ಕೆನರಾ ಬ್ಯಾಂಕ್ನಲ್ಲಿ ₹50 ಲಕ್ಷ ಹೋಮ್ ಲೋನ್ಗೆ ಬಡ್ಡಿ, EMI ಎಷ್ಟಾಗುತ್ತೆ! ಇಲ್ಲಿದೆ ಲೆಕ್ಕಾಚಾರ
ಕಡಿಮೆ ಬಡ್ಡಿದರಕ್ಕೆ ಲೋನ್ ಪಡೆಯಲು ಹುಡುಕುತ್ತಿದ್ದೀರಾ? ಕೆನರಾ ಬ್ಯಾಂಕ್ ಇದೀಗ ಹೋಮ್ ಮತ್ತು ವೆಹಿಕಲ್ ಲೋನ್ಗಳ ಬಡ್ಡಿದರ ಕಡಿತ ಮಾಡಿದ್ದು, ಗ್ರಾಹಕರಿಗೆ ಗುಡ್ ನ್ಯೂಸ್.

- ರೆಪೋ ರೇಟು ಕಡಿಮೆಯಿಂದ EMI ಇಳಿಕೆ
- ಕೆನರಾ ಬ್ಯಾಂಕ್ ಹೋಮ್ ಮತ್ತು ಕಾರ್ ಲೋನ್ಗಳ ಬಡ್ಡಿದರ ಇಳಿಕೆ
- 7.40% ರಿಂದ ಹೊಸ ಲೋನ್ ಪ್ಲಾನ್ ಆರಂಭ
2025ರ ಜೂನ್ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ರೆಪೋ ದರವನ್ನು 0.50% ಇಳಿಸಿ 5.50% ಕ್ಕೆ ತಲುಪಿದೆ. ಈ ನಿರ್ಧಾರದಿಂದ ಹಲವಾರು ಬ್ಯಾಂಕುಗಳು ತಮ್ಮ ಲೋನ್ (loan) ಬಡ್ಡಿದರಗಳನ್ನು ಪರಿಷ್ಕರಿಸುತ್ತಿದ್ದು, EMI ತಗ್ಗಿಸುವ ಪ್ರಯತ್ನದಲ್ಲಿ ಇದ್ದಾರೆ.
ಇದನ್ನೆ ಅನುಸರಿಸಿ, ಕೆನರಾ ಬ್ಯಾಂಕ್ (Canara Bank) ತನ್ನ ಹೋಮ್ ಲೋನ್ (home loan) ಮತ್ತು ವೆಹಿಕಲ್ ಲೋನ್ (vehicle loan)ಗಳ ಬಡ್ಡಿದರಗಳನ್ನು ಕಡಿತ ಮಾಡಿಕೊಂಡಿದೆ.
ಹೊಸದಾಗಿ ಲೋನ್ ಪಡೆಯುವವರಿಗೆ ಇದು ಲಾಭದಾಯಕ ಮಾಹಿತಿ. ಜೂನ್ 12ರಿಂದ ಈ ಹೊಸ ದರಗಳು ಪ್ರಾರಂಭವಾಗಿವೆ.
ಇದನ್ನೂ ಓದಿ: ಬಜೆಟ್ ಬಂಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೀರೋ ಕಂಪನಿ ಸಜ್ಜು
ಕೆನರಾ ಬ್ಯಾಂಕ್ ತನ್ನ ರೆಪೋ ಲಿಂಕ್ ಲೆಂಡಿಂಗ್ ರೇಟ್ (RLLR) ಅನ್ನು 8.75% ಇಂದ 8.25% ಗೆ ಇಳಿಸಿದೆ. ಇದರಿಂದಾಗಿ ಹೋಮ್ ಲೋನ್ ಬಡ್ಡಿದರ 7.90% ನಿಂದ 7.40% ಗೆ ತಲುಪಿದ್ದು, ಕಾರ್ ಲೋನ್ಗಳ (Car Loan) ದರ 8.20% ರಿಂದ 7.70% ಆಗಿದೆ.
ಉದಾಹರಣೆಗೆ, 20 ವರ್ಷಗಳ ಅವಧಿಗೆ ₹50 ಲಕ್ಷದ ಹೋಮ್ ಲೋನ್ ತೆಗೆದುಕೊಂಡರೆ, ಈಗ EMI ₹39,974.48 ಆಗುತ್ತದೆ. ಇದಕ್ಕೂ ಮುಂಚೆ ₹41,511.36 ಆಗಿತ್ತು. ಪ್ರತಿ ತಿಂಗಳು ₹1,536.88 ಉಳಿಯಲಿದೆ.
ಇದನ್ನೂ ಓದಿ: ದಿನಕ್ಕೆ ₹333 ರೂಪಾಯಿ ಈ ಯೋಜನೆಯಲ್ಲಿ ಇಟ್ರೆ, ₹17 ಲಕ್ಷ ನಿಮ್ಮ ಕೈ ಸೇರುತ್ತೆ!
ಇದೇ ರೀತಿ, ಇತರ ಸಾರ್ವಜನಿಕ ಬ್ಯಾಂಕುಗಳು ಕೂಡ ಬಡ್ಡಿದರ ಇಳಿಕೆಗೆ ಮುಂದಾಗಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಬ್ಯಾಂಕ್ ಆಫ್ ಇಂಡಿಯಾ ತಮ್ಮ RLLR ದರವನ್ನು 8.85% ಇಂದ 8.35% ಕ್ಕೆ ಇಳಿಸಿದ್ದರೆ, ಬ್ಯಾಂಕ್ ಆಫ್ ಬರೋಡಾ 8.15% ಗೆ ತಂದಿದೆ.
ಇದನ್ನೂ ಓದಿ: ಬಡ್ಡಿಯೇ 30 ಸಾವಿರ ಸಿಗೋ ಪೋಸ್ಟ್ ಆಫೀಸ್ ಸ್ಕೀಮ್! ಮಹಿಳೆಯರಿಗೆ ಬಂಪರ್ ಕೊಡುಗೆ
ಹೊಸ ಬಡ್ಡಿದರ ಸೌಕರ್ಯಗಳೊಂದಿಗೆ, ಗ್ರಾಹಕರು ಮೂರು ಸಾಲ ಆಯ್ಕೆಗಳನ್ನು ನೋಡಬಹುದು:
- ಫ್ಲೋಟಿಂಗ್ ರೇಟ್ ಲೋನ್ (floating rate loan): ಮಾರುಕಟ್ಟೆ ಸ್ಥಿತಿಗತಿಯ ಮೇರೆಗೆ ಬಡ್ಡಿ ಬದಲಾಗುತ್ತದೆ.
- ರೆಪೋ ಲಿಂಕ್ಡ್ ಲೋನ್ (repo linked loan): RBI ದರ ಬದಲಾಗಿದಂತೆ EMI ಕೂಡ ಬದಲಾಗುತ್ತದೆ.
- ಫಿಕ್ಸ್ಡ್ ರೇಟ್ ಲೋನ್ (fixed rate loan): ಸ್ಥಿರ EMI ಇಚ್ಛಿಸುವವರಿಗೆ ಸೂಕ್ತವಾದ ಆಯ್ಕೆ.
ಗ್ರಾಹಕರಿಗೆ ತಮ್ಮ ಹಣಕಾಸು ಪರಿಸ್ಥಿತಿಗೆ ತಕ್ಕಂತೆ ಆಯ್ಕೆ ಮಾಡುವ ಅವಕಾಶವಿದೆ. ಕಡಿಮೆ ಬಡ್ಡಿದರದಿಂದಾಗಿ ಮನೆ, ಕಾರು ಖರೀದಿ ಕನಸು ಸಾಕಾರಗೊಳ್ಳಲು ಉತ್ತಮ ಅವಕಾಶ ನಿರ್ಮಾಣವಾಗಿದೆ.
Canara Bank cuts interest rates for home, vehicle loans




