ಇನ್ಮೇಲೆ ಕ್ಯಾಶ್ ಪಡೆಯೋಕೆ ಎಟಿಎಂಗೆ ಹೋಗೋದೇ ಬೇಡ! ಮನೆಗೆ ಬರಲಿದೆ ಎಟಿಎಂ, ಹೊಸ ಸೇವೆ
ಜನರಿಗಾಗಿ ಇದೀಗ ಒಂದು ಹೊಸ ಸೇವೆ ಲಭ್ಯವಿದ್ದು, ಈ ಸೇವೆ ಇಂದ ನಿಮ್ಮ ಮನೆಗೆ ಬಂದು, ಹಣ ಕೊಡುತ್ತಾರೆ. ನೀವು ಎಟಿಎಂ ಗೆ ಹೋಗುವ ಅವಶ್ಯಕತೆ ಇಲ್ಲ. ಹಾಗೆಯೇ ಇದಕ್ಕಾಗಿ ನಿಮ್ಮ ಬಯೋಮೆಟ್ರಿಕ್ ಸರಿಯಾಗಿ ಇರುವುದು ತುಂಬಾ ಮುಖ್ಯ ಆಗುತ್ತದೆ.
ನಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣವಿದ್ದು, ಕ್ಯಾಶ್ ಪಡೆಯಬೇಕು ಎಂದರೆ ಬ್ಯಾಂಕ್ ಗೆ ಅಥವಾ ಎಟಿಎಂ ಗೆ ಹೋಗುತ್ತೇವೆ. ಆದರೆ ಮನೆಯಲ್ಲಿ ಹಿರಿಯರು ಇದ್ದರೆ, ಹುಷಾರಿಲ್ಲದೆ ಇರುವವರು ಇದ್ದರೆ ಅಂಥವರು ಎಟಿಎಂ ಗೆ (Bank ATM) ಹೋಗಲು ಆಗುವುದಿಲ್ಲ. ಆ ಥರದ ಪರಿಸ್ಥಿತಿಯಲ್ಲಿ ಇರುವ ಜನರಿಗಾಗಿ ಇದೀಗ ಒಂದು ಹೊಸ ಸೇವೆ ಲಭ್ಯವಿದ್ದು, ಈ ಸೇವೆ ಇಂದ ನಿಮ್ಮ ಮನೆಗೆ ಬಂದು, ಹಣ ಕೊಡುತ್ತಾರೆ. ನೀವು ಎಟಿಎಂ ಗೆ ಹೋಗುವ ಅವಶ್ಯಕತೆ ಇಲ್ಲ. ಹಾಗೆಯೇ ಇದಕ್ಕಾಗಿ ನಿಮ್ಮ ಬಯೋಮೆಟ್ರಿಕ್ ಸರಿಯಾಗಿ ಇರುವುದು ತುಂಬಾ ಮುಖ್ಯ ಆಗುತ್ತದೆ.
ಈ ಒಂದು ಸೇವೆ ಲಭ್ಯವಿರುವುದು ಪೋಸ್ಟ್ ಆಫೀಸ್ ನಲ್ಲಿ ಎನ್ನುವುದು ವಿಶೇಷ, ಈ ಸೇವೆಯ ಹೆಸರು ಡೋರ್ ಸ್ಟೆಪ್ ಎಟಿಎಂ (Doorstep ATM). ಈ ಒಂದು ಸೇವೆಯ ಮೂಲಕ ಜನರು ತಮ್ಮ ಮನೆ ಬಾಗಿಲಿನಲ್ಲೇ ಹಣ ಪಡೆದುಕೊಳ್ಳಬಹುದು. ಪೋಸ್ಟ್ ಮ್ಯಾನ್ ನಿಮ್ಮ ಮನೆಗೆ ಬಂದು, ಈ ಸೇವೆ ನೀಡುತ್ತಾರೆ. ಇದಕ್ಕಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು, ಹಾಗೆಯೇ ಬಯೋಮೆಟ್ರಿಕ್ ಸರಿಯಾಗಿ ಇರಬೇಕು. ಈ ಮೂಲಕ ನೀವು ಎಟಿಎಂ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
Jio, Airtel ಗೆ ಠಕ್ಕರ್ ಕೊಟ್ಟ BSNL ನೆಟ್ವರ್ಕ್ನಿಂದ ₹107 ರೂಪಾಯಿಗೆ 35 ದಿನಗಳ ವ್ಯಾಲಿಡಿಟಿ ಲಾಂಚ್
ಇದರಿಂದ ನೀವು ಹಣ ಪಡೆಯುವುದು ಮಾತ್ರವಲ್ಲದೇ, ಬ್ಯಾಲೆನ್ಸ್ ಚೆಕ್ ಮಾಡುವುದು ಹಾಗೂ ಇನ್ನಿತರ ಸೇವೆಗಳನ್ನು ಸಹ ಪಡೆಯಬಹುದು. ನಿಮ್ಮ ಬಯೋಮೆಟ್ರಿಕ್ ಗುರುತು ಸರಿ ಇದ್ದರೆ, ಸುಲಭವಾಗಿ ಈ ಸೇವೆಯ ಮೂಲಕ ಹಣ ಪಡೆಯಬಹುದು. ಈ ಸೇವೆ ಪಡೆಯಲು ನೀವು ಮೊದಲನೆಯದಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಪೋಸ್ಟ್ ಮ್ಯಾನ್ ಮೈಕ್ರೋ ಎಟಿಎಂ ಜೊತೆಗೆ ನಿಮ್ಮ ಮನೆಗೆ ಬರುತ್ತಾರೆ.
ನಿಮ್ಮ ಬಯೋಮೆಟ್ರಿಕ್ ಚೆಕ್ ಮಾಡಲಾಗುತ್ತದೆ, ಇದಕ್ಕಾಗಿ ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲ. ಬಯೋಮೆಟ್ರಿಕ್ ಸರಿ ಇದ್ದರೆ, ಪೋಸ್ಟ್ ಮ್ಯಾನ್ ನಿಮಗೆ ಕ್ಯಾಶ್ ನೀಡುತ್ತಾರೆ, ಬ್ಯಾಂಕ್ ಅಕೌಂಟ್ ಇಂದ ಹಣ ಡೆಬಿಟ್ ಆಗುತ್ತದೆ.
ಈ ಸೇವೆಯಲ್ಲಿ ಒಂದು ಸಾರಿಗೆ ನೀವು ₹10,000 ಪಡೆಯಬಹುದು. ಹಾಗೆಯೇ ಈ ಸೇವೆಗಾಗಿ ನೀವು ಹಣ ಕೊಡುವ ಅಗತ್ಯವಿಲ್ಲ. ಇಲ್ಲಿ ನಿಮ್ಮ ಡೀಟೇಲ್ಸ್ ತಪ್ಪಾದರೆ, ಆಧಾರ್ ಮಾಹಿತಿ ತಪ್ಪಾದರೆ, ಈ ವಹಿವಾಟು ಕ್ಯಾನ್ಸಲ್ ಆಗುತ್ತದೆ. ಈ ಸೇವೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ..
2 ದಿನಗಳಿಂದ ತೀವ್ರವಾಗಿ ಕುಸಿದಿದ್ದ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ, ಇಲ್ಲಿದೆ ಗೋಲ್ಡ್ ರೇಟ್ ಡೀಟೇಲ್ಸ್
https://ippbonline.com ನೀವು ವೆಬ್ಸೈಟ್ ಗೆ ಭೇಟಿ ನೀಡಿ, ಇದರಲ್ಲಿ ಡೋರ್ ಸ್ಟೆಪ್ ಬ್ಯಾಂಕಿಂಗ್ (Banking) ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಇಲ್ಲಿ ನಿಮ್ಮ ಹೆಸರು, ಫೋನ್ ನಂಬರ್, ಅಡ್ರೆಸ್, ಇಮೇಲ್ ಐಡಿ, ಪಿನ್ ಕೋಡ್ ಮತ್ತು ನಿಮಗೆ ಹತ್ತಿರ ಇರುವ ಪೋಸ್ಟ್ ಆಫೀಸ್ ಯಾವುದು ಎಂದು ಮತ್ತು ನಿಮ್ಮ ಬ್ಯಾಂಕ್ ಯಾವುದು ಎಂದು ಸೆಲೆಕ್ಟ್ ಮಾಡಬೇಕು. ಬಳಿಕ I Agree ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಇದಿಷ್ಟು ನಡೆದ ನಂತರ ಪೋಸ್ಟ್ ಆಫೀಸ್ ಇಂದ ಪೋಸ್ಟ್ ಮ್ಯಾನ್ ಬಂದು, ಮೈಕ್ರೋ ಎಟಿಎಂ ಸೇವೆ ನೀಡುತ್ತಾರೆ.
Don’t go to the ATM to get cash anymore