2000 Rupees Note: ಇತ್ತೀಚಿಗೆ ಬ್ಯಾನ್ ಮಾಡಿ ವಾಪಸ್ ಪಡೆದ 2 ಸಾವಿರ ರೂಪಾಯಿ ನೋಟುಗಳನ್ನು RBI ಏನು ಮಾಡುತ್ತದೆ ಗೊತ್ತಾ?
2000 Rupees Note: ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಹಿಂಪಡೆದಿರುವುದು ಗೊತ್ತೇ ಇದೆ. ಈಗಾಗಲೇ ಸಾಕಷ್ಟು ಮಂದಿ ಆ ನೋಟುಗಳನ್ನು ಬ್ಯಾಂಕ್‌ನಲ್ಲಿ ಬದಲಾಯಿಸಿಕೊಂಡಿದ್ದಾರೆ.
2000 Rupees Note: ಭಾರತೀಯ ರಿಸರ್ವ್ ಬ್ಯಾಂಕ್ (RBI Bank) 2000 ರೂಪಾಯಿ ನೋಟುಗಳನ್ನು ಹಿಂಪಡೆದಿರುವುದು ಗೊತ್ತೇ ಇದೆ. ಈಗಾಗಲೇ ಸಾಕಷ್ಟು ಮಂದಿ ಆ ನೋಟುಗಳನ್ನು ಬ್ಯಾಂಕ್‌ನಲ್ಲಿ (Bank) ಬದಲಾಯಿಸಿಕೊಂಡಿದ್ದಾರೆ.
2000 ರೂಪಾಯಿ ನೋಟುಗಳ ಪೈಕಿ ಶೇ 50ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸಾಗಿವೆ ಎಂದು ತಜ್ಞರು ಹೇಳಿದ್ದಾರೆ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ನ ಗವರ್ನರ್ 1.80 ಲಕ್ಷ ಕೋಟಿ 2000 ರೂಪಾಯಿ ನೋಟುಗಳು ಬಂದಿವೆ ಎಂದು ವಿವರಿಸಿದರು.
ಈಗ ನಮ್ಮಲ್ಲಿ ಅನೇಕರಿಗೆ ಮೂಡುವ ಪ್ರಶ್ನೆ .. ಆ ನೋಟುಗಳನ್ನು ಈಗ RBI ಏನು ಮಾಡುತ್ತದೆ? ಇತರೆ ನೋಟುಗಳನ್ನು ಮುದ್ರಿಸಲು ಇವುಗಳನ್ನು ಬಳಸುತ್ತಾರೆಯೇ? ಅಥವಾ ಸುಟ್ಟು ಹಾಕಲಾಗುತ್ತದೆಯೇ?
ಬನ್ನಿ ಈ ಬಗ್ಗೆ ಸರಿಯಾದ ಮಾಯಿತಿಯನ್ನು ತಿಳಿಯೋಣ.
ವರದಿಗಳ ಪ್ರಕಾರ, ರಿಸರ್ವ್ ಬ್ಯಾಂಕ್ ಮೊದಲು ನೋಟುಗಳನ್ನು ಪ್ರಾದೇಶಿಕ ಶಾಖಾ ಕಚೇರಿಗಳಿಗೆ ಕಳುಹಿಸುತ್ತದೆ. ಜೊತೆಗೆ ಅವುಗಳಲ್ಲಿ ನಕಲಿ ನೋಟುಗಳಿವೆಯೇ..? ಇದ್ದರೆ ಎಷ್ಟು ಇವೆ? ಇದನ್ನು ಯಂತ್ರದ ಸಹಾಯದಿಂದ ಪರಿಶೀಲಿಸಲಾಗುತ್ತದೆ.
ದುರ್ಬಳಕೆ ತಡೆಯಲು ಕೆಲವು ನೋಟುಗಳನ್ನು ಸುಟ್ಟು ಹಾಕಿರುವುದು ಗೊತ್ತಾಗಿದೆ. ಅಲ್ಲದೆ ನೋಟುಗಳನ್ನು ಯಂತ್ರದ ಮೂಲಕ ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ. ನೋಟುಗಳು ಸುಸ್ಥಿತಿಯಲ್ಲಿದ್ದರೆ ಅವುಗಳನ್ನು ಹೊಸ ನೋಟುಗಳಾಗಿ ಪರಿವರ್ತಿಸಲಾಗುತ್ತದೆ. ಕಾರ್ಡ್ಬೋರ್ಡ್ ತಯಾರಿಕೆಯಲ್ಲಿ ಹಾನಿಗೊಳಗಾದ ನೋಟುಗಳನ್ನು ಬಳಸಲಾಗುತ್ತದೆ.
2016ರಲ್ಲಿ ನೋಟು ಅಮಾನ್ಯೀಕರಣ ನಡೆದಾಗ ಬ್ಯಾಂಕ್‌ಗಳು ಎಲ್ಲಾ ನೋಟುಗಳನ್ನು ಆರ್‌ಬಿಐಗೆ ಠೇವಣಿ ಇಟ್ಟಿದ್ದವು. ನಂತರ ಆ ನೋಟುಗಳನ್ನು ವಿವಿಧ ಕಾರ್ಖಾನೆಗಳಿಗೆ ಕಿಲೋ ದರದಲ್ಲಿ ಮಾರಾಟ ಮಾಡಲಾಗಿತ್ತು.
Personal Loan: ನೀವೂ ಕೂಡ ಪರ್ಸನಲ್ ಲೋನ್‌ಗಾಗಿ ಹುಡುಕುತ್ತಿದ್ದರೆ.. ಅದಕ್ಕೂ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ
ಈ ರೀತಿ ಸುಮಾರು 800 ಟನ್ ನೋಟುಗಳು ಮಾರಾಟವಾಗಿವೆ. 2000 ರೂಪಾಯಿ ನೋಟು ಮುದ್ರಣಕ್ಕೆ 4 ರೂಪಾಯಿ ವೆಚ್ಚವಾಗುತ್ತದೆ. ಅದೇ 500 ರೂಪಾಯಿ ನೋಟುಗಳನ್ನು ಮುದ್ರಿಸಲು 1 ರೂಪಾಯಿ ವೆಚ್ಚವಾಗುತ್ತದೆ.
Do you know what RBI is doing with the withdrawn Rupees 2000 notes