ಎಲ್ಐಸಿ ಸಣ್ಣ ಉಳಿತಾಯ ಯೋಜನೆ, ಪ್ರತಿ ತಿಂಗಳು ಸಿಗಲಿದೆ ₹12,000 ಪಿಂಚಣಿ!

LIC Small Savings Scheme : ಒಮ್ಮೆ ಹೂಡಿಕೆ ಮಾಡಿದರೆ 60 ವರ್ಷದ ನಂತರ 12,000 ರೂ.ಗಳವರೆಗೆ ಪಿಂಚಣಿ (pension) ಪಡೆಯಬಹುದಾಗಿದೆ

LIC Small Savings Scheme : ನಮ್ಮ ಭವಿಷ್ಯದ ಆರ್ಥಿಕ ಪರಿಸ್ಥಿತಿ (financial condition) ಯಾವುದೇ ಕಾರಣಕ್ಕೂ ಹದಗೆಡಬಾರದು ಎಂದಿದ್ದರೆ ಇಂದಿನಿಂದಲೇ ಹೂಡಿಕೆ ಬಗ್ಗೆ ಯೋಚನೆ ಮಾಡಬೇಕು.

ಹೂಡಿಕೆ (investment) ಎಂದ ತಕ್ಷಣ ನಾವು ಯೋಚನೆ ಮಾಡುವುದೇ ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು. ಇದಕ್ಕೆ ಬೆಸ್ಟ್ ಪ್ಲಾಟ್ ಫಾರ್ಮ್ ಅಂದರೆ ಎಲ್ಐಸಿ.

ಹಲವಾರು ವರ್ಷಗಳಿಂದ ಜನರ ಭರವಸೆಯನ್ನು ಗಳಿಸಿಕೊಂಡು ಬಂದಿರುವ ಭಾರತೀಯ ಜೀವ ವಿಮಾ ನಿಗಮ (Life Insurance Corporation of India) ಇಲ್ಲಿಯವರೆಗೆ ಕೋಟ್ಯಾಂತರ ಗ್ರಾಹಕರಿಗೆ ಅನುಕೂಲವಾಗುವಂತಹ ಉತ್ತಮ ಹೂಡಿಕೆ ಪ್ಲಾನ್ ಗಳನ್ನು ನೀಡಿದೆ.

ಎಲ್ಐಸಿ ಸಣ್ಣ ಉಳಿತಾಯ ಯೋಜನೆ, ಪ್ರತಿ ತಿಂಗಳು ಸಿಗಲಿದೆ ₹12,000 ಪಿಂಚಣಿ! - Kannada News

ಇಂತಹ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗುತ್ತೆ 40,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

ಈಗ ಸಣ್ಣ ಉಳಿತಾಯ (small savings Scheme) ಯೋಜನೆಯಲ್ಲಿ, ಬಂಪರ್ ಆಫರ್ ನೀಡುತ್ತಿದ್ದು, ಒಮ್ಮೆ ಹೂಡಿಕೆ ಮಾಡಿದರೆ 60 ವರ್ಷದ ನಂತರ 12,000 ರೂ.ಗಳವರೆಗೆ ಪಿಂಚಣಿ (pension) ಪಡೆಯಬಹುದಾಗಿದೆ.

ಎಲ್ಐಸಿ ಯ ಸರಳ ಪಿಂಚಣಿ ಯೋಜನೆ! (LIC Saral pension scheme)

LIC Saral pension scheme 60 ವರ್ಷ ಮೇಲ್ಪಟ್ಟ ಜನರಿಗೆ ಅನುಕೂಲವಾಗುವಂತೆ ಪಿಂಚಣಿ ನೀಡಲು ಪಿಂಚಣಿ ಯೋಜನೆಯನ್ನು ಹೊಸದಾಗಿ ಪರಿಚಯಿಸಿದೆ. ಈ ಮೂಲಕ ಒಂದೇ ಬಾರಿ ಮೊತ್ತವನ್ನು ಹೂಡಿಕೆ ಮಾಡಿ 60 ವರ್ಷಗಳ ನಂತರ ಪ್ರತಿ ತಿಂಗಳು ರೂ.12,000ಗಳ ಪಿಂಚಣಿ ಪಡೆಯಬಹುದಾಗಿದೆ. ಈ ನೂತನ ಯೋಜನೆಯ ಅಡಿಯಲ್ಲಿ ನಿತ್ಯ ಜೀವನಕ್ಕೆ ಅಗತ್ಯವಾದ ಹಣವನ್ನು ಪಡೆಯಲು ಇಂದಿನಿಂದಲೇ ಹೂಡಿಕೆ ಆರಂಭಿಸಿ.

ಈ ಪೋಸ್ಟ್ ಆಫೀಸ್ ಸ್ಕೀಮ್‌ನ 6,000 ಉಳಿತಾಯಕ್ಕೆ 10 ಲಕ್ಷ ಸಿಗುತ್ತೆ! ಮುಗಿಬಿದ್ದ ಜನ

ಯಾರು ಹೂಡಿಕೆ ಮಾಡಬಹುದು?

ಎಲ್ಐಸಿ ಸರಳ ಪಿಂಚಣಿ ಯೋಜನೆಯ ಅಡಿಯಲ್ಲಿ, 40 ರಿಂದ 80 ವರ್ಷ ವಯಸ್ಸಿನವರು ಹೂಡಿಕೆ ಮಾಡಬಹುದಾಗಿದೆ.

ಇದು ಸಿಂಗಲ್ ಪ್ರೀಮಿಯಂ (single premium) ಡಿಪಾಸಿಟ್ ಇರುವಂತಹ ಯೋಜನೆ ಆಗಿದ್ದು, ನೀವು ಒಂದು ಬಾರಿಗೆ ಮಾತ್ರ ಹಣವನ್ನು ಠೇವಣಿ ಇಡಬೇಕಾಗುತ್ತದೆ.

ಈ ಹೂಡಿಕೆಯಲ್ಲಿ ನಾಮಿನಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಹೂಡಿಕೆಯ ಮೊತ್ತ ಹೂಡಿಕೆದಾರ ಮರಣ ಹೊಂದಿದರೆ ನಾಮಿನಿ (nominee) ಗೆ ವರ್ಗಾಯಿಸಲಾಗುತ್ತದೆ.

ಈ ಪಾಲಿಸಿ ತೆಗೆದುಕೊಂಡರೆ ಅರವತ್ತು ವರ್ಷಗಳ ನಂತರ ಪಿಂಚಣಿ ಪಡೆಯಬಹುದು. ತಿಂಗಳ, ಮೂರು ತಿಂಗಳ ಹಾಗೂ ಅರ್ಧ ವಾರ್ಷಿಕ ಆಯ್ಕೆಯನ್ನು ಮಾಡಿಕೊಂಡು, ಪಿಂಚಣಿ ಪಡೆಯಬಹುದು.

ತಗ್ಗಿದ ಚಿನ್ನದ ಬೆಲೆ, ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್! ಎಷ್ಟಿದೆ ಇಂದಿನ ಗೋಲ್ಡ್ ರೇಟ್

ಎಲ್ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಎಷ್ಟು ಹಣ ಹಿಂಪಡೆಯಬಹುದು ಎನ್ನುವುದನ್ನು ಒಂದು ಸಣ್ಣ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ, ನಿಮಗೆ 42 ವರ್ಷ ವಯಸ್ಸಾದಾಗ, 30 ಲಕ್ಷ ರೂಪಾಯಿಗಳನ್ನು ಎಲ್ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುತ್ತೀರಿ ಎಂದು ಭಾವಿಸಿ. ಅರವತ್ತು ವರ್ಷಗಳ ಬಳಿಕ (after 60 years) ಪ್ರತಿ ತಿಂಗಳು 12,388 ರೂಪಾಯಿಗಳ ಪಿಂಚಣಿ ನೀಡಲಾಗುವುದು.

ಪ್ರತಿ ತಿಂಗಳು 1,000 ಪಿಂಚಣಿ ಪಡೆದುಕೊಳ್ಳಲು ಬೇಕಾಗುವಷ್ಟು ಹೂಡಿಕೆ ಆರಂಭಿಸಬಹುದು. ಗರಿಷ್ಠ ಮೊತ್ತದ ಹೂಡಿಕೆಗೆ ಮಿತಿ ಇಲ್ಲ. ಹೆಚ್ಚಿನ ವಿವರಗಳಿಗಾಗಿ ಎಲ್ ಐ ಸಿ ಯ ಅಧಿಕೃತ ವೆಬ್ಸೈಟ್ https://licindia.in/lic-s-saral-pension-plan-no.-862-uin-512n342v01- ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.

LIC Small Savings Scheme, will get 12,000 pension every month

Follow us On

FaceBook Google News

LIC Small Savings Scheme, will get 12,000 pension every month