Business News

ನಿಮ್ಮ ಬ್ಯಾಂಕ್ ಖಾತೆಗೆ ನಾಮಿನಿ ಮಾಡಿಸಿಲ್ವಾ? ನಾಮಿನಿ ಇಲ್ಲದೆ ಇದ್ರೆ ಏನಾಗುತ್ತೆ ಗೊತ್ತಾ?

Nominee for Bank Account : ಈಗ ಡಿಜಿಟಲ್ (digital) ಯುಗ. ಹಾಗಾಗಿ ಪ್ರತಿಯೊಬ್ಬರು ಯುಪಿಐ ಬಳಕೆ (UPI) ಮಾಡಿ ಹಣ ವರ್ಗಾವಣೆ ಮಾಡುವುದು ಸಾಮಾನ್ಯವಾಗಿದೆ. ಈ ಯುಪಿಐ ಬಳಕೆ ಮಾಡಬೇಕು ಎಂದರೆ ಬ್ಯಾಂಕ್ ಖಾತೆ ಹೊಂದಿರಲೇಬೇಕು. ಹಾಗಾಗಿ ಈಗ ಪ್ರತಿಯೊಬ್ಬರು ಬ್ಯಾಂಕ್ ಖಾತೆ (bank account) ಹೊಂದುತ್ತಿದ್ದಾರೆ.

ಈಗ ಸಣ್ಣ ಸಣ್ಣ ವ್ಯವಹಾರ ಮಾಡುವವರು ಕ್ಯೂಆರ್ ಕೋಡ್ (QR code scan) ಬಳಕೆ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಆ ಮೂಲಕ ಅವರು ದುಡಿದ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಹೋಗುತ್ತಿದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 2 ಸಾವಿರ ಕಟ್ಟಿದ್ರೆ 5 ವರ್ಷಕ್ಕೆ ಲಕ್ಷ ಲಕ್ಷ ಆದಾಯ

ವಿವಿಧ ಬ್ಯಾಂಕ್‌ಗಳಲ್ಲಿ ಎಜುಕೇಶನ್ ಲೋನ್ ಮೇಲಿನ ಬಡ್ಡಿ ದರಗಳ ಸಂಪೂರ್ಣ ಮಾಹಿತಿ

ಈ ಬ್ಯಾಂಕ್ ಖಾತೆ ಇದ್ದರೆ ಮಾತ್ರ ಸಾಲುವುದಿಲ್ಲ. ಅದಕ್ಕೆ ನಾಮಿನಿಯನ್ನು (Nominee) ನಾವು ಸೇರಿಸಬೇಕಾಗುತ್ತದೆ. ಬ್ಯಾಂಕ್ ಖಾತೆ (Bank Account) ಹೊಂದಿದವರು ನಿಧನರಾದ ಸಮಯದಲ್ಲಿ ಇದು ಬಹಳ ಸಹಾಯಕ್ಕೆ ಬರುತ್ತದೆ. ಇಲ್ಲದಿದ್ದರೆ ಆ ಹಣವನ್ನು ಬಿಡಿಸಿಕೊಳ್ಳಲು ಬಹಳ ಸಂಕಷ್ಟ ಪಡಬೇಕಾಗುತ್ತದೆ.

ನಾಮಿನಿ ಎಂದರೇನು? (What is nominee)

ಒಬ್ಬ ವ್ಯಕ್ತಿ ಬ್ಯಾಂಕ್ ಖಾತೆ ತೆರೆಯುವ ವೇಳೆ ತನ್ನ ನಂತರ ತಾನು ಈ ಬ್ಯಾಂಕಿನಲ್ಲಿ ನಡೆಸುವ ಎಲ್ಲ ವ್ಯವಹಾರಗಳಿಗೆ ಆತ ಬಾಧ್ಯಸ್ಥನಾಗಿರುತ್ತಾನೆ ಎಂದು ಸೂಚಿಸುವುದಾಗಿದೆ. ಅದು ಆ ವ್ಯಕ್ತಿಯ ಪತ್ನಿ, ಮಕ್ಕಳು, ಸ್ನೇಹಿತರು ಯಾರೇ ಇರಬಹುದು. ಅದು ಬ್ಯಾಂಕ್ ಖಾತೆ ಹೊಂದಿದವನ ಇಷ್ಟಕ್ಕೆ ಬಿಟ್ಟ ವಿಚಾರವಾಗಿದೆ.

ಆದರೆ ಕೆಲವೊಂದು ಬಾರಿ ಹಲವರು ತಮ್ಮ ನಾಮಿನಿ ಹೆಸರನ್ನು ಅಪ್ಡೇಟ್ ಮಾಡಿರುವುದಿಲ್ಲ, ಕೆಲವೊಮ್ಮೆ ಹೆಸರಿಸಿರುವುದಿಲ್ಲ. ಇಂತಹವರು ಮೃತಪಟ್ಟ ವೇಳೆ ಅವರ ಹಣವನ್ನು ತೆಗೆದುಕೊಳ್ಳುವುದು ಇಲ್ಲವೇ ವರ್ಗಾವಣೆ ಮಾಡುವುದು ಕಷ್ಟವಾಗುತ್ತದೆ.

ಚಿನ್ನದ ಬೆಲೆ ಇಳಿಕೆ, ರಾತ್ರೋರಾತ್ರಿ ಚಿನ್ನಾಭರಣ ದರಗಳು ಕುಸಿತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Bank Accountಯಾಕೆ ನಾಮಿನಿ ಮಾಡಬೇಕು? (Why nominee is mandatory)

ಖಾತೆದಾರರು ಮೃತಪಟ್ಟ ಸಮಯದಲ್ಲಿ ಅವರ ಹಣವನ್ನು ಯಾರ ಖಾತೆಗೆ ವರ್ಗಾವಣೆ (money transfer) ಮಾಡಬೇಕು ಎಂದು ನಿರ್ಧರಿಸಲು ನಾಮಿನಿ ಅವಶ್ಯಕತೆ ಇರುತ್ತದೆ. ನಾಮಿನಿ ಎಂದರೆ ವಾರಸುದಾರರೇ ಆಗಿರಬೇಕು ಎಂದೇನಿಲ್ಲ. ನಿಮಗೆ ಯಾರ ಮೇಲೆ ವಿಶ್ವಾಸವಿದೆಯೋ ನೀವು ಯಾರನ್ನು ಅತಿಯಾಗಿ ನಂಬುತ್ತಿರೋ ಅಂತವರ ಹೆಸರನ್ನ ನಾಮಿನಿ ಆಗಿ ಸೂಚಿಸಬಹುದು.

ಸ್ವಂತ ಮನೆ, ಕಡಿಮೆ ಬಡ್ಡಿಗೆ ಹೋಮ್ ಲೋನ್ ಬೇಕಾ? ಈ ಸಲಹೆಗಳನ್ನು ಅನುಸರಿಸಿ ಸಾಕು

ನಾಮಿನಿ ಇಲ್ಲದಿದ್ದರೆ ಏನಾಗುತ್ತದೆ? (What happens if there is no nominee?)

ಒಂದು ವೇಳೆ ಖಾತೆ ಹೊಂದಿರುವವರು ನಾಮಿನಿ ಹೆಸರು ನೋಂದಣಿ ಮಾಡಿಸದೆ ಮರಣ ಹೊಂದಿದಲ್ಲಿ ಆ ಹಣವವನ್ನು ವರ್ಗಾವಣೆ ಮಾಡಿಸಿಕೊಳ್ಳಲು ಬಹಳ ಕಷ್ಟಪಡಬೇಕಾಗುತ್ತದೆ. ವಾರಸುದಾರರ ಮರಣ ಪ್ರಮಾಣಪತ್ರ ಸೇರಿದಂತೆ ಬ್ಯಾಂಕ್ಗಳು ಕೇಳುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಇಂತಹ ವಿನಾಕಾರಣ ತಿರುಗಾಟಗಳು ಹೆಚ್ಚಾಗುತ್ತದೆ. ಇದರ ಜೊತೆ ಪತ್ರಿಕೆಗಳಲ್ಲಿ ಜಾಹಿರಾತು (advertisements) ನೀಡಬೇಕಾಗುತ್ತದೆ. ವಿವಾಧಾತ್ಮಕ ಪ್ರಕರಣಗಳಲ್ಲಿ ವಾರಸುದಾರರು ಪ್ರೊಬೇಟ್ (probate) ಪಡೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಇಂತಹ ಪ್ರೊಬೆಟ್ ಪಡೆದುಕೊಳ್ಳಲು 50 ಸಾವಿರ ರೂ.ಗಳ ವರೆಗೂ ಖರ್ಚಾಗಬಹುದು.

ಯಾವುದೇ ಬಡ್ಡಿ ಇಲ್ಲದೆ ಸಿಗುತ್ತಿದೆ ಸಾಲ, ಇಎಂಐ ಕೂಡ ಕಟ್ಟಬೇಕಾಗಿಲ್ಲ; ಇಲ್ಲಿದೆ ಮಾಹಿತಿ

ಎಲ್ಲ ಸಮಸ್ಯೆಗಳಿಂದ ನೀವು ನಿಮ್ಮ ಮನೆಯವರನ್ನ ದೂರ ಇಡಬೇಕು ಎಂದಾದರೆ ಯಾವುದೇ ಸಮಯದಲ್ಲಿ ಹೂಡಿಕೆ ಮಾಡುವಾಗ ಅಥವಾ ಉಳಿತಾಯ ಮಾಡಲು ಬ್ಯಾಂಕ್ಗಳಲ್ಲಿ ಹಣ ಇಡುವಾಗ ನಾಮಿನಿ ಹೆಸರನ್ನ ಮೊದಲು ಸೂಚಿಸಿ.

Do you know what will happen if there is no nominee for Your Bank Account

Our Whatsapp Channel is Live Now 👇

Whatsapp Channel

Related Stories