ಈ ಪೋಸ್ಟ್ ಆಫೀಸ್ ಸ್ಕೀಮ್‌ನ 6,000 ಉಳಿತಾಯಕ್ಕೆ 10 ಲಕ್ಷ ಸಿಗುತ್ತೆ! ಮುಗಿಬಿದ್ದ ಜನ
Post Office Scheme : ದುಡ್ಡು ಉಳಿಸಬೇಕು ಅಂದ್ರೆ ತಕ್ಷಣ ಈ ಕೆಲಸ ಮಾಡಿ; 6,000 ಉಳಿತಾಯ ಮಾಡಿದರೆ 10 ಲಕ್ಷ ರೂಪಾಯಿ ಗಳಿಸಬಹುದು
Post Office Scheme : ಅಂತೂ ಇಂತೂ 2024 ಹೊಸ ವರ್ಷ (New year) ಆರಂಭವಾಗಿಯೇ ಬಿಟ್ಟಿದೆ. ಕಳೆದ ವರ್ಷ ಅಂತೂ ದುಡಿದ ಹಣದಲ್ಲಿ ಒಂದು ರೂಪಾಯಿ ಕೂಡ ಸೇವ್ ಮಾಡಲು ಸಾಧ್ಯವಾಗಿಲ್ಲ, ಹಾಗಾಗಿ ಈ ವರ್ಷವಾದರೂ ಹೂಡಿಕೆ (investment) ಮಾಡಿ ಹಣ ಉಳಿತಾಯ (savings) ಮಾಡಬೇಕು, ಎಂದು ಬಯಸಿದರೆ ನಾವು ಈ ಲೇಖನದಲ್ಲಿ ಒಂದು ಬೆಸ್ಟ್ ಉಳಿತಾಯ ಪ್ಲಾನ್ ಬಗ್ಗೆ ಹೇಳುತ್ತಿದ್ದೇವೆ.
ಲೇಖನ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ.
ತಗ್ಗಿದ ಚಿನ್ನದ ಬೆಲೆ, ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್! ಎಷ್ಟಿದೆ ಇಂದಿನ ಗೋಲ್ಡ್ ರೇಟ್
ಹೂಡಿಕೆ ಮಾಡಿದ ನಂತರ ಆ ಹಣವನ್ನು ಒಂದು ರೂಪಾಯಿ ಕೂಡ ಕಳೆದುಕೊಳ್ಳದೆ, ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚಿನ ಲಾಭ ಗಳಿಸಲು ಎಲ್ಲರೂ ಬಯಸುತ್ತಾರೆ. ಹಾಗೆ ನೀವು ಅಪಾಯ ಮುಕ್ತ ಹೂಡಿಕೆ ಬಯಸಿದರೆ ಪೋಸ್ಟ್ ಆಫೀಸ್ (post office) ಗಿಂತ ಅತ್ಯುತ್ತಮ ಪ್ಲೇಸ್ ಇನ್ನೊಂದಿಲ್ಲ.
ಅಂಚೆ ಕಚೇರಿಯ ಮರು ಕಳಿಸುವ ಠೇವಣಿ ಹೂಡಿಕೆ! (Post office RD)
ಇತ್ತೀಚಿಗೆ ಆರ್ ಡಿ (Recurrent Deposit) ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ಅಂಚೆ ಕಚೇರಿಯಲ್ಲಿ ನೀವು ಆರ್ ಡಿ ಆರಂಭಿಸಿದರೆ ಅತಿ ಉತ್ತಮ ಲಾಭ ಪಡೆದುಕೊಳ್ಳಬಹುದು. ಆರ್ ಡಿ ಐದು ವರ್ಷಗಳ ಹೂಡಿಕೆ ಯೋಜನೆ ಆಗಿದ್ದು, 6.5% ನಷ್ಟು ಬಡ್ಡಿ (interest rate) ದರವನ್ನು ನೀಡಲಾಗುತ್ತದೆ.
ಎಷ್ಟು ಹೂಡಿಕೆ ಮಾಡಿದ್ರೆ ಎಷ್ಟು ಲಾಭ?
ಆರ್‌ಡಿ 5 ವರ್ಷಗಳ ಹೂಡಿಕೆ ಯೋಜನೆ ಆಗಿದ್ದು ಇದರಲ್ಲಿ ನೀವು ಹೂಡಿಕೆ ಮಾಡಲು ಬಯಸಿದರೆ, ಪ್ರತಿ ತಿಂಗಳು 6 ಸಾವಿರ ರೂಪಾಯಿಗಳನ್ನು ಡಿಪಾಸಿಟ್ ಮಾಡಬೇಕು. ಇದು ವರ್ಷಗಳ ಹೂಡಿಕೆ ಅವಧಿ ಹೊಂದಿದ್ದರು ಕೂಡ 10 ವರ್ಷಗಳವರೆಗೆ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು.
ಈ ಯೋಜನೆಯ ವಿಶೇಷತೆ ಅಂದ್ರೆ ನೀವು ಕೇವಲ 100 ರೂಪಾಯಿಗಳನ್ನು ಕೂಡ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಒಂದು ಲೆಕ್ಕಾಚಾರದ ಪ್ರಕಾರ ನೀವು ಪ್ರತಿ ತಿಂಗಳು ಆರು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 10 ವರ್ಷಗಳಿಗೆ 7,20,000ಗಳನ್ನು ಹೂಡಿಕೆ ಮಾಡಿರುತ್ತೀರಿ.
ಗೂಗಲ್ ಪೇ ಮೂಲಕವೇ ಪಡೆಯಿರಿ 1 ಲಕ್ಷ ರೂಪಾಯಿಗಳವರೆಗೆ ಸುಲಭ ಸಾಲ!
ವರ್ಷಕ್ಕೆ 6.5% ನಷ್ಟು ಬಡ್ಡಿದರ ಎಂದು ಅಂದಾಜಿಸಿದರೆ ನೀವು ಬಡ್ಡಿ ಆಗಿ ಪಡೆಯುವ ಮೊತ್ತ 2,93,928 ರೂಪಾಯಿಗಳು. ಹೂಡಿಕೆಯ ಮೊತ್ತ ಹಾಗೂ ಬಡ್ಡಿ ದರ ಸೇರಿ ಹತ್ತು ವರ್ಷಗಳ ಅವಧಿಗೆ ನಿಮ್ಮ ಬಳಿ 10,13,928 ರೂಪಾಯಿಗಳು ಸಂಗ್ರಹವಾಗಿರುತ್ತವೆ. ಹಾಗಾದರೆ ಇನ್ಯಾಕೆ ತಡ ನಿಮ್ಮ ಕೈಯಲ್ಲಿ ಎಷ್ಟು ಹಣ ಇದೆಯೋ ಅಷ್ಟನ್ನೂ ಆರ್‌ಡಿ ಮಾಡಿ. ದೊಡ್ಡ ಮೊತ್ತದ ಲಾಭ ಪಡೆಯಿರಿ.
If you save 6,000 in this post office scheme, you will get 10 lakh rupees