ಬ್ಯಾಂಕ್ ಸಾಲ ಮಾಡಿದ ವ್ಯಕ್ತಿ ಸತ್ತರೆ, ಮನೆಯವರು ಸಾಲ ತೀರಿಸಬೇಕಾ?
ಬ್ಯಾಂಕ್ ನಿಂದ ಸಾಲವನ್ನು ತೆಗೆದುಕೊಂಡು ಅದನ್ನು ಮರುಪಾವತಿ (Loan Re Payment) ಮಾಡುವುದಕ್ಕಿಂತಲೂ ಮುಂಚೆ ಸಾಲಗಾರ ಮರಣ ಹೊಂದಿದರೆ ಬ್ಯಾಂಕಿಗೆ ಸಾಲವನ್ನು ಮರುಪಾವತಿ ಮಾಡುವುದು ಹೇಗೆ
- ಟರ್ಮ್ ಇನ್ಸೂರೆನ್ಸ್ ಯಾಕೆ ಮುಖ್ಯ ಗೊತ್ತಾ
- ಸಾಲ ತೀರಿಸುವ ಮೊದಲೇ ವ್ಯಕ್ತಿ ಸತ್ತರೆ ಬ್ಯಾಂಕ್ ಏನು ಮಾಡುತ್ತೆ?
- ಬ್ಯಾಂಕ್ ಆಸ್ತಿ ಹರಾಜು ಹಾಕಿದ್ರೆ, ಕುಟುಂಬಕ್ಕೆ ಆಧಾರ ಏನು?
Bank Loan : ಎಷ್ಟೋ ಎಮರ್ಜೆನ್ಸಿ ಸಂದರ್ಭದಲ್ಲಿ ಸಾಲ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತೆ. ಅದರಲ್ಲೂ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಸುಲಭವಾಗಿ ಸಾಲವನ್ನು ಮಂಜೂರು ಮಾಡುತ್ತೆ. ಹೀಗಾಗಿ ಬ್ಯಾಂಕ್ ನಲ್ಲಿ ಸಾಲವನ್ನ ತೆಗೆದುಕೊಳ್ಳುವವರ ಸಂಖ್ಯೆಯು ಹೆಚ್ಚಾಗಿದೆ.
ಮನೆ ಕಟ್ಟುವುದಕ್ಕಾಗಿ ಸಾಲ (Home Loan), ಮದುವೆ ಮಾಡುವುದಕ್ಕಾಗಿ ಸಾಲ, ಶಿಕ್ಷಣಕ್ಕಾಗಿ ಸಾಲ (Education Loan), ಹೊಸ ವಾಹನ ಖರೀದಿಗಾಗಿ ಸಾಲ ಹಾಗೂ ಮತ್ತಿತರ ವೈಯಕ್ತಿಕ ಸಮಸ್ಯೆಗಳನ್ನು (Personal Loan) ಸರಿದೂಗಿಸಲು ಸಾಲವನ್ನು ಬ್ಯಾಂಕ್ ನಿಂದ ಪಡೆದುಕೊಳ್ಳಬಹುದು.
ಹೀಗೆ ಬ್ಯಾಂಕ್ ನಿಂದ ಸಾಲವನ್ನು ತೆಗೆದುಕೊಂಡು ಅದನ್ನು ಮರುಪಾವತಿ (Loan Re Payment) ಮಾಡುವುದಕ್ಕಿಂತಲೂ ಮುಂಚೆ ಸಾಲಗಾರ ಮರಣ ಹೊಂದಿದರೆ ಬ್ಯಾಂಕಿಗೆ ಸಾಲವನ್ನು ಮರುಪಾವತಿ ಮಾಡುವುದು ಹೇಗೆ!
ಬ್ಯಾಂಕ್ ಈ ರೀತಿ ಹಣ ವಸೂಲಿ ಮಾಡಬಹುದು!
- ಸಾಲಗಾರ ಮರಣ ಹೊಂದಿದರೆ ಬ್ಯಾಂಕ್ ಇವರನ್ನ ಪ್ರಶ್ನಿಸಬಹುದು ಮೊದಲನೇದಾಗಿ ಅರ್ಜಿದಾರ, ಅಂದರೆ ಮರಣ ಹೊಂದಿದ ವ್ಯಕ್ತಿ ಸಾಲ ತೆಗೆದುಕೊಳ್ಳುವಾಗ ನಾಮಿನಿ ಆಗಿ ಯಾರ ಹೆಸರನ್ನು ಸೂಚಿಸಿರುತ್ತಾರೋ ಅವರನ್ನು ಸಾಲ ತೀರಿಸಲು ಬ್ಯಾಂಕ್ ಕೇಳಬಹುದು.
- ಇನ್ನು ಎರಡನೆಯದಾಗಿ ಲೋನ್ ಗೆ ಯಾರಾದ್ರೂ ಗ್ಯಾರನ್ಟರ್ ಇದ್ರೆ ಅವರನ್ನು ಬ್ಯಾಂಕ್ ಸಾಲ ತೀರಿಸುವಂತೆ ಕೇಳಬಹುದು
- ಮೂರನೆಯದಾಗಿ ಕಾನೂನುಬದ್ಧ ಉತ್ತರಾಧಿಕಾರಿಯನ್ನ ಬ್ಯಾಂಕ್ ಪ್ರಶ್ನೆ ಮಾಡಬಹುದು
- ಕೊನೆಯದಾಗಿ ಮೃತ ವ್ಯಕ್ತಿಯ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳಬಹುದು.
ಗೃಹ ಸಾಲ ಅಥವಾ ವಾಹನ ಸಾಲ : ಈ ಸಾಲವನ್ನು ತೆಗೆದುಕೊಂಡು ವ್ಯಕ್ತಿ ಪಾವತಿಸಲು ಸಾಧ್ಯವಾಗದೇ ಇದ್ದರೆ ಬ್ಯಾಂಕ್ ಆ ಮನೆ ಅಥವಾ ವಾಹನವನ್ನು ವಶಪಡಿಸಿಕೊಂಡು ನಂತರ ಹರಾಜು ಹಾಕಿ ಸಾಲದ ಹಣವನ್ನು ರಿಕವರಿ ಮಾಡಿಕೊಳ್ಳಬಹುದು.
ಅದೇ ರೀತಿ ವಿಮೆ (Insurance) ಮಾಡಿದ ಲೋನ್ ಆಗಿದ್ರೆ ಬ್ಯಾಂಕ್ ನಾಮಿನಿ ಆಗಿರುವವರ ಸಹಿಯನ್ನ ತೆಗೆದುಕೊಂಡು ವಿಮೆ ಕ್ಲೈಮ್ ಮಾಡಿ, ಲೋನ್ ರಿಕವರಿ ಮಾಡಿಕೊಳ್ಳಬಹುದು. ಇನ್ನು ಪರ್ಸನಲ್ ಲೋನ್ ನಂತಹ ಸೆಕ್ಯೂರ್ಡ್ ಸಾಲವನ್ನು ತೆಗೆದುಕೊಂಡ ವ್ಯಕ್ತಿ ಮರಣ ಹೊಂದಿದರೆ ಬ್ಯಾಂಕಿಗೆ ಸಾಲ ವಸೂಲಿ ಮಾಡಲು ಯಾವುದೇ ಮಾರ್ಗ ಇರುವುದಿಲ್ಲ ಯಾಕೆಂದರೆ ಇದು ಸಂಪೂರ್ಣವಾಗಿ ಅಸುರಕ್ಷಿತ ಸಾಲವಾಗಿರುತ್ತದೆ. ಇದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ.
ಸಾಲ ಮಾಡಿದವರ ಮನೆಯವರು ಟರ್ಮ್ ಇನ್ಸೂರೆನ್ಸ್ ಹೊಂದಿದ್ದರೆ ಅಂದರೆ ಸಾಲ ಮಾಡಿದ ವ್ಯಕ್ತಿ ಟರ್ಮ್ ಇನ್ಸೂರೆನ್ಸ್ ತೆಗೆದುಕೊಂಡಿದ್ದರೆ, ವ್ಯಕ್ತಿ ತೀರಿಕೊಂಡ ನಂತರ ಟರ್ಮ್ ಇನ್ಸೂರೆನ್ಸ್ ಕ್ಲೈಮ್ ಮಾಡಿ ಸಾಲವನ್ನು ಮರುಪಾವತಿ ಮಾಡಬಹುದು.
Do family members have to repay a bank loan if the borrower dies