ಹಬ್ಬದ ಸೀಸನ್ ಆಫರ್: ಕಾರು ಲೋನ್ ಬಡ್ಡಿದರ ಕಡಿತ! ಹೊಸ ಕಾರು ಖರೀದಿಗೆ ಬಂಪರ್ ಅವಕಾಶ - Car Loan
ಬ್ಯಾಂಕ್ ಆಫ್ ಬರೋಡ ಹಬ್ಬದ ಸೀಸನ್ ಆಫರ್ಗಾಗಿ ಕಾರ್ ಲೋನ್ ಬಡ್ಡಿದರವನ್ನು ಕಡಿಮೆ ಮಾಡಿದೆ. ಹೊಸ ಕಾರು ಖರೀದಿಗೆ ವರ್ಷಕ್ಕೆ 8.15% ದರದಲ್ಲಿ ಸಾಲ ಪಡೆಯಬಹುದು. ತಕ್ಷಣ ಪ್ರಾರಂಭವಾಗುವ ವಿಶೇಷ ಅವಕಾಶ.

- ಕಾರ್ ಸಾಲದ ಬಡ್ಡಿದರವು ಈಗ 8.15% ರಿಂದ ಆರಂಭ.
- ಪ್ರಾಪರ್ಟಿ ಲೋನ್ ಬಡ್ಡಿದರವೂ 9.15% ಗೆ ಇಳಿಕೆ.
- RBI ರೆಪೋ ದರ ಕಡಿತದ ನಂತರ ಹೊಸ ಆಫರ್.
Car Loan Offer: ಹಬ್ಬದ ಸೀಸನ್ನಲ್ಲಿ ಹೊಸ ಕಾರು ಖರೀದಿಸಲು ಬಯಸುವ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡ (Bank Of Baroda) ವಿಶೇಷ ಆಫರ್ ನೀಡಿದೆ. ಫ್ಲೋಟಿಂಗ್ ಕಾರ್ ಸಾಲದ ಬಡ್ಡಿದರವು ಈಗ ವರ್ಷಕ್ಕೆ 8.15% ರಿಂದ ಪ್ರಾರಂಭವಾಗಲಿದೆ. ಹೊಸ ದರ ತಕ್ಷಣವೇ ಅನ್ವಯವಾಗುತ್ತದೆ.
ಕೇವಲ ಕಾರ್ ಸಾಲವಲ್ಲ, ಬ್ಯಾಂಕ್ ಬರೊಡಾ ಆಸ್ತಿ ಸಾಲದ (Property Loan) ಬಡ್ಡಿದರವನ್ನು 9.85% ರಿಂದ 9.15% ಗೆ ಇಳಿಸಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಕುಟುಂಬಗಳಿಗೆ ಹೊಸ ಕಾರು ಖರೀದಿಸುವ (Buy Car) ಅವಕಾಶ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಒಂದೇ ಚಾರ್ಜ್ನಲ್ಲಿ 158 ಕಿ.ಮೀ ಮೈಲೇಜ್! ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಈ ಬಡ್ಡಿದರ ಕಡಿತ RBI ಇತ್ತೀಚಿನ ಫೆಬ್ರವರಿ ಮತ್ತು ಏಪ್ರಿಲ್ ಸಭೆಗಳಲ್ಲಿ ಪ್ರತ್ಯೇಕವಾಗಿ 25 ಬೇಸಿಸ್ ಪಾಯಿಂಟ್ಗಳು, ಜೂನ್ ಸಭೆಯಲ್ಲಿ 50 ಬೇಸಿಸ್ ಪಾಯಿಂಟ್ಗಳು ಕಡಿತಗೊಂಡವು. ಇದರಿಂದ ಬ್ಯಾಂಕ್ಗಳು ತಮ್ಮ ಸಾಲದ ಬಡ್ಡಿದರವನ್ನು ತಕ್ಷಣ ಕಡಿಮೆ ಮಾಡಿದ್ದವು.
ಬ್ಯಾಂಕ್ ಆಫ್ ಬರೋಡ ಎಗ್ಜಿಕ್ಯೂಟಿವ್ ಡೈರೆಕ್ಟರ್ ಸಂಜಯ್ ರವರು “ಹೊಸ ವಾಹನವನ್ನು ಖರೀದಿಸಲು ಕುಟುಂಬಗಳ ಕನಸುಗಳನ್ನು ನನಸಾಗಿಸಲು ಹಬ್ಬದ ಸಮಯ ಸೂಕ್ತವಾಗಿದೆ. ನಮ್ಮ ಕಾರ್ ಸಾಲ (Car Loan) ಆಫರ್ ಇದನ್ನು ಸುಲಭಗೊಳಿಸುತ್ತದೆ” ಎಂದು ತಿಳಿಸಿದ್ದಾರೆ.
Festival Season Offer, Bank of Baroda Cuts Car Loan Interest Rates



