ಒಂದು ವೇಳೆ ಕ್ರೆಡಿಟ್ ಕಾರ್ಡ್ ರದ್ದು ಮಾಡಿದ್ರೆ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತಾ?

ಕ್ರೆಡಿಟ್ ಕಾರ್ಡ್ ಡೀಆಕ್ಟಿವೇಟ್ ಮಾಡಿದರೆ ನೇರವಾಗಿ ಸಿಬಿಲ್ ಸ್ಕೋರ್ ಕುಸಿಯುವುದಿಲ್ಲ. ಆದರೆ ಕ್ರೆಡಿಟ್ ಬಳಕೆ ಪ್ರಮಾಣ (CUR) ಹೆಚ್ಚಳದಿಂದ ಪರಿಣಾಮ ಕಾಣಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Credit Card: ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಬಳಿಯಲ್ಲಿ ಇರುವ ಕ್ರೆಡಿಟ್ ಕಾರ್ಡ್‌ಗಳನ್ನು ಕಡಿಮೆ ಮಾಡಲು ಅಥವಾ ರದ್ದುಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ತಜ್ಞರ ಪ್ರಕಾರ, ಕ್ರೆಡಿಟ್ ಕಾರ್ಡ್ ಮುಚ್ಚುವ ಮುನ್ನ ಕೆಲವು ಪ್ರಮುಖ ಅಂಶಗಳನ್ನು ಪರಿಗಣಿಸಬೇಕು.

ಫಿನ್‌ಟೆಕ್ ಸಂಸ್ಥೆ ‘ಕ್ಯಾಶ್‌ಕ್ಯಾರೋ’ ಸಂಸ್ಥಾಪಕ ರೋಹನ್ ಭಾರ್ಗವ ಅವರ ಪ್ರಕಾರ, ಕಾರ್ಡ್ ಮುಚ್ಚುವುದು ತಪ್ಪಲ್ಲ, ಆದರೆ ಅದು ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಬಳಕೆ ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ.

ಇದನ್ನೂ ಓದಿ: ಮನೆಯಲ್ಲೇ ಕೂತು ಲಕ್ಷ ಲಕ್ಷ ಆದಾಯ ಗಳಿಸಿ! ಪೋಸ್ಟ್ ಆಫೀಸ್ ಡಬಲ್ ಲಾಭದ ಯೋಜನೆ

ಕ್ರೆಡಿಟ್ ಕಾರ್ಡ್ ರದ್ದುಪಡಿಸಿದರೆ ನಿಮ್ಮ ಸಿಬಿಲ್ ಸ್ಕೋರ್ ನೇರವಾಗಿ ಕುಸಿಯುವುದಿಲ್ಲ. ಆದರೆ ಪರೋಕ್ಷ ಪರಿಣಾಮಗಳಾಗಿ ಕ್ರೆಡಿಟ್ ಯೂಟಿಲೈಸೇಶನ್ ರೇಷಿಯೋ (Credit Utilization Ratio – CUR) ಹೆಚ್ಚಾಗುತ್ತದೆ. ಉದಾಹರಣೆಗೆ, ನೀವು ₹50,000 ಕ್ರೆಡಿಟ್ ಲಿಮಿಟ್ ಇರುವ ಮೂರು ಕಾರ್ಡ್‌ಗಳನ್ನು ಹೊಂದಿದ್ದರೆ ಮತ್ತು ತಿಂಗಳಿಗೆ ₹25,000 ಖರ್ಚು ಮಾಡುತ್ತಿದ್ದರೆ, ನಿಮ್ಮ ಬಳಕೆ ಪ್ರಮಾಣ 50% ಆಗಿರುತ್ತದೆ.

ಆದರೆ ಒಂದು ಕಾರ್ಡ್ (₹20,000 ಲಿಮಿಟ್) ಮುಚ್ಚಿದರೆ ಉಳಿದ ಎರಡು ಕಾರ್ಡ್‌ಗಳ ಲಿಮಿಟ್ ₹30,000 ಮಾತ್ರ ಉಳಿಯುತ್ತದೆ. ಆಗ ಅದೇ ₹25,000 ಖರ್ಚು ಮಾಡಿದರೆ, ನಿಮ್ಮ ಬಳಕೆ ಪ್ರಮಾಣ 80% ಆಗುತ್ತದೆ. ಈ ಹೆಚ್ಚಳವು ಸಿಬಿಲ್ ಸ್ಕೋರ್‌ಗೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಕಾರ್ಡ್ ಮುಚ್ಚುವ ಮೊದಲು ಈ ಅಂಶವನ್ನು ಖಂಡಿತ ಪರಿಗಣಿಸಬೇಕು.

ಇದನ್ನೂ ಓದಿ: ಕೇವಲ 45 ನಿಮಿಷಗಳಲ್ಲಿ ಸಾಲ ಸಿಗುತ್ತೆ! ಎಸ್‌ಬಿಐ ಗ್ರಾಹಕರಿಗೆ ಡಿಜಿಟಲ್ ಸೌಕರ್ಯ

ಮತ್ತೊಂದು ಪ್ರಮುಖ ಅಂಶ ಎಂದರೆ, ಹಳೆಯ ಕಾರ್ಡ್‌ಗಳು ನಿಮ್ಮ ಆರ್ಥಿಕ ಶಿಸ್ತಿನ ನಿಖರ ದಾಖಲೆ. ನೀವು ವರ್ಷಗಳ ಕಾಲ ಸರಿಯಾಗಿ ಬಿಲ್ ಪಾವತಿಸಿದ್ದರೆ, ಅದು ಬ್ಯಾಂಕ್‌ಗಳಿಗೆ ನಿಮ್ಮ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ.

ಇಂತಹ ಕಾರ್ಡ್‌ಗಳನ್ನು ತಕ್ಷಣ ಮುಚ್ಚುವುದು ಸ್ಕೋರ್‌ನ ಇತಿಹಾಸವನ್ನು ಕಡಿಮೆ ಮಾಡಬಹುದು. ಆದ್ದರಿಂದ ಬೇಡವಾದ ಕಾರ್ಡ್‌ಗಳನ್ನು ಮಾತ್ರ ಮುಚ್ಚಿ, ಇತಿಹಾಸದ ದೃಷ್ಟಿಯಿಂದ ಉತ್ತಮ ದಾಖಲೆ ಉಳಿಸುವುದು ಉತ್ತಮ ಕ್ರಮ.

Closing Credit Card May Affect Your CIBIL Score

Related Stories