Petrol Diesel Price: ವಾಹನ ಸವಾರರಿಗೆ ನಿರಾಳ ಸುದ್ದಿ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ!

Story Highlights

Petrol Diesel Price: ವಾಹನ ಸವಾರರಿಗೆ ಶುಭ ಸುದ್ದಿ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಈ ವಿಚಾರವಾಗಿ ಕೇಂದ್ರ ಪೆಟ್ರೋಲಿಯಂ ಸಚಿವರು ಪ್ರಮುಖ ಪ್ರತಿಕ್ರಿಯೆ ನೀಡಿದ್ದಾರೆ.

Petrol Diesel Price: ವಾಹನ ಸವಾರರಿಗೆ ಶುಭ ಸುದ್ದಿ. ಪೆಟ್ರೋಲ್, ಡೀಸೆಲ್ ಬೆಲೆ (Petrol Diesel Rates) ಇಳಿಕೆಯಾಗುವ ಸಾಧ್ಯತೆ ಇದೆ. ಈ ವಿಚಾರವಾಗಿ ಕೇಂದ್ರ ಪೆಟ್ರೋಲಿಯಂ ಸಚಿವರು ಪ್ರಮುಖ ಪ್ರತಿಕ್ರಿಯೆ ನೀಡಿದ್ದಾರೆ.

ಬೈಕ್, ಸ್ಕೂಟರ್, ಕಾರು ಹಾಗೂ ಇತರೆ ವಾಹನಗಳನ್ನು ಓಡಿಸುವವರಿಗೆ ಇಂದು ನಿರಾಳ ಸುದ್ದಿ. ಇಂಧನ ದರಗಳು ಕಡಿಮೆಯಾಗುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆಯಾಗುವ ನಿರೀಕ್ಷೆ ಇದೆ. ವಾಹನ ಸವಾರರು ನಿಟ್ಟುಸಿರುವ ಬಿಡುವ ದಿನಗಳು ಸನ್ನಿಹಿತವಾಗಿದೆ.

ಇಂಧನ ದರಗಳ ಕುರಿತು ಕೇಂದ್ರ ಸಚಿವರು ಪ್ರಮುಖ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಕುರಿತು ಪೆಟ್ರೋಲಿಯಂ ಸಚಿವರು ಮಹತ್ವದ ಘೋಷಣೆ ಮಾಡಿದ್ದಾರೆ. ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ಸೂಚನೆಗಳಿವೆ.

ಚಿನ್ನದ ಬೆಲೆ ಭಾನುವಾರ ದಿಢೀರ್ ಇಳಿಕೆ ಕಂಡಿದ್ದು ಇಂದು ಚಿನ್ನ ಬೆಳ್ಳಿ ಖರೀದಿಸುವವರಿಗೆ ಬಾರೀ ಹಣ ಉಳಿತಾಯ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಪ್ರಸ್ತುತ ಅವು ಕೆಳಮಟ್ಟದಲ್ಲಿ ಸಾಗುತ್ತಿವೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ನಲ್ಲಿದೆ. ಇದು ಕಡಿಮೆ ದರ ಎಂದು ಹೇಳಬಹುದು. ಏಕೆಂದರೆ ಈ ಹಿಂದೆ ಕಚ್ಚಾ ತೈಲದ ಬೆಲೆ 130 ಡಾಲರ್ ವರೆಗೆ ತಲುಪಿತ್ತು. ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿ 90 ರಿಂದ 100 ಡಾಲರ್‌ಗಳ ವ್ಯಾಪ್ತಿಯಲ್ಲಿ ಏರಿಳಿತಗೊಂಡವು. ಆದರೆ ಈಗ ಕಚ್ಚಾತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸ್ಥಿರವಾಗಿದ್ದರೆ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಅವಕಾಶವಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಕೋಳಿ ಮಾಂಸದ ಬೆಲೆ ಧಿಡೀರ್ ಏರಿಕೆ, ಒಮ್ಮೆಲೇ ಕೆಜಿಗೆ 350 ರೂಪಾಯಿಗೆ ಜಿಗಿತ! ಎಲ್ಲಿ ಗೊತ್ತಾ?

petrol diesel price today
Image Source: The Hans India

ಇಂಧನ ದರ ಕಡಿತವು ತೈಲ ಮಾರುಕಟ್ಟೆ ಕಂಪನಿಗಳ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ಮುಂದಿನ ತ್ರೈಮಾಸಿಕದಲ್ಲಿಯೂ ತೈಲ ಮಾರುಕಟ್ಟೆ ಕಂಪನಿಗಳು ಉತ್ತಮ ಸ್ಥಿತಿಗೆ ಬರಲಿದೆ ಎಂದರು.

ಆದರೆ, ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಪ್ರಮುಖ ಘೋಷಣೆ ಮಾಡುವ ಸಾಧ್ಯತೆಯಿಲ್ಲ ಮತ್ತು ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಎಂದು ಅವರು ಹೇಳಿದರು. ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲಿದೆಯೇ ಸರ್ಕಾರ? ಎಂಬ ಪ್ರಶ್ನೆಗೆ ಉತ್ತರಿಸಿದರು. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ, ಹಾಗೂ ಇದೆ ಪರಿಸ್ಥಿತಿ ಮುಂದುವರೆದರೆ ಬೆಲೆಗಳು ಇಳಿಕೆ ಕಾಣುತ್ತವೆ ಎಂದರು.

ಕಡಿಮೆ-ವೆಚ್ಚದ ಹೆಚ್ಚು ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಗಳು, ಬೆಲೆ ಗೊತ್ತಾದ್ರೆ ಈಗಲೇ ಖರೀದಿ ಮಾಡ್ತೀರಾ

ಬಿಜೆಪಿಯೇತರ ರಾಜ್ಯಗಳು ವ್ಯಾಟ್ ಕಡಿಮೆ ಮಾಡದೆ ಹೆಚ್ಚಿನ ಬೆಲೆಗೆ ಪೆಟ್ರೋಲ್, ಡೀಸೆಲ್ ಮಾರಾಟ ಮಾಡುತ್ತಿವೆ ಎಂದು ಟೀಕಿಸಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವ್ಯಾಟ್ ಕಡಿತಗೊಳಿಸಲಾಗಿದೆ ಎಂದರು. ವ್ಯಾಟ್ ಕಡಿತದಿಂದ ವಾಹನ ಸವಾರರಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ ಎಂದು ಉಲ್ಲೇಖಿಸಿದರು.

ಈ ನಡುವೆ ಮತ್ತೊಂದೆಡೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿಲ್ಲ. ಇಂಧನ ದರ ಇಳಿಕೆಯಾಗಲಿದೆ ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ.

Central Minister key comments on Huge reduction in petrol and diesel prices

Related Stories