ಚಿನ್ನ ಖರೀದಿಗೆ ಹೊಸ ನಿಯಮ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಇಲ್ಲದೆ ಎಷ್ಟು ಚಿನ್ನ ಖರೀದಿಸಬಹುದು ಗೊತ್ತೇ?
ನಗದು ಚಿನ್ನ ಖರೀದಿ (Gold Purchase) ಮಾಡುವ ವ್ಯವಹಾರದ ಮೇಲೆ ಯಾವುದೇ ರೀತಿಯ ನಿರ್ಬಂಧವಿಲ್ಲ ಅಥವಾ ಗುರುತಿನ ಪುರಾವೆ ಕೊಡುವ ಅಗತ್ಯವಿಲ್ಲ. ಎರಡು ಲಕ್ಷ ಮೀರಿದ್ರೆ ಆಗ ಆಧಾರ್ ಕಾರ್ಡ್ (Aadhaar Card) ಪ್ಯಾನ್ ಕಾರ್ಡ್ (PAN Card) ಮತ್ತು ವಿವರಗಳನ್ನು ಕೊಡಬೇಕು
ದೀಪಾವಳಿ ಹಬ್ಬದ (Diwali festival) ಸಂದರ್ಭದಲ್ಲಿ ನೀವು ಕೂಡ ಚಿನ್ನ ಖರೀದಿ (gold purchase) ಮಾಡಲು ಬಯಸಿದರೆ, ಚಿನ್ನ ಖರೀದಿಯ ಬಗ್ಗೆ ಇರುವ ನಿಯಮಗಳನ್ನು ಪ್ರಮುಖವಾಗಿ ತಿಳಿದುಕೊಳ್ಳಬೇಕು, ಇಲ್ಲವಾದರೆ ಹೆಚ್ಚುವರಿ ದಂಡ ಪಾವತಿಸಬೇಕಾದ ಪರಿಸ್ಥಿತಿ ಬರಬಹುದು.
ನೀವು ನಗದು ರೂಪದಲ್ಲಿ ಚಿನ್ನವನ್ನು ಖರೀದಿ ಮಾಡುವುದಾದರೆ ಅದಕ್ಕೂ ಮಿತಿ ಇದೆ, ಆ ಮಿತಿಯನ್ನು ಮೀರಿದರೆ ಆದಾಯ ತೆರಿಗೆ ಇಲಾಖೆ ನಿಮ್ಮನ್ನು ಪ್ರಶ್ನಿಸಬಹುದು.
HP ಗ್ಯಾಸ್ ಸಿಲಿಂಡರ್ ಬಳಸುವ ಎಲ್ಲರಿಗೂ ಹೊಸ ಸೂಚನೆ! ನಿಮಗೂ ಬಂದಿದ್ಯಾ ಈ ಬಗ್ಗೆ ಮೆಸೇಜ್?
ಎಷ್ಟು ಚಿನ್ನ ನಗದು ರೂಪದಲ್ಲಿ ಖರೀದಿಸಬಹುದು?
ನೀವು ನಗದು ಹಣವನ್ನು ಕೊಟ್ಟು ಚಿನ್ನ ಖರೀದಿಸುವುದಾದರೆ ಅದಕ್ಕೆ ಮಿತಿ ಇದೆ, ನೀವು ಎಷ್ಟು ಬೇಕಾದರೂ ಹಣ ಕೊಟ್ಟು ಚಿನ್ನ ಖರೀದಿಸುವಂತಿಲ್ಲ ಅಥವಾ ನೀವು ಎಷ್ಟು ಹಣವನ್ನು ಬೇಕಾದರೂ ಕೊಟ್ಟು ಚಿನ್ನ ಖರೀದಿಸಲು ಮುಂದಾದರು ಮಾರಾಟಗಾರರು 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣವನ್ನು ತೆಗೆದುಕೊಳ್ಳುವಂತಿಲ್ಲ
ಎರಡು ಲಕ್ಷ ರೂಪಾಯಿಗಳವರೆಗಿನ ನಗದು ಚಿನ್ನ ಖರೀದಿ (Gold Purchase) ಮಾಡುವ ವ್ಯವಹಾರದ ಮೇಲೆ ಯಾವುದೇ ರೀತಿಯ ನಿರ್ಬಂಧವಿಲ್ಲ ಅಥವಾ ಗುರುತಿನ ಪುರಾವೆ ಕೊಡುವ ಅಗತ್ಯವಿಲ್ಲ. ಎರಡು ಲಕ್ಷ ಮೀರಿದ್ರೆ ಆಗ ಆಧಾರ್ ಕಾರ್ಡ್ (Aadhaar Card) ಪ್ಯಾನ್ ಕಾರ್ಡ್ (PAN Card) ಮತ್ತು ವಿವರಗಳನ್ನು ಕೊಡಬೇಕು
ಅಷ್ಟೇ ಅಲ್ಲದೆ ಮಾರಾಟಗಾರರು ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣ ಪಡೆದು ಚಿನ್ನವನ್ನು ಮಾರಾಟ (Gold Sale) ಮಾಡುವ ಹಾಗೂ ಇಲ್ಲ.
ಚಿನ್ನ ಅಸಲಿಯೋ ನಕಲಿಯೋ 5 ನಿಮಿಷದಲ್ಲಿ ಪತ್ತೆ ಮಾಡಿ! ಚಿನ್ನದ ಗುಣಮಟ್ಟ ತಿಳಿಯಿರಿ
ಎಷ್ಟು ಚಿನ್ನ ಹೊಂದಿರಬಹುದು?
ಇನ್ನು ಯಾರ ಬಳಿ ಎಷ್ಟು ಚಿನ್ನ ಇರಬಹುದು ಎಂಬುದನ್ನು ನೋಡುವುದಾದರೆ ವಿವಾಹಿತ ಮಹಿಳೆ (married women) 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು. ಅದೇ ರೀತಿ ಅವಿವಾಹಿತ ಮಹಿಳೆ (unmarried women) 250 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು.
ಇನ್ನು ಪುರುಷರು 100ಗ್ರಾಂ ಕ್ಕಿಂತ ಹೆಚ್ಚಿನ ಚಿನ್ನವನ್ನು ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಈ ಮಿತಿಯನ್ನು ಮೀರಿದರೆ ಆದಾಯ ತೆರಿಗೆ ಇಲಾಖೆ (income tax department) ನಿಮಗೆ ನೋಟಿಸ್ (notice) ಕಳುಹಿಸಬಹುದು ಹಾಗೂ ಇದಕ್ಕೆಲ್ಲಾ ದಾಖಲೆ ಇಲ್ಲದೆ ಇದ್ದರೆ ನಿಮ್ಮ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.
ಬಿಟ್ರೆ ಕೆಟ್ರಿ, ಚಿನ್ನದ ಬೆಲೆ ಏಕ್ ದಂ ಇಳಿಕೆ! ಚಿನ್ನ ಬೆಳ್ಳಿ ಖರೀದಿಗೆ ಇದುವೇ ಒಳ್ಳೆಯ ಚಾನ್ಸ್
ಚಿನ್ನ ಮಾರಾಟ ಮಾಡಿದರು ಕಟ್ಟಬೇಕು ಟ್ಯಾಕ್ಸ್!
ಇನ್ನು ನಿಮ್ಮ ಬಳಿ ಇರುವ ಬಂಗಾರವನ್ನು ಮಾರಾಟ ಮಾಡಿ ಹಣ ಗಳಿಸಿದರೆ ಅದನ್ನು ಆದಾಯ ಎಂದು ಪರಿಗಣಿಸಲಾಗುತ್ತದೆ, ಇಂತಹ ಸಂದರ್ಭದಲ್ಲಿ ಮಾರಾಟ ಮಾಡಿದ ಹಣಕ್ಕೆ ಟ್ಯಾಕ್ಸ್ ಕೂಡ ಪಾವತಿ ಮಾಡಬೇಕು.
ನೀವು ಬಂಗಾರ ಖರೀದಿ ಮಾಡಿ ಮೂರು ವರ್ಷಗಳ ನಂತರ ಅದನ್ನು ಮಾರಾಟ ಮಾಡುವುದಾದರೆ ಆದಾಯ ತೆರಿಗೆಯ ಸ್ಲಾಬ್ ದರದ ಪ್ರಕಾರ ಟ್ಯಾಕ್ಸ್ ಪಾವತಿ ಮಾಡಬೇಕು. ಅದೇ ರೀತಿ ಖರೀದಿಸಿದ ಚಿನ್ನವನ್ನು ಮೂರು ವರ್ಷಗಳಿಗಿಂತಲೂ ಹೆಚ್ಚಿನ ಸಮಯ ನಿಮ್ಮ ಬಳಿ ಇಟ್ಟುಕೊಂಡು ನಂತರ ಮಾರಾಟ ಮಾಡಿದರೆ 20% ಟ್ಯಾಕ್ಸ್ ಪಾವತಿ ಮಾಡಬೇಕು.
ಎಷ್ಟೋ ಸಂದರ್ಭಗಳಲ್ಲಿ ನಾವು ಎಲ್ಲಿಯೂ ಹಣ ಹೊಂದಿಸಲು ಸಾಧ್ಯವಾಗದೆ ಇದ್ದಾಗ ನಮ್ಮ ಬಳಿ ಇರುವ ಚಿನ್ನ ಎನ್ನುವುದು ಬಹಳ ದೊಡ್ಡ ಹಣದ ಮೂಲವಾಗಬಹುದು. ಹಾಗಾಗಿ ಹೂಡಿಕೆಯ ದೃಷ್ಟಿಯಿಂದ ಹಾಗೂ ಆದಾಯದ ದೃಷ್ಟಿಯಿಂದಲೂ ಚಿನ್ನ ನಮ್ಮ ಬಳಿ ಇದ್ದರೆ ಹೆಚ್ಚು ಸೇಫ್ ಎನ್ನಬಹುದು.
Do you know how much gold can be bought without Aadhaar and PAN card
Follow us On
Google News |