ಸಿಹಿ ಸುದ್ದಿ! ಸರ್ಕಾರವೇ ಕೊಡುವ 2 ಲಕ್ಷದಿಂದ ಈ ಉದ್ಯಮ ಆರಂಭಿಸಿ, ತಿಂಗಳಿಗೆ 50 ಸಾವಿರ ಗಳಿಸಿ
ಜನರಿಗೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಸಂಪಾದನೆ ಮಾಡಬೇಕು ಎಂದು ಆಸೆ ಇರುತ್ತದೆ. ಈ ರೀತಿ ಬಿಸಿನೆಸ್ ಮಾಡಬೇಕು ಎನ್ನುವ ಐಡಿಯಾ (Business Idea) ನಿಮಗೂ ಇದ್ದರೆ, ಇಂದು ನಿಮಗೆ ಒಳ್ಳೆಯ ಐಡಿಯಾ ನೀಡುತ್ತೇವೆ.
ಈಗಿನ ಕಾಲದಲ್ಲಿ ಅದರಲ್ಲೂ ಕೋವಿಡ್ ಸೋಂಕಿನ ಸಮಸ್ಯೆ ಶುರುವಾದ ನಂತರ ಹೆಚ್ಚಿನ ಜನರು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ತಾವೇ ಸ್ವಂತ ಬಿಸಿನೆಸ್ (Own Business) ಮಾಡಿ ಉತ್ತಮವಾಗಿ ಹಣ ಗಳಿಸಬೇಕು ಎಂದು ಬಯಸುತ್ತಾರೆ.
ಸ್ವಂತ ಬಿಸಿನೆಸ್ ಇಂದ ಒಳ್ಳೆಯ ಲಾಭವನ್ನು (Best Income) ಸಹ ಪಡೆಯಬಹುದು. ಜನರಿಗೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಸಂಪಾದನೆ ಮಾಡಬೇಕು ಎಂದು ಆಸೆ ಇರುತ್ತದೆ. ಈ ರೀತಿ ಬಿಸಿನೆಸ್ ಮಾಡಬೇಕು ಎನ್ನುವ ಐಡಿಯಾ (Business Idea) ನಿಮಗೂ ಇದ್ದರೆ, ಇಂದು ನಿಮಗೆ ಒಳ್ಳೆಯ ಐಡಿಯಾ ನೀಡುತ್ತೇವೆ. ಇದು ಸರ್ಕಾರವೇ ನಿಮಗಾಗಿ ಕೊಡುತ್ತಿರುವ ಅವಕಾಶ.
ಇದು Generic Medicine ಗೆ ಸಂಬಂಧಿಸಿದ ಬಿಸಿನೆಸ್ ಆಗಿದೆ. ಸುಲಭವಾಗಿ ಹೇಳಬೇಕು ಎಂದರೆ, ಜನೌಷಧಿ ಕೇಂದ್ರ. ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೇಂದ್ರ, ಇಲ್ಲಿ ಎಲ್ಲರಿಗೂ ಆರೋಗ್ಯಕ್ಕೆ ಸಹಾಯ ಆಗುವ ಹಾಗೆ ಕಡಿಮೆ ಬೆಲೆಯಲ್ಲಿ ಔಷಧಿಗಳು ಸಿಗುತ್ತದೆ.
ನಿಮ್ಮ ಆಧಾರ್ ಕಾರ್ಡ್ ಈ ರೀತಿ ಇದ್ದರೆ, ಈಗಲೇ ಸೈಬರ್ ಸೆಂಟರ್ ಗೆ ಹೋಗಿ! ಸರ್ಕಾರದ ಹೊಸ ರೂಲ್ಸ್
ಸಾಮಾನ್ಯ ಜನರಿಗೆ ಸಹಾಯ ಆಗುವ ಕೇಂದ್ರವಿದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನೌಷಧಿ ಕೇಂದ್ರ ಇದಾಗಿದ್ದು 2024ರ ಒಳಗೆ 10,000 ಕೇಂದ್ರಗಳ ಸ್ಥಾಪನೆ ಆಗಬೇಕು ಎಂದು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇದರಿಂದ ಜನರಿಗೆ ಬಿಸಿನೆಸ್ ಮಾಡುವ ಅವಕಾಶ ಸಿಗಲಿದೆ, ಆದರೆ ಜನೌಷಧಿ ಕೇಂದ್ರ ಶುರು ಮಾಡುವುದಕ್ಕೆ ನೀವು B Pharma ಅಥವಾ D Pharma ಓದಿರಬೇಕು.
ಇದು PMJAY ಯೋಜನೆಯಲ್ಲಿ ನೀವು ಜನೌಷಧಿ ಕೇಂದ್ರ ಸ್ಥಾಪಿಸಬಹುದು. ಇದಕ್ಕೆ ಕೆಲವು ಅರ್ಹತೆ ನಿಯಮವಿದೆ, SC/ST ಹಾಗೂ ಅಂಗವಿಕಲರಿಗೆ ಈ ಕೇಂದ್ರ ಶುರು ಮಾಡುವ ಅವಕಾಶವನ್ನು ಸರ್ಕಾರ ಕೊಡಲಿದ್ದು, ಜನೌಷಧಿ ಕೇಂದ್ರಕ್ಕೆ ಬೇಕಿರುವ ಔಷಧಿಗಳ ಖರೀದಿಗೆ ಕೇಂದ್ರ ಸರ್ಕಾರವೇ 50,000 ರೂಪಾಯಿ ಹಣ ಒದಗಿಸಿಕೊಡುತ್ತದೆ.
ಇಲ್ಲಿ ಮುಖ್ಯವಾದ ವಿಚಾರ ಏನು ಎಂದರೆ, ಈ ಜನೌಷಧಿ ಕೇಂದ್ರವನ್ನು ನೀವು ನಿಮ್ಮ ಹೆಸರಲ್ಲಿ ಅಥವಾ ಮನೆಯವರ ಹೆಸರಲ್ಲಿ ಶುರುಮಾಡುವ ಹಾಗಿಲ್ಲ, ಪಿಎಮ್ ನರೇಂದ್ರಮೋದಿ ಅವರ ಹೆಸರಲ್ಲೇ ಶುರು ಮಾಡಬೇಕು.
ಸರ್ಕಾರವೇ ಕೊಡುತ್ತೆ ದುಡ್ಡು! ಅಡುಗೆ ಮನೆಯಿಂದಲೇ ಲಕ್ಷ ಲಕ್ಷ ಸಂಪಾದಿಸಿ.. ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ
ಈ ಜನೌಷಧಿ ಕೇಂದ್ರ ಶುರುಮಾಡುವವರು ಯಾರು ಎನ್ನುವುದಕ್ಕೆ ಸರ್ಕಾರ 3 ಕ್ಯಾಟಗರಿ ಮಾಡಿದೆ, ಮೊದಲನೆಯದು.. ರಿಜಿಸ್ಟರ್ ಮಾಡಿಸಿಕೊಂಡು ಕೆಲಸವಿಲ್ಲದ ಫಾರ್ಮಸಿಸ್ಟ್, ಡಾಕ್ಟರ್ ಗಳು, ಮೆಡಿಕಲ್ ಪ್ರಾಕ್ಟೀಸ್ ಮಾಡುತ್ತಿರುವವರು.
ಎರಡನೆಯ ಕ್ಯಾಟಗರಿ NGO Trust ಅಥವಾ ಆಸ್ಪತ್ರೆಗಳು. ಮೂರನೆಯ ಕ್ಯಾಟಗರಿ ರಾಜ್ಯ ಸರ್ಕಾರಕ್ಕೆ ಸೇರಿದ ಏಜೆನ್ಸಿಗಳು. ಸರ್ಕಾರದ ಸಹಾಯದಿಂದ ಶುರು ಮಾಡುವ ಈ ಬ್ಯುಸಿನೆಸ್ ನಲ್ಲಿ ನಿಮಗೆ ಒಳ್ಳೆಯ ಲಾಭ ಬರುತ್ತದೆ.
ನೀವು ಸೇಲ್ ಮಾಡುವ ಪ್ರಾಡಕ್ಟ್ ಗಳ ಮೇಲೆ 20% ನಿಮಗೆ ಸಿಗುತ್ತದೆ.. ಜೊತೆಗೆ ಸರ್ಕಾರವು ನಿಮಗೆ 15% ಹೆಚ್ಚು ಆದಾಯ ಕೊಡುತ್ತದೆ. ಇದು ಇನ್ಸೆನ್ಟಿವ್ ರೀತಿ ಇರುತ್ತದೆ.
ಈ ಬಿಸಿನೆಸ್ ಶುರುಮಾಡಲು ಬೇಕಾಗುವ ಉಪಕರಣಗಳು, ಹಾಗೂ ಬೇರೆ ವಸ್ತು ಖರೀದಿಸಲು ಇದೆಲ್ಲದಕ್ಕೂ ಸರ್ಕಾರವೇ ₹1,50,000 ರೂಪಾಯಿ ಕೊಡುತ್ತದೆ. ಇನ್ನು ಕಂಪ್ಯೂಟರ್ ಪ್ರಿಂಟರ್ ಇದೆಲ್ಲದಕ್ಕೂ ₹50,000 ಕೊಡುತ್ತದೆ.
ಈ ಜನೌಷಧಿ ಕೇಂದ್ರ ಶುರು ಮಾಡಲು ಮೊದಲು ನಿಮ್ಮ ಹತ್ತಿರ Retail Drug License ಇರಬೇಕು, ಇದಕ್ಕಾಗಿ ನೀವು https://janaushadhi.gov.in/ ಈ ವೆಬ್ಸೈಟ್ ಗೆ ಭೇಟಿ ನೀಡಿ, ಫಾರ್ಮ್ ಡೌನ್ಲೋಡ್ ಮಾಡಿ, ಅರ್ಜಿ ಭರ್ತಿ ಮಾಡಿದ ನಂತರ Bureau of Pharma Public Sector Undertaking of India ದ ಜೆನೆರಲ್ ಮ್ಯಾನೇಜರ್ ಗೆ ಕಳಿಸಬೇಕು. ಇಲ್ಲಿ ಒಪ್ಪಿಗೆ ಸಿಕ್ಕರೆ ಜನೌಷಧಿ ಕೇಂದ್ರ ಶುರು ಮಾಡಬಹುದು.
Business Idea To Start Your Own Business, Finance Supporting By Government
Follow us On
Google News |