Business News

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ; ಬೇಕಾಗುವ ದಾಖಲೆಗಳು ಇಂತಿವೆ

Free Gas Connection : ಹೊಗೆ ಮುಕ್ತ ಅಡುಗೆ ಮನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಬಹಳ ದೊಡ್ಡ ಕನಸು, ಇದೇ ಕಾರಣಕ್ಕೆ ಮಹಿಳೆಯರಿಗೆ ಅನುಕೂಲವಾಗುವಂತೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (pradhanmantri Ujjwala Yojana) ಅಡಿಯಲ್ಲಿ ಇಂದು ಕೋಟ್ಯಂತರ ಮಹಿಳೆಯರು ಹೊಗೆಯಿಂದ ಉಂಟಾಗುವ ಕಾಯಿಲೆಯಿಂದ ದೂರ ಉಳಿದಿದ್ದಾರೆ ಎನ್ನಬಹುದು.

In this scheme, the price of a gas cylinder is only 500 rupees, Apply today

ಯಾಕೆಂದರೆ ಉಜ್ವಲ ಯೋಜನೆಯ ಅಡಿಯಲ್ಲಿ ಬಡ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಸ್ಟವ್ (free gas stove) ಹಾಗೂ ಸಿಲಿಂಡರ್ (free gas cylinder) ವಿತರಣೆ ಮಾಡಲಾಗುತ್ತಿದ್ದು, ಇಂದು ಅದೆಷ್ಟೋ ಅಡುಗೆ ಮನೆಗಳಲ್ಲಿ ಸುಲಭವಾಗಿ ಅಡುಗೆ ಮಾಡುವಂತೆ ಆಗಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಮುನ್ನ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ಉಚಿತ ಗ್ಯಾಸ್ ಸಿಲಿಂಡರ್ (Apply for free gas cylinder connection)

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅಡಿಯಲ್ಲಿ 450 ರೂಪಾಯಿಗಳಿಗೆ ಸಿಲಿಂಡರ್ ಪಡೆದುಕೊಳ್ಳಬಹುದಾಗಿದೆ. ವರ್ಷದಲ್ಲಿ 12 ಸಿಲಿಂಡರ್ ಗಳಿಗೆ ಭಾರಿ ಸಬ್ಸಿಡಿ (subsidy) ಯನ್ನು ಸರ್ಕಾರ ಘೋಷಿಸಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ (below poverty line family) ಮಹಿಳಾ ಸದಸ್ಯರು (women member) ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಇದಕ್ಕೆ ಬೇಕಾಗಿರುವ ದಾಖಲೆಗಳು ಏನು ಹಾಗೂ ಆನ್ಲೈನ್ ನಲ್ಲಿಯೇ ಹೇಗೆ ಅರ್ಜಿ ಸಲ್ಲಿಸುವುದು ಎನ್ನುವ ವಿವರಗಳು ಇಲ್ಲಿದೆ.

ಬೇಕಾಗುವ ಅರ್ಹತೆ! (Eligibility’s)

*18 ವರ್ಷ ಮೇಲ್ಪಟ್ಟ ಮಹಿಳೆಯರು ಅರ್ಜಿ ಸಲ್ಲಿಸಬಹುದು.

*ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳಾ ಸದಸ್ಯರು ಅರ್ಜಿ ಸಲ್ಲಿಸಬೇಕು.

*ಕುಟುಂಬದಲ್ಲಿ ಈಗಾಗಲೇ ಓ ಎಂ ಸಿ ಅಥವಾ ಎಲ್ ಪಿ ಜಿ ಕನೆಕ್ಷನ್ (LPG connection) ಇದ್ದರೆ ಅಂತಹ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುವುದಿಲ್ಲ.

*ಎಸ್ ಎಸ್ ಟಿ ಪಂಗಡಕ್ಕೆ ಸೇರಿದವರು, ಗ್ರಾಮೀಣ ಭಾಗದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳು, ಸಮಾಜದಲ್ಲಿ ಅತ್ಯಂತ ಹಿಂದುಳಿದ ವರ್ಗದವರು, ಅರಣ್ಯ ವಾಸಿಗಳು, SECC ಕುಟುಂಬದವರು, ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವವರು ಹೀಗೆ ಮೊದಲಾದ ಹಿಂದುಳಿದ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬಹುದು.

ಈ ಬ್ಯಾಂಕಿನಲ್ಲಿ ಪ್ರತ್ಯೇಕ ಎಫ್‌ಡಿ ಸ್ಕೀಮ್ ಲಾಂಚ್, ಠೇವಣಿಗೆ ಸಿಗಲಿದೆ ಆಕರ್ಷಕ ಬಡ್ಡಿ

LPG Gas Cylinderಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents)

ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ವಿವರ (ಕೆ ವೈ ಸಿ ಆಗಿರುವುದು ಕಡ್ಡಾಯ)
ಮೊಬೈಲ್ ಸಂಖ್ಯೆ
ಆಧಾರ್ ಕಾರ್ಡ್

ಎಲ್ಐಸಿ ಸಣ್ಣ ಉಳಿತಾಯ ಯೋಜನೆ, ಪ್ರತಿ ತಿಂಗಳು ಸಿಗಲಿದೆ ₹12,000 ಪಿಂಚಣಿ!

ಅರ್ಜಿ ಸಲ್ಲಿಸುವುದು ಹೇಗೆ? (How to apply)

PMUY ಅಧಿಕೃತ ವೆಬ್ಸೈಟ್ https://www.pmuy.gov.in/kn/ujjwala2.html ಗೆ ಭೇಟಿ ನೀಡಿ.

Click here to apply for New Ujjwala 2.0 connection ಎನ್ನುವ ಆಯ್ಕೆಯನ್ನು ಮುಖಪುಟದಲ್ಲಿ ಕಾಣುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.

ಈಗ ಭಾರತ್, ಇಂಡೆನ್, ಹೆಚ್ ಪಿ ಗ್ಯಾಸ್ ಕಂಪನಿಗಳ ಹೆಸರುಗಳನ್ನು ಕಾಣುತ್ತೀರಿ. ಅವುಗಳಲ್ಲಿ ಯಾವ ಕಂಪನಿಯ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಇಷ್ಟಪಡುತ್ತೀರೋ, ಅದರ ಕೆಳಗೆ ಅಪ್ಲೈ ನೌ ಎನ್ನುವ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಈಗ ನೀವು ಯಾವ ಗ್ಯಾಸ್ ಕಂಪನಿಯ ಆಯ್ಕೆ ಮಾಡಿದ್ದೀರೋ ಆ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ Regular LPG connection or Ujwala 2.0 New connection ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ. ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕಾಗುತ್ತದೆ.

ಇಂತಹ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗುತ್ತೆ 40,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

ಈ ಅಪ್ಲೋಡಿಂಗ್ ಪ್ರಕ್ರಿಯೆಗಳು ನಿಮಗೆ ತಿಳಿಯದೆ ಇದ್ದರೆ, ಮೇಲೆ ತಿಳಿಸಿರುವ ದಾಖಲೆಗಳನ್ನು ಹತ್ತಿರದ ಗ್ಯಾಸ್ ಏಜೆನ್ಸಿ (Gas agency) ಗೆ ತೆಗೆದುಕೊಂಡು ಹೋಗಿ ಅಲ್ಲಿಗೆ ಅರ್ಜಿ ಫಾರಂ ಭರ್ತಿ ಮಾಡಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಉಚಿತವಾಗಿ ಗ್ಯಾಸ್ ಕನೆಕ್ಷನ್ ನಿಮಗೆ ಸಿಕ್ಕರೆ ಒಂದು ಗ್ಯಾಸ್ ಸ್ಟವ್, ಒಂದು ಸಿಲಿಂಡರ್, ಒಂದು ಲೈಟರ್ ನೀಡಲಾಗುತ್ತದೆ. ಪ್ರತಿ ತಿಂಗಳು ಸಬ್ಸಿಡಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank Account) ತಲುಪುತ್ತದೆ.

apply for free gas Connection, Following are the required documents

Our Whatsapp Channel is Live Now 👇

Whatsapp Channel

Related Stories