Business News

ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್! ಅರ್ಜಿ ಸಲ್ಲಿಸಿ

Free Gas Connection : ನಮ್ಮ ದೇಶಕ್ಕೆ 3ನೇ ಬಾರಿ ಪಿಎಮ್ ಆಗಿ ಆಯ್ಕೆ ಆಗಿರುವ ನರೇಂದ್ರ ಮೋದಿ ಅವರು, ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಡಜನರಿಗೆ ಅನುಕೂಲ ಅಗುವಂಥ ಯೋಜನೆಗಳನ್ನು ಜಾರಿಗೆ ತರುತ್ತಿರುವ ಮೋದಿ ಅವರು ಇದೀಗ ಮತ್ತೊಂದು ಹೊಸ ಯೋಜನೆಯನ್ನು ಜನರಿಗಾಗಿ ತಂದಿದ್ದಾರೆ. ಈ ಒಂದು ಸೌಲಭ್ಯ ಪಡೆಯಲು ನಿಮ್ಮ ಬಳಿ ಸರ್ಕಾರದಿಂದ ಕೊಡಲಾಗಿರುವ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಒಂದಿದ್ದರೆ ಸಾಕು. ಯಾವುದು ಗೊತ್ತಾ ಈ ಹೊಸ ಯೋಜನೆ?

ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್, ಜೂನ್ 17 ರಂದು ಬ್ಯಾಂಕ್ ಗಳು ಬಂದ್! ಕಾರಣ ಇಲ್ಲಿದೆ ತಿಳಿಯಿರಿ

In this scheme, the price of a gas cylinder is only 500 rupees, Apply today

ಜನರಿಗೆ ಹೊಸ ಯೋಜನೆ

ನಮ್ಮ ದೇಶದಲ್ಲಿ ಹಳ್ಳಿಯಲ್ಲಿ ವಾಸ ಮಾಡುವ ಜನರು ಸಾಕಷ್ಟಿದ್ದಾರೆ. ಅವರೆಲ್ಲರ ಬಳಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಇರುವುದಿಲ್ಲ. ಬಹಳಷ್ಟು ಜನರು ಇಂದಿಗೂ ಕೂಡ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ, ಆ ಹೊಗೆ ಮತ್ತು ಕಷ್ಟದಲ್ಲಿ ಅಡುಗೆ ಮಾಡುವುದು ಸುಲಭದ ವಿಷಯವಂತು ಅಲ್ಲ. ಹಾಗಾಗಿ ಅಂಥ ಜನರಿಗೆ ಮೋದಿ ಅವರ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಅವರಿಗೆ ಮೋದಿ ಅವರ ಸರ್ಕಾರದಿಂದ ಸಹಾಯ ಸಿಗಲಿದ್ದು ಉಚಿತವಾಗಿ ಗ್ಯಾಸ್ ಸ್ಟವ್ ಹಾಗೂ ಸಿಲಿಂಡರ್ (Gas Cylinder) ಸಿಗಲಿದೆ.

ಉಜ್ವಲಾ ಯೋಜನೆ

ಪಿಎಮ್ ಮೋದಿ ಅವರು ಪಿಎಮ್ ಉಜ್ವಲಾ ಯೋಜನೆಯನ್ನು 2016ರಲ್ಲಿ ಜಾರಿಗೆ ತಂದರು, ಈ ಒಂದು ಯೋಜನೆಯ ಮೂಲಕ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಬಡ ಕುಟುಂಬದ ಜನರಿಗೆ ಬಹಳ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ (Gas Stove) ಗಳನ್ನು ಪೂರೈಕೆ ಮಾಡಲಾಗುತ್ತದೆ. ಇದರಿಂದ ಜನರು ಒಲೆಯಲ್ಲಿ ಕಷ್ಟಪಟ್ಟು ಅಡುಗೆ ಮಾಡುವುದು ಕೂಡ ತಪ್ಪುತ್ತದೆ. ಸರ್ಕಾರದ ಈ ಸೌಲಭ್ಯವನ್ನು ನೀವು ಸಹ ಪಡೆದುಕೊಳ್ಳಬಹುದು.

ಲಕ್ಷಾಂತರ ಗ್ರಾಹಕರಿಗೆ ರಾತ್ರೋ-ರಾತ್ರಿ ಶಾಕ್ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ! ಏನು ಗೊತ್ತಾ?

Gas Cylinderಗ್ಯಾಸ್ ಸಿಲಿಂಡರ್ ಹಣಕ್ಕೆ ಸಬ್ಸಿಡಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರಿಗೆ ಅನುಕೂಲಗಳನ್ನು ಮಾಡಿಕೊಡುತ್ತಿದ್ದು, ಈಗ ಅವರು ಅಧಿಕಾರಕ್ಕೆ ಬಂದ ನಂತರ ಉಜ್ವಲಾ ಯೋಜನೆ ಮತ್ತೆ ಶುರುವಾಗುತ್ತಿದೆ. ಈ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್ ಕೊಡುವುದರ ಜೊತೆಗೆ ಅವುಗಳ ಮೇಲೆ ಸಬ್ಸಿಡಿ ಕೂಡ ಸಿಗುತ್ತಿದೆ. ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 300 ರೂಪಾಯಿಗಳ ಸಬ್ಸಿಡಿ ಸಿಗಲಿದ್ದು, ಕೇವಲ 500 ರೂಪಾಯಿಗೆ ನೀವು ಸಿಲಿಂಡರ್ ಪಡೆಯಬಹುದು. ಮುಂಬರುವ ವರ್ಷಗಳಲ್ಲಿ ಸಬ್ಸಿಡಿ ಹಣ ಇನ್ನು ಜಾಸ್ತಿಯಾಬಹುದು.

ಕಡಿಮೆ ಬಡ್ಡಿಗೆ ಗೋಲ್ಡ್ ಲೋನ್ ಬೇಕು ಅನ್ನೋದಾದ್ರೆ ಇಷ್ಟು ಮಾಡಿ ಸಾಕು! ಮಹತ್ವದ ಮಾಹಿತಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ನೀವು ಈ ಯೋಜನೆಯ ಸೌಲಭ್ಯ ಪಡೆಯಲು ಬಯಸಿದರೆ, ನಿಮ್ಮ ಹತ್ತಿರ ಇರುವ ಬೆಂಗಳೂರು ಒನ್, ಗ್ರಾಮ ಒನ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಮೊಬೈಲ್ ನಲ್ಲಿಯೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಬೇಕಿರುವ ಪ್ರಮುಖ ದಾಖಲೆ ಬಿಪಿಎಲ್ ರೇಷನ್ ಕಾರ್ಡ್, ಅದನ್ನು ಹೊರತುಪಡಿಸಿ, ಇನ್ನುಳಿದ ದಾಖಲೆಗಳನ್ನು ನೀವು ನೀಡಿ ಅರ್ಜಿ ಸಲ್ಲಿಸಬಹುದು.

BPL ration card Holder will get free gas cylinder and stove

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories