ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಕೇವಲ ಸಾವಿರ ಹೂಡಿಕೆ ಮಾಡಿದ್ರೆ 5 ವರ್ಷಗಳಲ್ಲಿ ಸಿಗುತ್ತೆ ಲಕ್ಷಗಟ್ಟಲೆ ಹಣ

ಉಳಿತಾಯ ಯೋಜನೆಯ (savings scheme) ವಿಚಾರಕ್ಕೆ ಬಂದರೆ ಅತಿ ಹೆಚ್ಚು ಸೇಫ್ (safe) ಹಾಗೂ ಯಾವುದೇ ರೀತಿಯ ಹಣ ನಷ್ಟದ ಸಮಸ್ಯೆ ಇಲ್ಲದೆ ಇರುವ ಯೋಜನೆ ಅಂದರೆ ಪೋಸ್ಟ್ ಆಫೀಸ್ ಯೋಜನೆಗಳು (post office schemes).

Bengaluru, Karnataka, India
Edited By: Satish Raj Goravigere

ಉಳಿತಾಯ ಯೋಜನೆಯ (savings scheme) ವಿಚಾರಕ್ಕೆ ಬಂದರೆ ಅತಿ ಹೆಚ್ಚು ಸೇಫ್ (safe) ಹಾಗೂ ಯಾವುದೇ ರೀತಿಯ ಹಣ ನಷ್ಟದ ಸಮಸ್ಯೆ ಇಲ್ಲದೆ ಇರುವ ಯೋಜನೆ ಅಂದರೆ ಪೋಸ್ಟ್ ಆಫೀಸ್ ಯೋಜನೆಗಳು (post office schemes).

ಅಂಚೆ ಕಚೇರಿಯಲ್ಲಿ ನೀವು ಹೂಡಿಕೆ (investment) ಮಾಡಿದರೆ ಉತ್ತಮ ಬಡ್ಡಿ ದರ ಪಡೆಯಬಹುದು ಹಾಗೂ ಹೆಚ್ಚಿನ ಲಾಭ ಕೂಡ ಸಿಗುತ್ತದೆ. ಯಾರು ಹೂಡಿಕೆಯ ವಿಚಾರದಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲವೊ ಅಂತವರು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದು ಬಹಳ ಒಳ್ಳೆಯದು.

you will get 16 lakhs In this post office Savings scheme

ಅಂಚೆ ಕಚೇರಿ ಇತ್ತೀಚಿನ ದಿನಗಳಲ್ಲಿ ಆರ್ ಡಿ (RD) ಹಾಗೂ ಇತರ ಯೋಜನೆಗಳ ಮೇಲೆ ಉತ್ತಮವಾಗಿರುವ ಬಡ್ಡಿ ದರವನ್ನು (interest) ಘೋಷಿಸಿದೆ. ಹಾಗಾಗಿ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಬೆನಿಫಿಟ್ ಇದೆ. ಅಂಚೆ ಕಚೇರಿಯ ಅಂತ ಒಂದು ಉತ್ತಮ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ. ಇಲ್ಲಿದೆ ಇದರ ಮಾಹಿತಿ.

ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ ಅಕೌಂಟ್ ಇರುವ ಗ್ರಾಹಕರಿಗೆ ಭಾರೀ ಶಾಕ್, ಮಹತ್ವದ ನಿರ್ಧಾರ

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ (Post Office National Saving Certificate)

ಹೂಡಿಕೆ ಮಾಡಲು ಬಯಸಿದರೆ ವೈಯಕ್ತಿಕ ಖಾತೆ (single account) ತೆರೆಯಬಹುದು ಅಥವಾ ಜಂಟಿಯಾಗಿ ಖಾತೆ (joint account) ತೆರೆಯಬಹುದು ಅಷ್ಟೇ ಅಲ್ಲದೆ ಅಪ್ರಾಪ್ತ ವಯಸ್ಸಿನ ನಿಮ್ಮ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವುದಾದರೆ ಪಾಲಕರ ಹೆಸರಿನಲ್ಲಿ ಖಾತೆ ತೆರೆಯಬಹುದು. ಆದರೆ ಯಾವುದೇ ಟ್ರಸ್ಟ್ (trust or company) ಹೆಸರಿನಲ್ಲಿ ಅಥವಾ ಅವಿಭಜಿತ ಕುಟುಂಬ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ.

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಸಾವಿರ ರೂಪಾಯಿಗಳು. ಗರಿಷ್ಠ ಹೂಡಿಕೆ ಮಿತಿ ಇಲ್ಲ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 1.5 ಲಕ್ಷ ರೂಪಾಯಿಗಳ ವರೆಗೆ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ (tax concession) ಕೂಡ ಪಡೆದುಕೊಳ್ಳಬಹುದು.

ಚಿನ್ನದಂತ ಆಫರ್! ಫೋನ್ ಪೇಯಲ್ಲಿ ಸಾವಿರಕ್ಕೆ ಖರೀದಿ ಮಾಡಿದ್ರೆ ಸಿಗುತ್ತೆ 3000 ಕ್ಯಾಶ್ಬ್ಯಾಕ್

ಎನ್ ಎಸ್ ಸಿ ಹೂಡಿಕೆಯ ಬಡ್ಡಿ ದರ! (Interest of NSC)

Post office Schemeಸದ್ಯ ಭಾರತೀಯ ಅಂಚೆ ಕಚೇರಿ ಎನ್ ಎಸ್ ಸಿ ಹೂಡಿಕೆಯ ಮೇಲೆ ವಾರ್ಷಿಕ 7.7% ಬಡ್ಡಿದರ ಘೋಷಿಸಿದೆ. ತ್ರೈಮಾಸಿಕಕ್ಕೆ ಬಡ್ಡಿದರ ಪರಿಷ್ಕರಿಸಲಾಗುತ್ತದೆ. ಯೋಜನೆಯ ಆರಂಭದಲ್ಲಿ ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರೆ ಸಾಕು ಅಥವಾ ನೂರರ ಗುಣಕದಲ್ಲಿ ಹೂಡಿಕೆ ಮಾಡಬೇಕು. ಈ ಯೋಜನೆಯ ಮೆಚುರಿಟಿ ಅವಧಿ ಐದು ವರ್ಷಗಳು.

ನಿಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ₹417 ರೂ. ಹೂಡಿಕೆ ಮಾಡಿದ್ರೆ ₹70 ಲಕ್ಷ ಆದಾಯ! ಸರ್ಕಾರಿ ಯೋಜನೆ

ಎನ್ ಎಸ್ ಎಸ್ ಸಿ ಹೂಡಿಕೆ ಖಾತೆ ತೆರೆಯಲು ಹತ್ತಿರದ ಪೋಸ್ಟ್ ಆಫೀಸ್ ಕಚೇರಿಗೆ ಹೋಗಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಅರ್ಜಿ ನಮೂನೆ ಪಡೆದು ಅದರಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಲು ಮೂಲ ದಾಖಲೆಗಳಾಗಿ ನಿಮ್ಮ ಆಧಾರ್ ಕಾರ್ಡ್ (Aadhaar Card) ಪಾಸ್ ಪೋರ್ಟ್ ಅಳತೆಯ ಫೋಟೋ ಗುರುತಿನ ಪುರಾವೆಗಳನ್ನು ನೀಡಬೇಕು.

ಉತ್ತಮ ಆದಾಯ (good return) ಗಳಿಸಲು ಅತ್ಯಂತ ಸುರಕ್ಷಿತವಾಗಿರುವ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯಲ್ಲಿ ಇಂದೇ ಹೂಡಿಕೆ ಆರಂಭಿಸಿ.

If you invest only 1000 in this post office scheme, you will get lakhs of money in 5 years