HP ಗ್ಯಾಸ್ ಸಿಲಿಂಡರ್ ಬಳಸುವ ಎಲ್ಲರಿಗೂ ಹೊಸ ಸೂಚನೆ! ನಿಮಗೂ ಬಂದಿದ್ಯಾ ಈ ಬಗ್ಗೆ ಮೆಸೇಜ್?
ಗ್ಯಾಸ್ ಕಂಪನಿಗಳು (gas company) ಜನರ ಸುರಕ್ಷತೆಯ ದೃಷ್ಟಿಯಿಂದ ಸಿಲೆಂಡರ್ಗಳ ವಾರೆಂಟಿ (cylinder warranty check up) ಚೆಕ್ ಅಪ್ ಮಾಡಲು ನಿರ್ಧರಿಸಿವೆ.
ಇಂದು ಬಹುತೇಕ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ (LPG gas cylinder) ಬಳಸಲಾಗುತ್ತದೆ. ಹಳೆಯ ಕಾಲದ ಒಲೆ ಉರಿಸಿ ಅಡುಗೆ ಮಾಡುವ ಪದ್ಧತಿ ಆ ಕಷ್ಟ ಈಗ ಇಲ್ಲ.
ಮಹಿಳೆಯರು ಸುಲಭವಾಗಿ ಗ್ಯಾಸ್ ಸ್ಟವ್ ನಲ್ಲಿ ಅಡುಗೆ ಮಾಡಬಹುದು. ಆದರೆ ಎಲ್ಪಿಜಿ ಸಿಲಿಂಡರ್ ಬಳಸುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಸಿಲಿಂಡರ್ ಬಳಕೆಯ ವಿಚಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅಪಾಯ ಎದುರಿಸಬೇಕಾಗುತ್ತದೆ.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಕೇವಲ ಸಾವಿರ ಹೂಡಿಕೆ ಮಾಡಿದ್ರೆ 5 ವರ್ಷಗಳಲ್ಲಿ ಸಿಗುತ್ತೆ ಲಕ್ಷಗಟ್ಟಲೆ ಹಣ
ಸಿಲಿಂಡರ್ ವಾರಂಟಿ ಪರಿಶೀಲನೆ!
ಪ್ರತಿ ವರ್ಷ ಲಕ್ಷಾಂತರ ಜನ ಸಿಲಿಂಡರ್ ಗ್ಯಾಸ್ ಸ್ಪೋಟದಿಂದ (Gas cylinder blast) ಮರಣ ಹೊಂದುತ್ತಿದ್ದಾರೆ ಎಂದರೆ ಆಶ್ಚರ್ಯವಾಗಬಹುದು, ಆದರೆ ಇದು ಸತ್ಯ. ಹಾಗಾಗಿ ಗ್ಯಾಸ್ ಕಂಪನಿಗಳು (gas company) ಜನರ ಸುರಕ್ಷತೆಯ ದೃಷ್ಟಿಯಿಂದ ಸಿಲೆಂಡರ್ಗಳ ವಾರೆಂಟಿ (cylinder warranty check up) ಚೆಕ್ ಅಪ್ ಮಾಡಲು ನಿರ್ಧರಿಸಿವೆ.
ಈ ಹಿನ್ನೆಲೆಯಲ್ಲಿ ಎಚ್ ಪಿ ಗ್ಯಾಸ್ (HP gas company) ಕಂಪನಿ, ಉಪಕ್ರಮ ಕೈಗೊಂಡಿದ್ದು ತನ್ನ ಗ್ರಾಹಕರ ಮನೆ ಮನೆಗೆ ಸಿಬ್ಬಂದಿಗಳನ್ನು ಕಳುಹಿಸಿ ಗ್ಯಾಸ್ ಚೆಕಪ್ ಮಾಡಿಸುತ್ತಿದೆ.
ಮೆಸೇಜ್ ಬಂದಿದೆ ಚೆಕ್ ಮಾಡಿ!
ನೀವು ಹೆಚ್ ಪಿ ಗ್ಯಾಸ್ ಸಿಲಿಂಡರ್ ಬಳಸುವವರಾಗಿದ್ದರೆ ಹೆಚ್‍ಪಿ ಕಂಪನಿಯಿಂದ ನಿಮಗೆ ವಾರಂಟಿ ಚೆಕಪ್ ಗಾಗಿ ಮೆಸೇಜ್ ಕಳುಹಿಸಲಾಗುತ್ತದೆ. ಈ ಮೆಸೇಜ್ ಬಂದಿದ್ದು ಗ್ರಾಹಕರು ನಿಮ್ಮ ಮನೆಗೆ ಬಂದು ಚೆಕ್ ಮಾಡಲು ಅವಕಾಶ ಕೇಳಿದರೆ ನೀವು ಕೊಡಬೇಕು. ಇನ್ನು ಇದಕ್ಕೆ 236 ರೂಪಾಯಿಗಳ ಶುಲ್ಕ ಕೂಡ ಪಾವತಿಸಬೇಕು.
ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ ಅಕೌಂಟ್ ಇರುವ ಗ್ರಾಹಕರಿಗೆ ಭಾರೀ ಶಾಕ್, ಮಹತ್ವದ ನಿರ್ಧಾರ
ಸಿಲಿಂಡರ್ ಚೆಕ್ ಅಪ್ ಮಾಡುವುದು ಹೇಗೆ?
ಮೊದಲನೇಯದಾಗಿ ನಿಮಗೆ ಮೆಸೇಜ್ (message) ಬಂದಿದ್ದರೆ ಸಿಬ್ಬಂದಿ ಮನೆಗೆ ಬಂದಾಗ ಅವರ ಬಳಿ ಐಡಿ ಕಾರ್ಡ್ (ID card) ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿ, ನಂತರ ಅವರ ಮೊಬೈಲ್ ನಲ್ಲಿ ನಿಮ್ಮ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಗೆ ಸಂಬಂಧಪಟ್ಟ ಎಲ್ಲ ಮಾಹಿತಿ ಲಭ್ಯವಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿ. ನಂತರ ಎಲ್ಲವೂ ಸರಿಯಾಗಿದ್ದರೆ ನೀವು ಚೆಕ್ ಮಾಡಲು ಅವಕಾಶ ಕೊಡಬಹುದು.
ಎಚ್ ಪಿ ಗ್ಯಾಸ್ ಸಿಲೆಂಡರ್ ಕಂಪನಿಯ ಸಿಬ್ಬಂದಿ ನೀವು ಬಳಸುತ್ತಿರುವ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಮತ್ತು ಗ್ಯಾಸ್ ಹೋಗಲು ಬಳಸುವ ಪೈಪ್ ಗಳನ್ನು ಪರಿಶೀಲಿಸುತ್ತಾರೆ
ಬಿಟ್ರೆ ಕೆಟ್ರಿ, ಚಿನ್ನದ ಬೆಲೆ ಏಕ್ ದಂ ಇಳಿಕೆ! ಚಿನ್ನ ಬೆಳ್ಳಿ ಖರೀದಿಗೆ ಇದುವೇ ಒಳ್ಳೆಯ ಚಾನ್ಸ್
ಯಾವುದಾದರೂ ಸಮಸ್ಯೆ ಇದ್ದರೆ ಅದನ್ನು ತಕ್ಷಣವೇ ಪರಿಹರಿಸಿಕೊಳ್ಳಲು ತಿಳಿಸುತ್ತಾರೆ, ಜೊತೆಗೆ ನಿಮ್ಮ ಗ್ಯಾಸ್ ಸಿಲಿಂಡರ್ ಗ್ಯಾಸ್ ಸ್ಟವ್ ಪೈಪ್ ಎಲ್ಲವುಗಳ ಫೋಟೋ ತೆಗೆದು ಅದನ್ನು ಹೆಚ್ ಪಿ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಅಲ್ಲಿಗೆ ನಿಮ್ಮ ವಾರೆಂಟಿ ಚೆಕ್ ಮುಗಿಯುತ್ತದೆ.
ಹೆಚ್ ಪಿ ಸಿಬ್ಬಂದಿ ಎಂದು ಹೇಳಿಕೊಂಡು ಫ್ರಾಡ್ ಮಾಡುವವರು ಮನೆಗೆ ಬರಬಹುದು. ಒಂಟಿ ಮಹಿಳೆ ಅಥವಾ ವಯಸ್ಸಾದವರು ಮನೆಯಲ್ಲಿ ಇದ್ದರೆ ಜಾಗೃತರಾಗಿರಿ. ಸರಿಯಾದ ಮಾಹಿತಿಯನ್ನು ಅವರು ನೀಡದೆ ಇದ್ದಲ್ಲಿ ಮನೆಯ ಒಳಗೆ ಬರಲು ಅವಕಾಶ ಕೊಡಬೇಡಿ. ಸರಿಯಾಗಿ ಇದ್ದರೆ ವಾರಂಟಿ ಚೆಕ್ ಮಾಡಿಸಿಕೊಳ್ಳಿ.
A new notice for all Gas Cylinder users, Did you get this message too