ಒಂದು ವೇಳೆ ನೀವು ಪಶುಸಂಗೋಪನೆ ಮಾಡುವವರಾದರೆ ಈ ಒಂದು ಹಸುವಿನ ತಳಿಯಿಂದ (Cow Breed ) ನೀವು ಉತ್ತಮವಾದ ಲಾಭ ಗಳಿಸಬಹುದು. ಈ ಹಸುವಿನ ತಳಿಯ ಹೆಸರು ರಾಠಿ ತಳಿ (Rathi Breed Cow). ಇದು ನಮ್ಮ ದೇಶದ ಉತ್ತಮವಾದ ಅತಿಹೆಚ್ಚಿನ ಲಾಭ ಕೊಡುವ (Farmer Can Earn Good income), ಅತ್ಯುತ್ತಮವಾದ ಹಸುವಿನ ತಳಿ ಆಗಿದೆ.
ಈ ಹಸುವಿನ ತಳಿ ಕಂಡುಬರುವುದು ರಾಜಸ್ಥಾನ (Rajasthan) ರಾಜ್ಯದ ಬಿಕಾನೇರ್ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ. ಖಜುವಾಲ, ಚತ್ತರ್ ಘಡ್ ಮತ್ತು ಬಿಕಾನೇರ್ ಮಹಾಜನ್ ಊರುಗಳಲ್ಲಿ ಕಾಣಸಿಗುತ್ತದೆ.
ಬಿಕಾನೇರ್ ಜಿಲ್ಲೆಯಲ್ಲಿ ಇರುವುದು ಹೆಚ್ಚು. ಈ ಹಸು ಪಶು ಸಾಕಾಣಿಕೆ ಮಾಡುವವರಿಗೆ ಒಳ್ಳೆಯ ಆಯ್ಕೆ. ಏಕೆಂದರೆ, ಈ ಹಸುವನ್ನು ನೋಡಿಕೊಳ್ಳುವುದಕ್ಕೆ, ನಿರ್ವಹಣೆಗೆ ಬೇಕಾಗುವ ಖರ್ಚಾಗುವ ಮೊತ್ತ ಬಹಳ ಕಡಿಮೆ.
ಬಿಗ್ ರಿಲೀಫ್! ಚಿನ್ನದ ಬೆಲೆ ಬಾರೀ ಕುಸಿತ, ಅಗ್ಗದ ಬೆಲೆಗೆ ಚಿನ್ನ ಬೆಳ್ಳಿ ಖರೀದಿಸುವ ಸುವರ್ಣ ಅವಕಾಶ
ಹಾಗೆಯೇ ಬೇರೆ ಹಸುಗಳ ಜೊತೆಗೆ ಹೋಲಿಸಿ ನೋಡಿದರೆ ಎಲ್ಲಾ ವಾತವರಣಕ್ಕೂ ರಾಠಿ ಹಸು ಹೊಂದಿಕೊಳ್ಳುತ್ತದೆ. 10℃ ಇಂದ 50 ℃ ವರೆಗು ಎಲ್ಲಾ ಥರದ ವಾತಾವರಣದಲ್ಲಿ ರಾಠಿ ಹಸು ಹೊಂದಿಕೊಂಡು ಬದುಕುತ್ತದೆ. ಈ ಹಸುವಿನ ಬಗ್ಗೆ ಬಿಕಾನೇರ್ ಗೋಶಾಲ ಅಧ್ಯಕ್ಷರಾದ ಸೂರಜ್ಮಲ್ ಸಿಂಗ್ ನೀಮ್ರಾನ ಅವರು ಮಾತನಾಡಿದ್ದಾರೆ..
ಈ ಹಸು ಭಾರತದ ಬೇರೆ ಹಸುಗಳ ತಳಿಗಿಂತ ಉತ್ತಮವಾಗಿದೆ. ರಾಠಿ ಹಸು ಬೇರೆ ಹಸುಗಳಿಗಿಂತ ಹೆಚ್ಬು ಹಾಲನ್ನು ನೀಡುತ್ತದೆ. ರಾಠಿ ಹಸುವಿನ ತಳಿ ರಾಜಸ್ಥಾನ ರಾಜ್ಯದ ಬಿಕಾನೇರ್, ಗಂಗಾನಗರ, ಹನುಮಾನ್ ಗಢ ಈ ಪ್ರದೇಶಗಳಲ್ಲಿ ಸಿಗುತ್ತದೆ. ರಾಠಿ ತಳಿಯು ಭಾರತದ ಬೇರೆ ಮೂರು ವಿಭಿನ್ನ ತಳಿಯ ಮಿಶ್ರಣದಿಂದ ಸಿದ್ಧವಾಗಿದೆ. ಸಾಹಿವಾಲ್, ರೆಡ್ ಸಿಂಧಿ ಮತ್ತು ಥಾರ್ಪಾಕರ್ ಈ ಮೂರು ತಳಿಗಳ ಸಂಯೋಜನೆಯಿಂದ ರಾಠಿ ತಳಿ ಸಿದ್ಧವಾಗಿದೆ ಎಂದು ಮಹಿತಿ ಸಿಕ್ಕಿದೆ.
ರಾಠಿ ಹಸುವಿನ ಎತ್ತರವು ಕಡಿಮೆ, ಎಲ್ಲಾ ಥರದ ವಾತಾವರಣದಲ್ಲಿ ಈ ಹಸು ಬದುಕುತ್ತದೆ, ಜೊತೆಗೆ ದಿನಕ್ಕೆ 5 ರಿಂದ 7 ಲೀಟರ್ ಹಾಲು ನೀಡುತ್ತದೆ. ರಾಠಿ ತಳಿಯ ಹಸು ಮಾತ್ರವಲ್ಲ, ಬುಲ್ ಗಳು ಕೂಡ ಶಕ್ತಿಶಾಲಿ ಆಗಿರುತ್ತದೆ.
ಭಾರತದಲ್ಲಿನ ಟಾಪ್ 5 ಮೋಟಾರ್ ಬೈಕ್ಗಳು ಇವು! ಯಾವಾಗಲೂ ಗ್ರಾಹಕರ ಹಾರ್ಟ್ ಫೇವರೆಟ್
ಈ ಹಸುಗಳಿಗೆ ಉತ್ತಮವಾದ ಆಹಾರ ಒದಗಿಸಿದರೆ, 10 ರಿಂದ 15 ಲೀಟರ್ ಹಾಲು ಕೊಡುವುದು ಖಂಡಿತ ಆಗಿದೆ. ಈ ಹಸುವಿನ ಹಾಲಿನಿಂದ ಈಗ ಒಳ್ಳೆಯ ಆದಾಯ ಸಿಗುತ್ತಿದೆ ಎಂದು ಸೂರಜ್ಮಲ್ ಅವರು ತಿಳಿಸಿದ್ದಾರೆ. ಹಾಗೆಯೇ ತಮ್ಮ ಹತ್ತಿರ ಇರುವ ರಾಠಿ ಹಸುಗಳು, ಕಡಿಮೆ ನೀರು ಮತ್ತು ಆಹಾರ ಸೇವನೆ ಇಂದ, ಎಂಥದ್ದೇ ಪರಿಸ್ಥಿತಿಯಲ್ಲಿ ಹೆಚ್ಚು ಹಾಲು ಕೊಡುತ್ತಿದೆ ಎಂದು ತಿಳಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಕೂಡ ರಾಠಿ ತಳಿಯ ಹಸುಗಳ ಸಂಗೋಪನೆಯಿಂದ ರೈತರು ಉತ್ತಮ ಲಾಭ ಗಳಿಸಬಹುದು.
Farmer Can Earn Good income from Rathi Breed Cow which Gives More Milk with Low Food
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.