ತಕ್ಷಣ ಲೋನ್ ಬೇಕಾ? ಈ ಡಾಕ್ಯುಮೆಂಟ್ ಇದ್ರೆ ಚಿಟಿಕೆ ಹೊಡೆಯೋದ್ರಲ್ಲಿ ಹಣ ಸಿಗುತ್ತೆ
ಪರ್ಸನಲ್ ಲೋನ್ ತ್ವರಿತವಾಗಿ ಪಡೆದುಕೊಳ್ಳಲು ಸರಿಯಾದ ಅರ್ಹತೆ ಮತ್ತು ಸಂಪೂರ್ಣ ಡಾಕ್ಯುಮೆಂಟ್‌ಗಳು ಅತ್ಯಗತ್ಯ. ಇಂದು ಹೆಚ್ಚಿನ ಬ್ಯಾಂಕ್‌ಗಳು ಕೆಲವೇ ಗಂಟೆಗಳಲ್ಲಿ ಲೋನ್ ಮಂಜೂರು ಮಾಡುತ್ತಿವೆ.

- ಲೋನ್ ಮಂಜೂರಿಗೆ KYC, ಇನ್‌ಕಮ್ ಪ್ರೂಫ್ ಅವಶ್ಯಕ
- ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ಮಿಂಚಿನ ವೇಗದಲ್ಲಿ ಅಪ್ಪ್ರೋವ್ ಆಗುತ್ತೆ
- ಕೆಲವೇ ಗಂಟೆಗಳಲ್ಲಿ ಖಾತೆಗೆ ಹಣ ಕ್ರೆಡಿಟ್ ಸಾಧ್ಯ
personal loan : ತಕ್ಷಣ ಹಣದ ಅವಶ್ಯಕತೆ ಎದುರಾದಾಗ, ಪರ್ಸನಲ್ ಲೋನ್ (personal loan) ಅತ್ಯುತ್ತಮ ಆಯ್ಕೆ ಆಗಿದೆ. ಆದರೆ ಲೋನ್ ಅರ್ಜಿ ಹಾಕಿದ ದಿನವೇ ಹಣ ಖಾತೆಗೆ ಬಾರದಿದ್ದರೆ, ಅದಕ್ಕೆ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳ ಸಮಸ್ಯೆ ಕಾರಣವಾಗಬಹುದು.
ಈಗ ಡಿಜಿಟಲ್ ಬ್ಯಾಂಕಿಂಗ್ (digital banking) ಮತ್ತು ಆನ್‌ಲೈನ್ ಲೋನ್ ಪ್ಲಾಟ್‌ಫಾರ್ಮ್‌ಗಳ ಬೆಳವಣಿಗೆಯಿಂದ, ಕೆಲವೇ ಗಂಟೆಗಳಲ್ಲಿ ಅಥವಾ ಕೆಲವೊಮ್ಮೆ 5 ನಿಮಿಷಗಳಲ್ಲಿ ಲೋನ್ ಮಂಜೂರಾಗುತ್ತಿದೆ. ಆದರೆ ಇದರ ಹಿಂದೆ ನೀವು ಪೂರ್ಣವಾಗಿ ಸಿದ್ಧವಾಗಿರಬೇಕಾದ ಪ್ರಕ್ರಿಯೆ ಇದೆ.
ಇದನ್ನೂ ಓದಿ: ಚೆಕ್ ಬೌನ್ಸ್ ಆದ್ರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? 99% ಜನಕ್ಕೆ ಈ ವಿಚಾರ ಗೊತ್ತಿಲ್ಲ
ಪರ್ಸನಲ್ ಲೋನ್‌ಗಳು unsecured loan ಆಗಿದ್ದು, ಇದಕ್ಕೆ ಯಾರಿಂದಲೂ guarantee ಅಥವಾ asset ಬೇಡ. ಬ್ಯಾಂಕ್‌ಗಳು ಅಥವಾ NBFCಗಳು ನಿಮ್ಮ ಆರ್ಥಿಕ ಸ್ಥಿತಿ, ಕ್ರೆಡಿಟ್ ಸ್ಕೋರ್ (credit score), ಹಾಗೂ ಡಾಕ್ಯುಮೆಂಟ್‌ಗಳ ಪರಿಶೀಲನೆಯ ಮೂಲಕ ಮಾತ್ರ ನಿಮ್ಮ loan eligibility ಪರಿಶೀಲಿಸುತ್ತವೆ.
ಲೋನ್ ಮಂಜೂರಿಗೆ ಕೆಲವು ಪ್ರಮುಖ ಡಾಕ್ಯುಮೆಂಟ್‌ಗಳು ಅಗತ್ಯವಿರುತ್ತವೆ – ಪ್ಯಾನ್ ಕಾರ್ಡ್, ಆದಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಮುಂತಾದ KYC ಪ್ರೂಫ್, ಪಾಸ್‌ಪೋರ್ಟ್ ಸೈಜ್ ಫೋಟೋ, ಇತ್ತೀಚಿನ 3 ರಿಂದ 6 ತಿಂಗಳ salary slips ಮತ್ತು bank statements.
ಇದನ್ನೂ ಓದಿ: ಫಸ್ಟ್ ಟೈಮ್ ಪರ್ಸನಲ್ ಲೋನ್ ಅಪ್ಲೈ ಮಾಡ್ತಾ ಇದ್ದೀರಾ? ಈ ತಪ್ಪುಗಳನ್ನು ತಪ್ಪಿಸಿ
ಸ್ವತಂತ್ರ ಉದ್ಯೋಗಸ್ಥರಾಗಿದ್ದರೆ, ಇತ್ತೀಚಿನ 1-2 ವರ್ಷಗಳ ಇನ್‌ಕಮ್ ಟ್ಯಾಕ್ಸ್ ರಿಟರ್ನ್ (ITR) ಅಥವಾ audit ಮಾಡಿದ financials ಕಡ್ಡಾಯ. ಕೆಲ ಬ್ಯಾಂಕ್‌ಗಳು employer ID ಅಥವಾ address proof ರೂಪದಲ್ಲಿ utility bills ಕೂಡ ಕೇಳುತ್ತವೆ.
ಡಿಜಿಟಲ್ ಅಥವಾ ವೀಡಿಯೋ KYC ಪ್ರಕ್ರಿಯೆ ಮೂಲಕ ಅರ್ಜಿ ಪ್ರಕ್ರಿಯೆ ಇನ್ನಷ್ಟು ವೇಗವಾಗುತ್ತದೆ. Axis Bank, IndusInd Bank ಮುಂತಾದ ಸಂಸ್ಥೆಗಳು ಪೇಪರ್‌ಲೆಸ್ onboarding ಪ್ಲಾಟ್‌ಫಾರ್ಮ್‌ಗಳನ್ನು ಒದಗಿಸುತ್ತಿವೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ 80-100% ಲೋನ್ ಸೌಲಭ್ಯ! ಮಿಸ್ ಮಾಡ್ಕೋಬೇಡಿ
Bajaj Finserv, HDFC Bank, Axis Bank, ICICI Bank ಮುಂತಾದವರು, ಇತ್ತೀಚಿನ ದಿನಗಳಲ್ಲಿ same-day loan disbursal ಆರಂಭಿಸಿದ್ದಾರೆ. ಆದರೆ ಅದಕ್ಕಾಗಿ ನೀವು documentation ಪೂರ್ಣವಾಗಿ ಸಿದ್ಧಪಡಿಸಿರಬೇಕು.
ಒಟ್ಟಿನಲ್ಲಿ, ತ್ವರಿತ ಲೋನ್ ಪಡೆದುಕೊಳ್ಳಲು planning ಮತ್ತು ಸಕಾಲಿಕ ಡಾಕ್ಯುಮೆಂಟ್ ಸಿದ್ಧತೆ ಮುಖ್ಯ. ನಿಮ್ಮ credit history ಶುದ್ಧವಾಗಿದ್ದರೆ, ನಿಮ್ಮ ಅರ್ಜಿ reject ಆಗುವ ಸಾಧ್ಯತೆ ಕಡಿಮೆಯಿರುತ್ತದೆ ಮತ್ತು approval process ವೇಗವಾಗಿ ನಡೆಯುತ್ತದೆ.
Need Urgent Personal Loan, Here’s What You Must Do




