Business News

ಗೂಗಲ್ ಪೇ ಮೂಲಕವೇ ಪಡೆಯಿರಿ 1 ಲಕ್ಷ ರೂಪಾಯಿಗಳವರೆಗೆ ಸುಲಭ ಸಾಲ!

Google Pay Loan : ಹಣಕಾಸಿನ ವ್ಯವಹಾರಕ್ಕಾಗಿ (financial transaction) ನೀವು ಯುಪಿಐ ಮೆಥಡ್ (UPI payment method) ಬಳಕೆ ಮಾಡುತ್ತಿದ್ದರೆ ನಿಮಗೆ ಒಂದು ಗುಡ್ ನ್ಯೂಸ್ ಇದೆ. ಇನ್ನು ಮುಂದೆ ಯುಪಿಐ ನ ಥರ್ಡ್ ಪಾರ್ಟಿ ಅಪ್ಲಿಕೇಶನ್ (third party applications) ಆಗಿರುವ ಗೂಗಲ್ ಪೇ (Google pay) ಯಲ್ಲಿ ಹಣ ವರ್ಗಾವಣೆ ಮಾಡುವುದು ಮಾತ್ರವಲ್ಲದೆ ಸಾಲವನ್ನು ಕೂಡ ಪಡೆಯಬಹುದು.

ಗೂಗಲ್ ಪೇ ಮೂಲಕವೇ ಪಡೆಯಬಹುದು ಸಾಲ! (Loan by Google pay)

ಸಾಮಾನ್ಯವಾಗಿ ಯುಪಿಐ ಪೇಮೆಂಟ್ ಮಾಡಲು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೊದಲಾದ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು ಬಳಸುತ್ತೇವೆ. ಇನ್ನು ಮುಂದೆ ಇಂತಹ ಅಪ್ಲಿಕೇಶನ್ ಗಳನ್ನು ಹಣ ಪಾವತಿಗೆ ಮಾತ್ರವಲ್ಲದೆ ಅಪ್ಲಿಕೇಶನ್ಗಳ ಮೂಲಕ ನೀವು ವೈಯಕ್ತಿಕ ಸಾಲವನ್ನು (Personal Loan) ಕೂಡ ಪಡೆಯಬಹುದಾಗಿದೆ.

Best Opportunity To Earn Money With Google Pay

ಆಡ್-ಆನ್ ಕ್ರೆಡಿಟ್ ಕಾರ್ಡ್‌ಗಳ ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

ಹೌದು, ಗೂಗಲ್ ಪೇ ಅಥವಾ ಈಗ ಜಿ ಪೇ (Gpay) ಎಂದು ಕರೆಯಲ್ಪಡುವ ಅಪ್ಲಿಕೇಶನ್ ಅನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದರೆ, ನಿಮಗೆ ಒಂದು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ಕೂಡ ಇದೇ ಪ್ಲಾಂಟ್ ಫಾರ್ಮ್ ನಲ್ಲಿ ಪಡೆದುಕೊಳ್ಳಬಹುದು.

ಇದಕ್ಕಾಗಿ ನೀವು ಹೆಚ್ಚಿನ ದಾಖಲೆಗಳನ್ನು ಅಥವಾ ಶೂರಿಟಿ ನೀಡಬೇಕಾಗಿಲ್ಲ. ನಿಮ್ಮ ಲೋನ್ ಅಪ್ರೂವ್ (loan approve) ಆದ್ರೆ ಕ್ಷಣಮಾತ್ರದಲ್ಲಿ ಸಾಲದ ಮೊತ್ತ ಪಡೆಯಬಹುದು.

ಗೂಗಲ್ ಪೇ ಸಾಲ ಪಡೆಯುವುದು ಹೇಗೆ? (How to get a loan by Google pay)

ಮೊಟ್ಟ ಮೊದಲನೆಯದಾಗಿ ಇಲ್ಲಿ ನೀವು ಗಮನಿಸಬೇಕಾಗಿರುವ ಅಂಶ ಎಂದರೆ ಗೂಗಲ್ ಪೇ ತಾನು ನೇರವಾಗಿ ಸಾಲ ಸೌಲಭ್ಯ ನೀಡುವುದಿಲ್ಲ ಬದಲಾಗಿ ಎಕ್ಸೆಸ್ ಬ್ಯಾಂಕ್ (Axis Bank) , ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ನಂತಹ ಪ್ರಮುಖ ಬ್ಯಾಂಕ್ ಗಳೊಂದಿಗೆ ಟೈಅಪ್ ಆಗಿದ್ದು ಆ ಬ್ಯಾಂಕ್ ಗಳಿಂದಲೆ ಸಾಲ ಸೌಲಭ್ಯ ಒದಗಿಸುತ್ತದೆ.

ಬಜಾಜ್ ಫೈನಾನ್ಸ್ ನಿಂದ ಡಿಜಿಟಲ್ ಎಫ್‌ಡಿ ಸ್ಕೀಮ್ ಪ್ರಾರಂಭ! ಸಿಗುತ್ತೆ 8.85% ಬಡ್ಡಿ

ಗೂಗಲ್ ಪೇ ಮೂಲಕ ಸಾಲ ಸೌಲಭ್ಯ ಪಡೆಯುವುದು ಹೇಗೆ?

Google Pay Loanಇದಕ್ಕಾಗಿ ನೀವು ಯಾವುದೇ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯುವ ಅಗತ್ಯವಿಲ್ಲ. ಈಗ ಯಾವ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದೀರೋ ಅದೇ ಬ್ಯಾಂಕ್ ಖಾತೆಗೆ ಹಣ ಬರುವಂತೆ ಮಾಡಬಹುದು.

ವೈಯಕ್ತಿಕ ಸಾಲ ಸೌಲಭ್ಯ (personal loan) ಪಡೆದುಕೊಳ್ಳಲು ನೀವು ಗೂಗಲ್ ಪೇ ರೆಗ್ಯೂಲರ್ ಕಸ್ಟಮರ್ (regular users) ಆಗಿರಬೇಕು.

ಗೂಗಲ್ ಪೇಯಲ್ಲಿ ಸಾಕಷ್ಟು ಬಾರಿ ಹಣ ವರ್ಗಾವಣೆ ಮಾಡಿರಬೇಕು

ನಿಮ್ಮ ಕ್ರೆಡಿಟ್ ಸ್ಕೋರ್ (credit score) ಉತ್ತಮವಾಗಿರಬೇಕು. ಕ್ರೆಡಿಟ್ ಸ್ಕೋರ್ ಕನಿಷ್ಠ 750 ಪಾಯಿಂಟ್ಸ್ ಹೊಂದಿರಬೇಕು.

ಇತರ ಬ್ಯಾಂಕ್ ಅಥವಾ ಕಂಪನಿಯಲ್ಲಿ ಸಾಲ ಪಡೆದುಕೊಂಡು ಡೀಫಾಲ್ಟರ್ ಆಗಿರಬಾರದು

ತಿಂಗಳ ವೇತನ ಪಡೆದುಕೊಳ್ಳುವರಾಗಿರಬೇಕು.

ಇವು ಈ ವರ್ಷ ಬಿಡುಗಡೆಗೆ ಸಿದ್ಧವಾಗಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು!

ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು (needed to documents)

ಆಧಾರ್ ಸಂಖ್ಯೆ
ಪಾನ್ ಸಂಖ್ಯೆ
ಬ್ಯಾಂಕ್ ಖಾತೆಯ ವಿವರ
ಐ ಎಫ್ ಎಸ್ ಸಿ ಕೋಡ್
ಮೊಬೈಲ್ ಸಂಖ್ಯೆ

ಇಷ್ಟು ಮಾಹಿತಿಯನ್ನು ನೀಡಿದರೆ ಸಾಕು ಇದಕ್ಕಿಂತ ಹೆಚ್ಚಿಗೆ ದಾಖಲೆಗಳು ಅಥವಾ ಶೂರಿಟಿ (no surety) ನೀಡುವ ಅಗತ್ಯ ಇಲ್ಲ.

ಈ ಬ್ಯಾಂಕಿನ ಬಡ್ಡಿಯಲ್ಲಿ ಭಾರೀ ಏರಿಕೆ! ಫಿಕ್ಸೆಡ್ ಡೆಪಾಸಿಟ್ ಮಾಡೋರಿಗೆ ಗುಡ್ ನ್ಯೂಸ್

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಗೂಗಲ್ ಪೇ, ವೈಯಕ್ತಿಕ ಸಾಲ ಸೌಲಭ್ಯ ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ. ಇಲ್ಲಿ 15,000 ಗಳಿಂದ ಒಂದು ಲಕ್ಷ ರೂಪಾಯಿಗಳವರೆಗೆ ಗರಿಷ್ಠ ಮೊತ್ತದ ಸಾಲ ಪಡೆದುಕೊಳ್ಳಲು ಅವಕಾಶವಿದೆ.

ಗೂಗಲ್ ಪೇ ಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಮೊದಲು ಗೂಗಲ್ ಅಪ್ಲಿಕೇಶನ್ ತೆರೆಯಿರಿ. ಲೋನ್ಸ್ ಎನ್ನುವ ಆಯ್ಕೆಯನ್ನು ಕಾಣುತ್ತೀರಿ. ಅಲ್ಲಿ ನಿಮಗೆ ಯಾವ ರೀತಿಯ ಲೋನ್ ಬೇಕು ಎನ್ನುವುದನ್ನು ಆಯ್ಕೆ ಮಾಡಬೇಕು.

ಸಾಲದ ಮೊತ್ತ ಹಾಗೂ ಈ ಎಂ ಐ ಆಯ್ಕೆಯನ್ನು ಮಾಡಿದರೆ ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಲಾಗುತ್ತದೆ. ಅದು ಉತ್ತಮವಾಗಿದ್ದರೆ ಕ್ಷಣಮಾತ್ರದಲ್ಲಿ ನೀವು ಸಾಲ ಪಡೆದುಕೊಳ್ಳುತ್ತೀರಿ.

Get an easy loan of up to 1 lakh rupees through Google Pay

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories