ಇಂತಹ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗುತ್ತೆ 40,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

Education Scholarship : ದ್ವಿತೀಯ ಪಿಯುಸಿ (second PUC) ಮುಗಿಸಿರುವ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ 40,000 ವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು

Education Scholarship : ದೇಶದ ಅತ್ಯಂತ ನಂಬಿಕಸ್ಥ ಹೂಡಿಕೆ (investment) ಪ್ಲಾಟ್ಫಾರ್ಮ್ ಆಗಿರುವ ಭಾರತೀಯ ಜೀವ ವಿಮಾ ನಿಗಮ (Life Insurance Corporation of India) ಪ್ರತಿವರ್ಷದಂತೆ ಈ ಬಾರಿಯೂ ಕೂಡ ವಿದ್ಯಾರ್ಥಿಗಳಿಗೆ (scholarship) ನೀಡುತ್ತಿದೆ.

ಅದರಲ್ಲೂ ಈ ಬಾರಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ (LIC golden jubilee scholarship) ಘೋಷಣೆ ಮಾಡಲಾಗಿದ್ದು ದ್ವಿತೀಯ ಪಿಯುಸಿ (second PUC) ಮುಗಿಸಿರುವ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ 40,000 ವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು.

ಈ ಪೋಸ್ಟ್ ಆಫೀಸ್ ಸ್ಕೀಮ್‌ನ 6,000 ಉಳಿತಾಯಕ್ಕೆ 10 ಲಕ್ಷ ಸಿಗುತ್ತೆ! ಮುಗಿಬಿದ್ದ ಜನ

ಇಂತಹ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗುತ್ತೆ 40,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ - Kannada News

ಎಲ್ ಐ ಸಿ ಗೋಲ್ಡನ್ ಜುಬ್ಲಿ ಸ್ಕಾಲರ್ಶಿಪ್ 2024- (LIC golden jubilee scholarship 2024)

ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (scholarship) ನೀಡಿದರೆ ಅವರ ಉನ್ನತ ವಿದ್ಯಾಭ್ಯಾಸ (higher education) ಕ್ಕೆ ಸಹಾಯಕವಾಗುತ್ತದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಭಾರತೀಯ ಜೀವ ವಿಮಾ ನಿಗಮ ದ್ವಿತೀಯ ಪಿಯುಸಿ ಮುಗಿಸಿರುವವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲು ವಿದ್ಯಾರ್ಥಿವೇತನವನ್ನು ನೀಡುತ್ತಿದೆ.

2022 23ನೇ ಸಾಲಿನಲ್ಲಿ ಶೇಕಡ 60% ನಷ್ಟು ಅಂಕಗಳನ್ನು ಗಳಿಸಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಹರು.

ತಗ್ಗಿದ ಚಿನ್ನದ ಬೆಲೆ, ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್! ಎಷ್ಟಿದೆ ಇಂದಿನ ಗೋಲ್ಡ್ ರೇಟ್

ಯಾರು ಅರ್ಜಿ ಸಲ್ಲಿಸಬಹುದು? (Who can apply?)

*2022 23ರ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆ ಹೊಂದಿರುವ ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮೋ ಕೋರ್ಸ್ (diploma course) ಮುಗಿಸಿರುವ ವಿದ್ಯಾರ್ಥಿಗಳು, 60% ಅಂಕ ಗಳಿಸಿದ್ದರೆ ಎಲ್ಐಸಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

*ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ (yearly income) ರೂ.2,50,000 ಮೀರುವಂತಿರಬಾರದು.

*ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ಎಲ್ಐಸಿ ವಿಶೇಷ ಸ್ಕಾಲರ್ಶಿಪ್ ನೀಡುತ್ತಿದ್ದು 10ನೇ ತರಗತಿ ನಂತರ ದ್ವಿತೀಯ ಪಿಯುಸಿ ಹಾಗೂ ಪೂರಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಗೂಗಲ್ ಪೇ ಮೂಲಕವೇ ಪಡೆಯಿರಿ 1 ಲಕ್ಷ ರೂಪಾಯಿಗಳವರೆಗೆ ಸುಲಭ ಸಾಲ!

Education scholarshipಎಷ್ಟು ಸಿಗಲಿದೆ ವಿದ್ಯಾರ್ಥಿ ವೇತನ ಮೊತ್ತ?

ವೈದ್ಯಕೀಯ ಕ್ಷೇತ್ರ (medical field) ದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ರೂ.40,000 ಕೊಡಲಾಗುತ್ತದೆ. ಇದನ್ನು ಮೂರು ಹಂತಗಳಲ್ಲಿ ವಿತರಣೆ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ ರೂ.12,000 ಎರಡನೇ ಹಂತದಲ್ಲಿ ರೂ.12,000 ಹಾಗೂ ಮೂರನೇ ಹಂತದಲ್ಲಿ 16000 ರೂ.ಗಳನ್ನು ಪಡೆದುಕೊಳ್ಳಬಹುದು.

ಆಡ್-ಆನ್ ಕ್ರೆಡಿಟ್ ಕಾರ್ಡ್‌ಗಳ ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಎಲ್ಐಸಿಯ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ತಮ್ಮ 2022 23ನೇ ಸಾಲಿನ ಅಂಕಪಟ್ಟಿ, ಆಧಾರ್ ಕಾರ್ಡ್, ಪೋಷಕರ ಗುರುತಿನ ಚೀಟಿ, ಆದಾಯ ಪ್ರಮಾಣ ಪತ್ರ ಬ್ಯಾಂಕ್ ಖಾತೆಯ ವಿವರ ಮೊದಲಾದ ದಾಖಲೆಗಳನ್ನು, ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://gjss.licindia.in/GJSS/

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 14, 2024

LIC golden jubilee Education scholarship 2024

Follow us On

FaceBook Google News

LIC golden jubilee Education scholarship 2024