ನಿಮ್ಮ ಪತ್ನಿ ಹೆಸರಲ್ಲಿ 2 ಲಕ್ಷ ಎಫ್‌ಡಿ ಇಟ್ರೆ 2 ವರ್ಷದಲ್ಲಿ ಒನ್ ಟು ಡಬಲ್ ಲಾಭ
ಅಂಚೆ ಕಚೇರಿಯಲ್ಲಿ ಪತ್ನಿಯ ಹೆಸರಿನಲ್ಲಿ 2 ಲಕ್ಷ ರೂ.ಗಳ ಸ್ಥಿರ ಠೇವಣಿ ಇಟ್ಟರೆ ಕೇವಲ 2 ವರ್ಷಗಳಲ್ಲಿ 29 ಸಾವಿರ ರೂ.ಗೂ ಹೆಚ್ಚು ಬಡ್ಡಿ ಲಾಭ ಪಡೆಯಬಹುದು.

- ಪೋಸ್ಟ್ ಆಫೀಸ್ TD ಯೋಜನೆ ಮೇಲೆ ಶೇಕಡಾ 7 ಬಡ್ಡಿ
- 2 ವರ್ಷದಲ್ಲಿ 2 ಲಕ್ಷ FD ಮೇಲೆ ₹29,776 ಬಡ್ಡಿ ಲಾಭ
ಇಂದಿನ ದಿನಗಳಲ್ಲಿ ಬ್ಯಾಂಕುಗಳು ಬಡ್ಡಿದರಗಳನ್ನು (interest rates) ತಗ್ಗಿಸುತ್ತಿರುವಾಗ, ಪೋಸ್ಟ್ ಆಫೀಸ್ (Post Office) ತನ್ನ ಉಳಿತಾಯ ಯೋಜನೆಗಳ (savings schemes) ಮೇಲೆ ಹಿಂದಿನಂತೆಯೇ ಆಕರ್ಷಕ ಬಡ್ಡಿಯನ್ನು ನೀಡುತ್ತಿದೆ.
ರಿಸರ್ವ್ ಬ್ಯಾಂಕ್‌ನ (RBI) ರೆಪೊ ದರ ಕಡಿತವಾದ ನಂತರವೂ, ಅಂಚೆ ಇಲಾಖೆ ತನ್ನ ಗ್ರಾಹಕರಿಗೆ ಶೇಕಡಾ 7 ರಷ್ಟು ಬಡ್ಡಿ ನೀಡುತ್ತಿದೆ.
ಅಂಚೆ ಕಚೇರಿಯ TD (Time Deposit) ಯೋಜನೆ ಸಾಮಾನ್ಯ FDಯಂತೆಯೇ ಕಾರ್ಯನಿರ್ವಹಿಸುತ್ತದೆ. 1, 2, 3 ಮತ್ತು 5 ವರ್ಷಗಳ ಅವಧಿಗೆ ಟಿಡಿ ಲಭ್ಯವಿದೆ. 2 ವರ್ಷದ TDಗೆ ಶೇಕಡಾ 7 ಬಡ್ಡಿ ಲಭಿಸುತ್ತದೆ. ಕನಿಷ್ಠ ₹1000 ರಿಂದ ಆರಂಭಿಸಬಹುದಾದ ಈ ಯೋಜನೆಗೆ ಗರಿಷ್ಠ ಮಿತಿಯಿಲ್ಲ.
ಇದನ್ನೂ ಓದಿ: ತಕ್ಷಣ ಲೋನ್ ಬೇಕಾ? ಈ ಡಾಕ್ಯುಮೆಂಟ್ ಇದ್ರೆ ಚಿಟಿಕೆ ಹೊಡೆಯೋದ್ರಲ್ಲಿ ಹಣ ಸಿಗುತ್ತೆ
ಪತ್ನಿಯ ಹೆಸರಿನಲ್ಲಿ ನೀವು ₹2,00,000 ರೂ. ಟಿಡಿ ಮಾಡಿಸಿದ್ದರೆ, 2 ವರ್ಷಗಳಲ್ಲಿ ₹29,776 ಬಡ್ಡಿ ಲಭಿಸಿ, ಒಟ್ಟು ₹2,29,776 ಆಗುತ್ತದೆ. ಇದು ಖಾತರಿಯಾದ ಲಾಭ, ಯಾವ ಅಪ್-ಡೌನ್ ಇಲ್ಲದೆ ಸಿಗುತ್ತದೆ. ಎಲ್ಲ ವರ್ಗದ ವ್ಯಕ್ತಿಗಳಿಗೆ — ಪುರುಷರು, ಮಹಿಳೆಯರು, ಹಿರಿಯ ನಾಗರಿಕರಿಗೂ — ಸಮಾನ ಬಡ್ಡಿದರ ನೀಡಲಾಗುತ್ತದೆ.
ಈ ಯೋಜನೆಯು ಬ್ಯಾಂಕ್ ಎಫ್‌ಡಿಗಳಂತೆಯೇ (Fixed Deposit) ಸುರಕ್ಷಿತ ಮತ್ತು ಭದ್ರವಾಗಿದೆ. ನೀವು ಇದರಲ್ಲಿ ಹೂಡಿಕೆ ಮಾಡಿದರೆ ಸ್ಥಿರ ಆದಾಯವನ್ನು ನಿರೀಕ್ಷಿಸಬಹುದು. ಇದಲ್ಲದೆ, ಪೋಸ್ಟ್ ಆಫೀಸ್ TD ಯೋಜನೆ ನಿಮ್ಮ ಪತ್ನಿಗೆ ಬಂಡವಾಳವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚೆಕ್ ಬೌನ್ಸ್ ಆದ್ರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? 99% ಜನಕ್ಕೆ ಈ ವಿಚಾರ ಗೊತ್ತಿಲ್ಲ
ಹೆಚ್ಚಿನ ಜನರು ಇಂದು ವಂಚನೆಗಳಿಂದ ತಪ್ಪಿಸಲು ಸರ್ಕಾರದ ಬ್ಯಾಂಕಿಂಗ್ ಜಾಲದಲ್ಲಿಯೇ ಹೂಡಿಕೆ ಮಾಡಲು ಇಚ್ಛಿಸುತ್ತಿದ್ದಾರೆ. TD ಖಾತೆ ಪ್ರಕ್ರಿಯೆ ಸರಳವಾಗಿದ್ದು, ಪಾಸ್‌ಬುಕ್‌ನೊಂದಿಗೆ ನಿಮ್ಮ FD ಪ್ರಕ್ರಿಯೆಯನ್ನು ಆನ್‌ಲೈನ್ ಅಥವಾ ನೇರವಾಗಿ ಅರ್ಜಿ ಸಲ್ಲಿಸಿ ಆರಂಭಿಸಬಹುದು.
Earn 29,776 Profit in 2 Years with Wife’s FD in Post Office




