ರಕ್ರಿಯೆ ಸುಲಭವಾಗಿರುತ್ತದೆ. ಈ ಪ್ರಕ್ರಿಯೆ ಇನ್ನಷ್ಟು ಸುಲಭ ಆಗಿರಲಿ ಎಂದು RBI ಹೊಸ ಫೀಚರ್ ಅನ್ನು UPI ಗೆ ಸೇರಿಸುತ್ತಿದೆ. ಇದರಿಂದ ಹಣಕಾಸು ಕಳಿಸುವ ಪ್ರಕ್ರಿಯೆ ಇನ್ನಷ್ಟು ಸುಲಭ ಆಗಲಿದೆ.
ಉಚಿತ ಆಧಾರ್ ಅಪ್‌ಡೇಟ್‌ಗೆ ಮತ್ತೊಮ್ಮೆ ಗಡುವು ವಿಸ್ತರಣೆ! ಲಾಸ್ಟ್ ಡೇಟ್ ಯಾವಾಗ ಗೊತ್ತಾ?
ಈ ಬದಲಾವಣೆ ಎಲ್ಲರಿಗೂ ಉತ್ತಮ ಸಪೋರ್ಟ್ ಆಗಲಿದೆ, e mandate ನ ಅಡಿಯಲ್ಲಿ ಹೊಸ ಬದಲಾವಣೆ ತರಲಾಗುತ್ತಿದೆ. ಇದರ ಅನುಸಾರ ಯಾರ ಬಳಿ ನಿಗದಿ ಆಗಿರುವ ಮಿನಿಮಮ್ ಬ್ಯಾಲೆನ್ಸ್ ಗಿಂತ ಕಡಿಮೆ ಮೊತ್ತ ಇದೆಯೋ, ಅಂಥವರಿಗೆ UPI Lite Wallet ಇಂದ ಆಟೊಮ್ಯಾಟಿಕ್ ಆಗಿ ಹಣ ಕ್ರೆಡಿಟ್ ಆಗುತ್ತದೆ.
ಹೊಸ ಸೇವೆಯ ವೈಶಿಷ್ಟ್ಯತೆ
ಈ ಹೊಸ ಸೇವೆ e mandate ನ ಅನುಸಾರ UPI ವ್ಯಾಲೆಟ್ ಗೆ ಆಟೊಮ್ಯಾಟಿಕ್ ಸೌಲಭ್ಯ ನೀಡುತ್ತಿದೆ. ಒಂದು ವೇಳೆ ನಿಮ್ಮ ಬ್ಯಾಲೆನ್ಸ್ ಕಡಿಮೆ ಆಗಿ, ಮಿನಿಮಮ್ ಬ್ಯಾಲೆನ್ಸ್ (Minimum Balance) ಮಿತಿಗಿಂತ ಕಡಿಮೆ ಮೊತ್ತಕ್ಕೆ ಇಳಿದರೆ, ಯುಪಿಐ ಲೈಟ್ ವ್ಯಾಲೆಟ್ ಅದನ್ನು ಆಟೊಮ್ಯಾಟಿಕ್ ಆಗಿ ಭರ್ತಿ ಮಾಡುತ್ತದೆ. ಈಗಿನ ನಿಯಮದ ಅನುಸಾರ ಯುಪಿಐ ವ್ಯಾಲೆಟ್ ನಲ್ಲಿ 2000 ವರೆಗು ಹಣ ಇಟ್ಟುಕೊಳ್ಳಬಹುದು, ಹಾಗೆಯೇ ಒಂದು ವಹಿವಾಟಿಗೆ 500 ರೂಪಾಯಿವರೆಗೂ ಖರ್ಚು ಮಾಡಬಹುದು.
ಯಾವುದೇ ಬ್ಯಾಂಕ್ ಎಟಿಎಂ ಬಳಕೆದಾರರಿಗೆ ಬಿಗ್ ಅಲರ್ಟ್! ಇನ್ಮುಂದೆ ಪಾವತಿಸಬೇಕು ಹೆಚ್ಚಿನ ಶುಲ್ಕ
ಈ ಹೊಸ ಸೌಲಭ್ಯದ ಅನುಸಾರ ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ನ ಬ್ಯಾಲೆನ್ಸ್ (Bank Balance) ಕಡಿಮೆಯಾದರೆ, ನೀವು ಮೊತ್ತವನ್ನು ಕ್ರೆಡಿಟ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಆಟೊಮ್ಯಾಟಿಕ್ ಆಗಿ ಹಣ ಲೋಡ್ ಆಗುತ್ತದೆ. ಈ ಒಂದು ಸೇವೆಯಿಂದ ಗ್ರಾಹಕರಿಗೆ ಹೆಚ್ಚು ಅನುಕೂಲ ಆಗಲಿದೆ. ಸುಲಭವಾಗಿ UPI ವಹಿವಾಟು ನಡೆಸಬಹುದು. RBI ಇಂಥದ್ದೊಂದು ಸೇವೆಯನ್ನು ಜನರಿಗಾಗಿ ನೀಡುತ್ತಿದೆ.
Big Update For Google Pay, PhonePe UPI users with More benefits