ಫ್ರಿಡ್ಜ್ ನಲ್ಲಿ ಬಿಸಿ ಬಿಸಿ ಪದಾರ್ಥ ಇಡುತ್ತಿದ್ದೀರಾ? ಏನಾಗುತ್ತೆ ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ

Refrigerator : ಬಿಸಿ ಆಹಾರ ಅಥವಾ ಹಾಲನ್ನು ನೇರವಾಗಿ ಫ್ರಿಡ್ಜ್ ನಲ್ಲಿ ಇಡುವುದು ದೊಡ್ಡ ತಪ್ಪು. ಇದು ಕೇವಲ ಫ್ರಿಜ್ ಕಂಪ್ರೆಸರ್‌ಗೆ ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ಹಾನಿ ಮಾಡುವ ಸಾಧ್ಯತೆ ಇದೆ.

Refrigerator : ಬಹುತೇಕ ಮನೆಗಳಲ್ಲಿ ಕಾಣುವ ಒಂದು ಸಾಮಾನ್ಯ ಅಭ್ಯಾಸ ಎಂದರೆ, ಬಿಸಿ ಊಟ ಅಥವಾ ಹಾಲನ್ನು ನೇರವಾಗಿ ಫ್ರಿಡ್ಜ್ ನಲ್ಲಿ (Fridge) ಇಡುವುದು. ಈ ಕ್ರಮದಿಂದ ತಕ್ಷಣ ಯಾವುದೇ ಹಾನಿ ಆಗದಂತೆ ಕಾಣಿಸಿದರೂ, ದೀರ್ಘಾವಧಿಯಲ್ಲಿ ಅದು ಫ್ರಿಜ್‌ನ ಆಯುಷ್ಯ ಮತ್ತು ನಿಮ್ಮ ಹಣಕಾಸಿಗೆ ಭಾರವಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಬಿಸಿ ಪದಾರ್ಥಗಳನ್ನು ಫ್ರಿಡ್ಜ್ ಒಳಗೆ ಇಡುವಾಗ ಅದರ ಒಳಗಿನ ತಾಪಮಾನ ಏರುತ್ತದೆ. ಇದರ ಪರಿಣಾಮವಾಗಿ ಫ್ರಿಜ್‌ನ ಕಂಪ್ರೆಸರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಅತಿಯಾದ ಒತ್ತಡದಿಂದ ಕಂಪ್ರೆಸರ್ ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಕಂಪ್ರೆಸರ್ ರಿಪೇರ್ ಮಾಡಲು ಹೆಚ್ಚು ಹಣ ಮತ್ತು ಸಮಯ ಬೇಕಾಗುತ್ತದೆ.

ಇದೆ ವೇಳೆಯಲ್ಲಿ, ಬಿಸಿ ಆಹಾರವನ್ನು ನೇರವಾಗಿ ಫ್ರಿಜ್‌ನಲ್ಲಿ ಇಟ್ಟರೆ ಅದು ಒಳಗಿನ ಇತರ ಆಹಾರಗಳಿಗೂ ತಾಪಮಾನ ಹಂಚಿಕೊಳ್ಳುತ್ತದೆ. ಇದರಿಂದ ಆಹಾರ ಶೀಘ್ರ ಹಾಳಾಗಬಹುದು ಹಾಗೂ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದಲೂ ಇದು ಅಪಾಯಕರವಾಗಿದೆ.

ತಜ್ಞರ ಸಲಹೆ ಪ್ರಕಾರ, ಬಿಸಿ ಆಹಾರವನ್ನು ಕನಿಷ್ಠ 30 ನಿಮಿಷದಿಂದ 1 ಗಂಟೆವರೆಗೆ ತಣ್ಣಗಾಗಲು ಬಿಡಿ. ನಂತರವೇ ಅದನ್ನು ಫ್ರಿಜ್‌ನಲ್ಲಿ ಇಡುವುದು ಸುರಕ್ಷಿತ. ಇಂತಹ ಸರಳ ಕ್ರಮಗಳಿಂದ ನೀವು ಫ್ರಿಜ್‌ನ ಆಯುಷ್ಯ ಉಳಿಸಬಹುದು ಮತ್ತು ನಿಮ್ಮ ಆರೋಗ್ಯಕ್ಕೂ ರಕ್ಷಣೆ ನೀಡಬಹುದು.

Don’t Put Hot Food in the Fridge

Related Stories