ಹೆಂಡತಿಗೆ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಪಾಲು ಇರೋದಿಲ್ಲ! ಇಲ್ಲಿದೆ ನಿಯಮ
Wife Rights on Husband Property : ನಮ್ಮ ದೇಶದಲ್ಲಿ ಒಂದು ಸಂಬಂಧ ಹಾಳಾಗುವುದಕ್ಕೆ ಆಸ್ತಿ ವಿಚಾರ (property matters) ಮುಖ್ಯವಾದ ಕಾರಣ ಎನ್ನಬಹುದು. ಯಾಕೆಂದರೆ ಒಡಹುಟ್ಟಿದವರು ಕೂಡ ಆಸ್ತಿ ವಿಚಾರಕ್ಕಾಗಿ ಬೆಳೆಯುತ್ತಾ ದೊಡ್ಡವರಾಗಿ ದಾಯಾದಿಗಳೇ ಆಗಿ ಬಿಡುತ್ತಾರೆ.
ಅದೆಷ್ಟೋ ಕೇಸುಗಳು ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್ (court) ಮೆಟ್ಟಿಲೇರಿವೆ. ಹಾಗೂ ಇದುವರೆಗೆ ಇತ್ಯರ್ಥವಾಗದೆ ಕಾನೂನಿನ ಕಟಕಟೆಯಲ್ಲಿಯೇ ಕುಳಿತಿವೆ. ನಾವು ಕಾನೂನು ಹೋರಾಟಕ್ಕೆ ಮುಂದಾಗುವುದಕ್ಕೂ ಮೊದಲು ಕಾನೂನುಗಳನ್ನು ತಿಳಿದುಕೊಂಡರೆ (know law) ಹೆಚ್ಚು ಅನುಕೂಲ. ಯಾಕಂದ್ರೆ ಸುಖಾ ಸುಮ್ಮನೆ ಕೋರ್ಟ್, ಕಚೇರಿ ಎಂದು ಅಲೆದು ಹಣ ಮತ್ತು ನಮ್ಮ ಸಮಯ ಎರಡನ್ನು ವ್ಯರ್ಥ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ.
ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ; ಬೇಕಾಗುವ ದಾಖಲೆಗಳು ಇಂತಿವೆ
ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಯ ಪಾಲು! (Wife’s share in husband’s inherited property)
ಒಬ್ಬ ಗಂಡ ಹೆಂಡತಿ (husband and wife) ಇಬ್ಬರ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಕಾನೂನುಗಳು ಇವೆ. ಇವುಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಯಾರು ಕೂಡ ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ಕೆಲವು ಪ್ರಮುಖ ಮಾಹಿತಿ ಈ ಲೇಖನದಲ್ಲಿ ನೀಡುತ್ತಿದ್ದೇವೆ.
ಮೊದಲನೆಯದಾಗಿ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲಿದೆ ಎನ್ನುವ ಪ್ರಶ್ನೆ ಬಂದರೆ ಖಂಡಿತವಾಗಿಯೂ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇರುವುದಿಲ್ಲ. ಆದರೆ ಆಕೆಯ ಮಕ್ಕಳಿಗೆ ಅದರಲ್ಲಿ ಪಾಲು ಇರುತ್ತದೆ.
ಒಂದು ವೇಳೆ ಆಕೆಯ ಪತಿ ಮೃತಪಟ್ಟರೆ ಅಥವಾ ಆಕೆಗೆ ವಿಚ್ಛೇದನ (divorce) ಸಿಕ್ಕಾಗಲು ಕೂಡ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ. ಆದರೆ ಪತ್ನಿಗೆ ಮಾತ್ರ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದು ಬಿಡು ಕಾಸು ಕೂಡ ಹಕ್ಕಿನ ಮೂಲಕ ಪಡೆದುಕೊಳ್ಳಲು ಸಾಧ್ಯವಿಲ್ಲ.
ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಮುನ್ನ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ
ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು! (Wife’s share in independent property!)
ಇನ್ನು ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ದುಡಿದು ಹಣ ಸಂಪಾದನೆ ಮಾಡಿಟ್ಟರೆ ಅಥವಾ ಆಸ್ತಿ ಗಳಿಕೆ ಮಾಡಿದ್ದರೆ ಅದರಲ್ಲಿ ಆತನ ಪತ್ನಿಗೆ ಪಾಲಿದೆಯೇ ಎನ್ನುವ ಪ್ರಶ್ನೆ ಮೂಡಿದರೆ, ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಯಾಗಲಿ ಅಥವಾ ಆಕೆಯ ಮಕ್ಕಳಾಗಲಿ ಹಕ್ಕಿನ ಮೂಲಕ ಆಸ್ತಿ ಕೇಳುವಂತಿಲ್ಲ. ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾರಿಗೂ ಹಕ್ಕು ಇರುವುದಿಲ್ಲ. ಆ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು.
ಇನ್ನು ಒಂದು ವೇಳೆ ಪತಿ ವಿಲ್ (will) ಮಾಡಿಡದೆ ಮರಣ ಹೊಂದಿದರೆ ಆಗ ಆತಗಳಿಸಿರುವ ಸ್ವಯಾರ್ಜಿತ ಆಸ್ತಿಯಲ್ಲಿ ಆತನ ಹೆಂಡತಿ ಮತ್ತು ಮಕ್ಕಳಿಗೆ ಪಾಲು ಇರುತ್ತದೆ. ಆದರೆ ಆತ ಇಹಲೋಕ ತ್ಯಜಿಸುವ ಮೊದಲು ಬೇರೆ ಯಾರದ್ದೋ ಹೆಸರಿಗೆ ಉಯಿಲು ಮಾಡಿದ್ದರೆ ಆಗ ಹೆಂಡತಿಗಾಗಲಿ ಮಕ್ಕಳಿಗಾಗಲಿ ಆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ.
ಈ ಬ್ಯಾಂಕಿನಲ್ಲಿ ಪ್ರತ್ಯೇಕ ಎಫ್‌ಡಿ ಸ್ಕೀಮ್ ಲಾಂಚ್, ಠೇವಣಿಗೆ ಸಿಗಲಿದೆ ಆಕರ್ಷಕ ಬಡ್ಡಿ
ಗಂಡನ ಮನೆಯವರಿಗೆ ಅನ್ವಯಿಸುತ್ತೆ ನಿಯಮ!
ಇನ್ನು ಒಂದು ವೇಳೆ ಪತಿ ಮರಣ ಹೊಂದಿದರೆ, ಆತನ ತಂದೆ ತಾಯಿ ಅಥವಾ ಮನೆಯವರು ಆತನ ಹೆಂಡತಿಯನ್ನು ಬಲವಂತವಾಗಿ ಮನೆಯಿಂದ ಹೊರಗಡೆ ಹಾಕುವಂತಿಲ್ಲ. ಹೆಂಡತಿ, ಗಂಡ ತೀರಿ ಹೋದ ನಂತರವೂ ಗಂಡನ ಮನೆಯಲ್ಲಿಯೇ ಉಳಿದುಕೊಂಡು ತನ್ನ ಮಕ್ಕಳನ್ನು ಆಕೆ ಸಾಕಬಹುದು. ಆಕೆ ಇನ್ನೊಂದು ಮದುವೆ ಆದರೆ ಅಥವಾ ಗಂಡ ಬದುಕಿರುವಾಗ ವಿಚ್ಛೇದನ ನೀಡಿದರೆ ಮಾತ್ರ ಆಕೆ ಗಂಡನ ಮನೆಯನ್ನು ಬಿಟ್ಟು ಹೊರಗಡೆ ಬರಬಹುದು.
ಹೆಂಡತಿಗೆ ಗಂಡನಿಂದ ಸಿಗುತ್ತೆ ಜೀವನಾಂಶ! (Wife gets alimony from her husband!)
ಗಂಡನ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇಲ್ಲ ಎನ್ನುವ ಕಾರಣಕ್ಕೆ ಆಕೆಗೆ ಪತಿಯಿಂದ ಯಾವುದೇ ಆಸ್ತಿಯೂ ಸಿಗುವುದಿಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಒಂದು ವೇಳೆ ವಿಚ್ಛೇದನ ಆಗಿರುವ ಸಂದರ್ಭದಲ್ಲಿ ಜೀವನಾಂಶವನ್ನು ಕೊಡಬೇಕು. ಆತನ ಹಣಕಾಸಿನ ಪರಿಸ್ಥಿತಿಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ಜೀವನಾಂಶ ಯಾವ ರೀತಿ ಹೇಗೆ ಕೊಡಬೇಕು ಎನ್ನುವುದನ್ನು ತೀರ್ಮಾನಿಸಲಾಗುತ್ತದೆ. ಆದರೆ ನಂತರವೂ ಅವರ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ.
Does the wife really have a share in the inherited property of the husband