ಎಲೆಕ್ಟ್ರಿಕ್ ಸ್ಕೂಟರ್ ಆಫರ್: ₹16,459 ರಿಯಾಯಿತಿ, 95ಕಿಮೀ ಮೈಲೇಜ್, 5 ವರ್ಷ ಬ್ಯಾಟರಿ ವಾರಂಟಿ

ಕೇವಲ ₹73,540 ಕ್ಕೆ ಸಿಗುವ ಈ ಎಲೆಕ್ಟ್ರಿಕ್ ಸ್ಕೂಟರ್‌ ಈಗ ಭಾರಿ ಆಫರ್‌ನಲ್ಲಿ ಲಭ್ಯ. 95ಕಿಮೀ ಮೈಲೇಜ್, 65ಕಿಮೀ ವೇಗ ಮತ್ತು 5 ವರ್ಷಗಳ ಬ್ಯಾಟರಿ ವಾರಂಟಿ ಇದರ ವಿಶೇಷತೆ.

Electric Scooter : ನಗರಗಳಲ್ಲಿ ಸಂಚಾರ ವೆಚ್ಚ ಕಡಿಮೆ ಮಾಡಲು ಮತ್ತು ಪರಿಸರ ಸ್ನೇಹಿ ಪ್ರಯಾಣಕ್ಕಾಗಿ ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆ ಹೆಚ್ಚುತ್ತಿದೆ. ಇದೇ ಹಿನ್ನಲೆಯಲ್ಲಿ Ampere Magnus Neo Electric Scooter ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಈ ಸ್ಕೂಟರ್‌ನ್ನು ಕೇವಲ ₹73,540 ಕ್ಕೆ ಖರೀದಿಸಬಹುದು ಎಂದು ಅಮೆಜಾನ್‌ ಆಫರ್ ನೀಡಿದೆ. ಅಂದರೆ ರೂ.16,459 ರಿಯಾಯಿತಿ ಲಭ್ಯ.

ಈ ಸ್ಕೂಟರ್‌ನಲ್ಲಿ 2.3 kWh ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಬಳಸಲಾಗಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಬ್ಯಾಟರಿಯನ್ನು ಬೇರ್ಪಡಿಸಿ ಮನೆಯಲ್ಲಿ ಚಾರ್ಜ್ ಮಾಡಬಹುದು. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ ಇದು ಬಹಳ ಉಪಯುಕ್ತ. ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು ಸುಮಾರು 5-6 ಗಂಟೆಗಳು ಬೇಕು, ಮತ್ತು ಒಂದೇ ಚಾರ್ಜ್‌ನಲ್ಲಿ ಸರಾಸರಿ 95-100 ಕಿಲೋಮೀಟರ್ ದೂರ ಪ್ರಯಾಣಿಸಬಹುದು.

ಇದನ್ನೂ ಓದಿ: ಹೊಸ ರೂಲ್ಸ್, ದಿನಕ್ಕೆ ₹2 ಲಕ್ಷ ಮೀರಿ ನಗದು ವ್ಯವಹಾರ ಮಾಡಿದ್ರೆ ದಂಡ ಎಷ್ಟು ಗೊತ್ತಾ

ಮ್ಯಾಗ್ನಸ್ ನಿಯೋ ಸ್ಕೂಟರ್‌ನ ಅತ್ಯಂತ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ — 5 ವರ್ಷದ ಬ್ಯಾಟರಿ ವಾರಂಟಿ ಅಥವಾ 75,000 ಕಿಮೀ ವರೆಗೆ ವಾರಂಟಿ. ದಿನವೂ 40 ಕಿಮೀ ಓಡಿಸಿದರೂ ಐದು ವರ್ಷಗಳಲ್ಲಿ 72,000 ಕಿಮೀ ಮುಟ್ಟುತ್ತದೆ. ಆದ್ದರಿಂದ ಈ ಸ್ಕೂಟರ್‌ನ ದೀರ್ಘಾವಧಿ ನಂಬಿಕೆ ಹೆಚ್ಚಿದೆ.

ಸ್ಕೂಟರ್‌ನ ವಿನ್ಯಾಸವೂ ಸ್ಟೈಲಿಷ್ ಆಗಿದ್ದು, ನಗರ ಸಂಚಾರಕ್ಕೆ ಸೂಕ್ತವಾಗಿದೆ. ಆರು ಬಣ್ಣಗಳಲ್ಲಿ ಲಭ್ಯವಿರುವ ಈ ಮಾದರಿ 6.5 ಸೆಕೆಂಡ್‌ನಲ್ಲಿ 0 ರಿಂದ 40 ಕಿಮೀ ವೇಗ ತಲುಪುತ್ತದೆ. ಗರಿಷ್ಠ ವೇಗ 65 ಕಿಮೀ/ಗಂ. ಜೊತೆಗೆ, 22 ಲೀಟರ್ ಸ್ಟೋರೇಜ್ ಸ್ಪೇಸ್ ಮತ್ತು 165 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ.

ಇದನ್ನೂ ಓದಿ: ದೀಪಾವಳಿ ಮುನ್ನವೇ ಈ ಮಾರುತಿ ಕಾರಿನ ಬೆಲೆ ಭಾರೀ ಇಳಿಕೆ! ಗ್ರಾಹಕರಿಗೆ ಭರ್ಜರಿ ಆಫರ್

ಇದರ LCD ಕನ್ಸೋಲ್, ಮೂರು ರೈಡಿಂಗ್ ಮೋಡ್‌ಗಳು ಮತ್ತು ರಿವರ್ಸ್ ಮೋಡ್ ಸಹಿತ ಸ್ಮಾರ್ಟ್ ಫೀಚರ್ಸ್‌ಗಳು ಗಮನಾರ್ಹ. ಟ್ರಾಫಿಕ್‌ನಲ್ಲಿ ಹಿಂಬದಿಗೆ ಸ್ಲೋವಾಗಿ ತೆರಳಬೇಕಾದರೆ ಈ ಮೋಡ್ ತುಂಬ ಉಪಯೋಗಿ. ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಯೂ ಇದೆ.

ಅಮೆಜಾನ್‌ನಲ್ಲಿ ಈ ಸ್ಕೂಟರ್‌ಗೆ 4.3/5 ರೇಟಿಂಗ್ ಸಿಕ್ಕಿದ್ದು, ಗ್ರಾಹಕರು ಇದರ ಬಿಲ್ಡ್ ಕ್ವಾಲಿಟಿ ಮತ್ತು ಕಂಫರ್ಟ್‌ನ್ನು ಮೆಚ್ಚಿದ್ದಾರೆ. ಖರೀದಿದಾರರ ಪ್ರಕಾರ ಈವಿಯ ಮೈಲೇಜ್ ಕಂಪನಿಯ ಹೇಳಿಕೆಯಿಗಿಂತ ಹೆಚ್ಚಾಗಿದೆ. ಆದರೆ ಕೆಲವರು ಲಾಗ್ ಮತ್ತು ಅಕ್ಸೆಲರೇಷನ್‌ನಲ್ಲಿ ಸ್ವಲ್ಪ ವಿಳಂಬ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದು ವೇಳೆ ಕ್ರೆಡಿಟ್ ಕಾರ್ಡ್ ರದ್ದು ಮಾಡಿದ್ರೆ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತಾ?

ಸರ್ವಿಸ್ ವಿಚಾರದಲ್ಲೂ ಚಿಂತೆಯಿಲ್ಲ — ದೇಶದಾದ್ಯಂತ 500 ಕ್ಕೂ ಹೆಚ್ಚು ಸರ್ವಿಸ್ ಸೆಂಟರ್‌ಗಳಿವೆ. ಡೀಲರ್‌ಶಿಪ್ ಮೂಲಕ ಅಥವಾ ಹೋಮ್ ಡೆಲಿವರಿ ಮೂಲಕ ಖರೀದಿಸಬಹುದು. ನಗರ ಪ್ರಯಾಣಕ್ಕೆ ಪಾಕೆಟ್ ಫ್ರೆಂಡ್ಲಿ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿ ಈ ಸ್ಕೂಟರ್ ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆ ಪಡೆದಿದೆ.

Electric Scooter Offer, 16,459 Discount and 95KM Mileage

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories