ಆಸ್ತಿ ಖರೀದಿ ಹಾಗೂ ಜಮೀನು ನೋಂದಣಿ ನಿಯಮಗಳಲ್ಲಿ ಬದಲಾವಣೆ! ಹೊಸ ರೂಲ್ಸ್
property : ಪವರ್ ಆಫ್ ಅಟಾರ್ನಿ (power of attorney), ಡೀಡ್ಸ್ ಅಂಡ್ ಅಫಿಡವಿಟ್ (deeds and affidavit) ಮೊದಲಾದ ಡಾಕ್ಯುಮೆಂಟ್ಗಳ ರಿಜಿಸ್ಟ್ರೇಷನ್ ಮಾಡಿಸಲು ಮುದ್ರಾಂಕ ಶುಲ್ಕ ಹೆಚ್ಚಿಸಲಾಗಿದೆ
ಸಾಮಾನ್ಯವಾಗಿ ನಮ್ಮ ಬಳಿ ಇರುವ ಹಣವನ್ನು ಒಂದಲ್ಲ ಒಂದು ರೀತಿಯಲ್ಲಿ ಹೂಡಿಕೆ (investment) ಮಾಡಿ ಉಳಿತಾಯ (Savings ) ಮಾಡಲು ಬಯಸುತ್ತೇವೆ. ಕೆಲವರು ಹಣವನ್ನು ಹಾಗೆ ಬ್ಯಾಂಕಿನಲ್ಲಿ ಇಟ್ಟು ಬಡ್ಡಿ (bank deposit) ಪಡೆದುಕೊಂಡರೆ ಇನ್ನೂ ಕೆಲವರು ಚಿನ್ನದ ಮೇಲೆ ಹೂಡಿಕೆ (investment on gold) ಮಾಡುತ್ತಾರೆ.
ಮತ್ತೆ ಕೆಲವರು ಜಮೀನು ಮನೆಯಂತಹ ಆಸ್ತಿ (property purchase) ಖರೀದಿ ಮಾಡುತ್ತಾರೆ. ಆದರೆ ಇದೀಗ ಆಸ್ತಿ ಖರೀದಿ ಮಾಡುವುದು ಜನರಿಗೆ ದೊಡ್ಡ ತಲೆನೋವು ಆಗಲಿದೆ.
ಚಿನ್ನದ ಬೆಲೆ 10 ದಿನಗಳಲ್ಲಿ ಸುಮಾರು 2 ಸಾವಿರ ರೂಪಾಯಿ ಇಳಿಕೆ! ಇಂದು ಇನ್ನಷ್ಟು ಕುಸಿತ
ಯಾವುದೇ ರೀತಿಯ ಆಸ್ತಿ ಖರೀದಿ ಮಾಡುವುದಕ್ಕೂ ಮೊದಲು ಬಹಳ ಜಾಗರೂಕತೆಯಿಂದ ಇರಬೇಕು. ಯಾಕೆಂದರೆ ಆಸ್ತಿ ಖರೀದಿ ವಿಚಾರದಲ್ಲಿ ವಂಚನೆ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ಯಾರದ್ದೋ ಜಮೀನನ್ನು ಅಥವಾ ಫ್ಲಾಟ್ ಅನ್ನು ತಮ್ಮದೇ ಎಂದು ಮಾರಾಟ ಮಾಡುವ ವಂಚಕರು ಕೂಡ ಹೆಚ್ಚಾಗಿದ್ದಾರೆ ಇದೆಲ್ಲದಕ್ಕೂ ತಡೆ ಹಾಕುವುದಕ್ಕಾಗಿ ಸರ್ಕಾರ ಕೆಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ.
ಮುದ್ರಾಂಕ ಶುಲ್ಕದಲ್ಲಿ ಹೆಚ್ಚಳ! (Stamp Duty price increased)
ಇನ್ನು ಮುಂದೆ ಪವರ್ ಆಫ್ ಅಟಾರ್ನಿ (power of attorney), ಡೀಡ್ಸ್ ಅಂಡ್ ಅಫಿಡವಿಟ್ (deeds and affidavit) ಮೊದಲಾದ ಡಾಕ್ಯುಮೆಂಟ್ಗಳ ರಿಜಿಸ್ಟ್ರೇಷನ್ ಮಾಡಿಸಲು ಮುದ್ರಾಂಕ ಶುಲ್ಕ ಹೆಚ್ಚಿಸಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ (minister Krishna bairagowda) ತಿಳಿಸಿದ್ದಾರೆ. ನೋಂದಣಿ ಇಲಾಖೆ (registration department) ಯಲ್ಲಿ ಸ್ಟ್ಯಾಂಪ್ ನಿಂದ ಬರುವ ಆದಾಯ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಮುದ್ರಾಂಕ ಶುಲ್ಕವನ್ನು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ.
ಮುದ್ರಾಂಕ ಶುಲ್ಕ ಇತರ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯಕ್ಕಿಂತಲೂ ಹೆಚ್ಚಿಗೆ ವಿಧಿಸಲಾಗುತ್ತದೆ. ಇದೀಗ ಆಸ್ತಿ ನೋಂದಣಿ (Property Registration) ವಿಚಾರದಲ್ಲಿ ವಂಚನೆ ತಡೆಗಟ್ಟುವ ಸಲುವಾಗಿ ಹಾಗೂ ರಾಜ್ಯದ ಬೊಕ್ಕಸಕ್ಕೆ ಒಂದಷ್ಟು ಆರ್ಥಿಕ ಪ್ರಯೋಜನ ಒದಗಿಸುವುದಕ್ಕಾಗಿ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಮುದ್ರಾಂಕ ಶುಲ್ಕ ಹೆಚ್ಚಿಸುವುದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮಳೆಯಿಂದ ನಿಮ್ಮ ಕಾರ್ ಹಾನಿ ಆದ್ರೆ, ಇನ್ಸೂರೆನ್ಸ್ ಕ್ಲೈಮ್ ಮಾಡಬಹುದಾ? ಇಲ್ಲಿದೆ ಮಾಹಿತಿ
ಎಷ್ಟು ಹೆಚ್ಚಾಗಲಿದೆ ಮುದ್ರಾಂಕ ಶುಲ್ಕ? (Stamp duty fee increased)
ಕಪ್ಪು ಹಣ ವಹಿವಾಟನ್ನು ನೋಂದಣಿ ಇಲಾಖೆಯಲ್ಲಿ ತಪ್ಪಿಸುವ ಸಲುವಾಗಿ ಆಸ್ತಿಗಳ ಮಾರ್ಗಸೂಚಿಯನ್ನು ಮರುಪರಿಷ್ಕರಣೆ ಮಾಡಲಾಗಿದೆ. ಮಾರುಕಟ್ಟೆಯ ದರ 200% ನಷ್ಟು ಜಾಸ್ತಿ ಇರುವ ಆಸ್ತಿ ಖರೀದಿಯ ಮೇಲೆ 20 ರಿಂದ 25% ನಷ್ಟು ಶುಲ್ಕ ಹೆಚ್ಚಿಸಲಾಗುವುದು. ದತ್ತು ಹಸ್ತಾಂತರ ಪತ್ರ ಸಾಲದ ಕರಾರು ಪತ್ರ ಅಡಮಾನ ಪತ್ರ ಹೀಗೆ ಮೊದಲಾದ 54 ಹೆಚ್ಚಿನ ದಾಖಲೆಗಳ ನೋಂದಣಿ ಮೇಲೆ ಶುಲ್ಕ ಹೆಚ್ಚಿಸಲಾಗುವುದು.
ಕೈನೆಟಿಕ್‌ನಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಎಂಟ್ರಿ! ಬೆಲೆ ಎಷ್ಟು ಗೊತ್ತಾ?
ಯಾವ ದಾಖಲೆಗಳ ಶುಲ್ಕ ಹೆಚ್ಚಳವಾಗಿದೆ?
*ದತ್ತು ಪತ್ರಗಳ ಮುದ್ರಾಂಕ ಶುಲ್ಕ (Stamp Duty) 500 ರಿಂದ 1,000 ರೂ. ಹೆಚ್ಚಳ
*ಅಫಿಡವಿಟ್ ಗಳ ಮುದ್ರಾಂಕ ಶುಲ್ಕ 20 ರಿಂದ 100 ರೂಪಾಯಿ ಹೆಚ್ಚಳ
*ಪವರ್ ಆಫ್ ಅಟಾರ್ನಿ ಮೇಲಿನ ಮುದ್ರಾಂಕ ಶುಲ್ಕ 100ರಿಂದ 500 ರೂ.ಗೆ ಹೆಚ್ಚಳ
*ವಿಚ್ಛೇದನ ಪತ್ರಗಳ ಮೇಲಿನ ಮುದ್ರಾಂಕ ಶುಲ್ಕ – 100 ರಿಂದ 500 ರೂ. ಹೆಚ್ಚಳ
*ಬಾಡಿಗೆ ಮತ್ತು ಭೋಗ್ಯ ಒಪ್ಪಂದ, ಶೇರು ವಹಿವಾಟುಗಳ ಪತ್ರಗಳ ನೋಂದಣಿ ಮುದ್ರಾಂಕ ಶುಲ್ಕ – 500 ರಿಂದ 2000 ರೂ.ಹೆಚ್ಚಳ.
ಚಿನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!
Changes in property purchase and property registration rules