Business News

ಮನೆ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದ್ಯಾ? ಹಾಗಾದ್ರೆ ಇಷ್ಟು ಮಾಡಿ ಸಾಕು

ನಿಮ್ಮ ಮನೆ ಮನೆ ಕರೆಂಟ್ ಬಿಲ್ ಕಡಿಮೆ ಮಾಡೋಕೆ ಸಿಂಪಲ್ ಟಿಪ್ಸ್, ಕೆಲವೊಂದು ಜಾಗ್ರತಿ ಕ್ರಮಗಳನ್ನು ತೆಗೆದುಕೊಂಡರೆ ಖಂಡಿತ ಬಿಲ್ ಉಳಿಸಬಹುದು

  • ವಿದ್ಯುತ್ ಬಳಕೆ ಕಡಿಮೆ ಮಾಡಿದರೆ ಬಿಲ್ ಸ್ವಾಭಾವಿಕವಾಗಿ ಇಳಿಯುತ್ತದೆ
  • ಅತಿಯಾದ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ತಪ್ಪಿಸಿ
  • LED ಬಲ್ಬ್, ಫೋರ್ ಸ್ಟಾರ್ ಎಲೆಕ್ಟ್ರಾನಿಕ್ ಉಪಕರಣಗಳಿಂದ ಉಳಿತಾಯ ಸಾಧ್ಯ

“ಅಯ್ಯೋ! ಇವತ್ತು ಕರೆಂಟ್ ಬಿಲ್ ಬಂತು, ಇಷ್ಟೊಂದು ಬಿಲ್ ಹೇಗೆ ಬಂತು!” ಇದು ಅದೆಷ್ಟೋ ಜನರ ಪ್ರತಿದಿನದ ಕತೆ. ಸಣ್ಣ ಮನೆ, ಸಾದಾ ಜೀವನ, ಕಡಿಮೆ ಆದಾಯ. ಆದ್ರೆ ತಿಂಗಳ ಕೊನೆಯಲ್ಲಿ ಬರುವ ವಿದ್ಯುತ್ ಬಿಲ್ಲು (Electricity Bill) ಮಾತ್ರ ದೊಡ್ಡ ಶಾಕ್ ಕೊಡುತ್ತೆ.

“ನಮ್ಮ ಮನೇಲಿ ಲೈಟ್, ಫ್ಯಾನ್ ಮಾತ್ರ ಹಾಕೋದು, ಆದ್ರೆ ಇಷ್ಟು ಬಿಲ್ ಹೇಗೆ ಬಂತು?” ಅಂತ ಗಾಬರಿ ಪಡೋದು ಸಹಜ. ಹಾಗಾದ್ರೆ, ಕರಂಟ್ ಬಿಲ್ ಕಡಿಮೆ ಮಾಡೋಕೆ ಏನಾದ್ರೂ ಟಿಪ್ಸ್ ಇದೆಯಾ? ಹೌದು, ಇದೆ!

ಮನೆಯ ವಿದ್ಯುತ್ ಬಳಕೆ ಸರಿಯಾಗಿ ನೋಡಿಕೊಂಡರೆ ಬಿಲ್ ಸ್ವಾಭಾವಿಕವಾಗಿ ಕಡಿಮೆಯಾಗಬಹುದು. ಮೊದಲನೆಯದು, ನೀವೀಗ ಎಷ್ಟೋ ಕಡೆ ಹಳೇ ಬಲ್ಬ್ ಬಳಸಿರುತ್ತೀರಿ. ಅವನ್ನೆಲ್ಲಾ ಬದಲಿಸಿ LED ಬಲ್ಬ್ ಹಾಕಿದ್ರೆ ಸಾಕು, ವಿದ್ಯುತ್ ಬಳಕೆ ಇಳಿಯುತ್ತದೆ.

ಇದರ ಜೊತೆಗೆ, ನಿಮಗೆ ಎಲೆಕ್ಟ್ರಾನಿಕ್ ಉಪಕರಣಗಳ ಆಯ್ಕೆಯೂ ಮಹತ್ವದ್ದು. ಫೋರ್ ಸ್ಟಾರ್ ರೇಟಿಂಗ್ (Four Star Rating) ಇರೋ ವಾಷಿಂಗ್ ಮೆಷಿನ್, ಫ್ರಿಡ್ಜ್, ಎಸಿಗಳನ್ನು ಬಳಸಿದ್ರೆ ಸಾಕಷ್ಟು ಕರೆಂಟ್ ಉಳಿಯುತ್ತೆ.

ಇನ್ನೊಂದು ದೊಡ್ಡ ವಿಚಾರ – ನೀವೀಗ ಹೀಟರ್ (Heater) ತುಂಬಾ ಬಳಸುತ್ತೀರಾ? ಹೀಟರ್ ನಡಿಸಿದ್ರೆ ಕರಂಟ್ ಖರ್ಚು ಜಾಸ್ತಿಯಾಗುತ್ತೆ. ಅದನ್ನು ನಿಯಂತ್ರಿಸಲು ಬಿಸಿನೀರು ಬೇಕಾದಷ್ಟು ಮಾತ್ರವೇ ಹೀಟರ್ ಆನ್ ಮಾಡಬೇಕು, ಬೇಗ ಸ್ವಿಚ್ ಆಫ್ ಮಾಡಬೇಕು.

Electricity bill

ಹೀಟರ್ ಮಾತ್ರವಲ್ಲ, ಟಿವಿ, ಫ್ಯಾನ್, ಲೈಟ್ ಆನ್ ಮಾಡಿ ಮರೆತು ಬಿಡೋದು! ಇದರಿಂದ ಕರಂಟ್ ಬಿಲ್ ಹೆಚ್ಚಾಗೋದು ಗ್ಯಾರಂಟಿ. ಮನೆ ಬಿಟ್ಟು ಹೊರ ಹೋಗುವ ಮುನ್ನ ಎಲ್ಲ ಸ್ವಿಚ್ ಆಫ್ ಮಾಡೋದು ಒಳ್ಳೆಯ ಅಭ್ಯಾಸ.

ನಿಮ್ಮ ವಿದ್ಯುತ್ ಬಳಕೆ ಎಲ್ಲಿ ಹೆಚ್ಚಾಗಿದೆ ಅಂತ ಗಮನಿಸಿ, ಅದನ್ನ ತಕ್ಷಣ ಸರಿಪಡಿಸಿಕೊಳ್ಳಿ. ಜೊತೆಗೆ ಸಮಯಕ್ಕೆ ತಕ್ಕಂತೆ ಬಿಲ್ ಪಾವತಿಸಬೇಕು.

ನಿಮ್ಮ ಗೃಹೋಪಕರಣ ಖರೀದಿಯಲ್ಲಿ ಜಾಣ್ಮೆ ತೋರಿದ್ರೆ, ಫೋರ್ ಸ್ಟಾರ್ ರೇಟಿಂಗ್ (Four Star Rating) ಉಪಕರಣ ಬಳಸಿದ್ರೆ, ಅವಶ್ಯಕತೆಗಿಂತ ಹೆಚ್ಚು ವಿದ್ಯುತ್ ಖರ್ಚು ಮಾಡದೇ ಹೋದರೆ, ಬಿಲ್ ತಾನಾಗೆ ಕಡಿಮೆ ಆಗುತ್ತಾ ಬರುತ್ತದೆ.

Electricity Bill Shock? Save Power with These Smart Tips

English Summary

Our Whatsapp Channel is Live Now 👇

Whatsapp Channel

Related Stories