ಫ್ಲಿಪ್ಕಾರ್ಟ್ ಬಿಗ್ ಬ್ಯಾಂಗ್ ದೀಪಾವಳಿ ಸೇಲ್ ಅಕ್ಟೋಬರ್ 11ರಿಂದ ಆರಂಭ
Flipkart Big Bang Diwali Sale 2025: ದೀಪಾವಳಿಯ ಸಂಭ್ರಮಕ್ಕೆ ಫ್ಲಿಪ್ಕಾರ್ಟ್ ಮತ್ತೊಂದು ಬಿಗ್ ಸೇಲ್ ಘೋಷಿಸಿದೆ. ಅಕ್ಟೋಬರ್ 11ರಿಂದ ಆರಂಭವಾಗುವ ‘ಬಿಗ್ ಬ್ಯಾಂಗ್ ದೀಪಾವಳಿ ಸೇಲ್ 2025’ನಲ್ಲಿ ಗ್ರಾಹಕರಿಗೆ ಸ್ಮಾರ್ಟ್ಫೋನ್ಗಳಿಂದ ಫ್ಯಾಷನ್ ವರೆಗೆ ಭಾರಿ ರಿಯಾಯಿತಿ ಲಭ್ಯ.

Flipkart Big Bang Diwali Sale 2025: ಇ-ಕಾಮರ್ಸ್ ದಿಗ್ಗಜ ಫ್ಲಿಪ್ಕಾರ್ಟ್ ತನ್ನ ಬಹು ನಿರೀಕ್ಷಿತ ‘ಬಿಗ್ ಬ್ಯಾಂಗ್ ದೀಪಾವಳಿ ಸೇಲ್ 2025’ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೆಗಾ ಸೇಲ್ ಅಕ್ಟೋಬರ್ 11ರಿಂದ ಆರಂಭವಾಗಲಿದ್ದು, ಫ್ಲಿಪ್ಕಾರ್ಟ್ ಪ್ಲಸ್ ಮತ್ತು ಫ್ಲಿಪ್ಕಾರ್ಟ್ ಬ್ಲಾಕ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ, ಅಂದರೆ ಅಕ್ಟೋಬರ್ 10ರಿಂದಲೇ ಶಾಪಿಂಗ್ ಅವಕಾಶ ದೊರೆಯಲಿದೆ.
ಈ ದೀಪಾವಳಿ ಸೇಲ್ನಲ್ಲಿ ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಸ್ಮಾರ್ಟ್ವಾಚ್, ಟಿವಿ, ಹೋಮ್ ಅಪ್ಲಯನ್ಸ್ ಹಾಗೂ ಫ್ಯಾಷನ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಾಗಲಿವೆ. ವಿಶೇಷವಾಗಿ ಆಪಲ್, ಶ್ಯಾವೋಮಿ, ರಿಯಲ್ಮೀ, ಎಚ್ಪಿ, ಡೆಲ್, ಎಲ್ಜೀ, ಸ್ಯಾಮ್ಸಂಗ್, ವನ್ಪ್ಲಸ್ ಮತ್ತು ಸೋನಿ ಮುಂತಾದ ಬ್ರಾಂಡ್ಗಳ ಉತ್ಪನ್ನಗಳು ಅಗ್ಗದ ದರದಲ್ಲಿ ದೊರೆಯಲಿವೆ.
ಗ್ರಾಹಕರು ಎಸ್ಬಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೂಲಕ ಖರೀದಿಸಿದರೆ 10% ತಕ್ಷಣದ ರಿಯಾಯಿತಿ (Instant Discount) ಪಡೆಯಬಹುದು. ಜೊತೆಗೆ ನೊ-ಕಾಸ್ಟ್ ಇಎಂಐ, ಎಕ್ಸ್ಚೇಂಜ್ ಆಫರ್ ಹಾಗೂ ಬ್ಯಾಂಕ್ ಕ್ಯಾಶ್ಬ್ಯಾಕ್ ಆಫರ್ಗಳು ಸಹ ಲಭ್ಯವಿವೆ.
ಫ್ಲಿಪ್ಕಾರ್ಟ್ ಬ್ಲಾಕ್ ಮೆಂಬರ್ಶಿಪ್ನ ವಾರ್ಷಿಕ ಶುಲ್ಕವನ್ನು ರೂ.1,499ರಿಂದ ರೂ.1,249ಕ್ಕೆ ಇಳಿಸಲಾಗಿದೆ. ಅಲ್ಲದೆ, ನಿಯಮಿತ ಖರೀದಿದಾರರು ತಮ್ಮ ಸ್ಮಾರ್ಟ್ ಶಾಪಿಂಗ್ ಮೂಲಕ ಸೂರಪರ್ಕಾಯಿನ್ಗಳನ್ನು ಸಂಗ್ರಹಿಸಿ ಫ್ಲಿಪ್ಕಾರ್ಟ್ ಪ್ಲಸ್ ಮೆಂಬರ್ಶಿಪ್ ಉಚಿತವಾಗಿ ಪಡೆಯಬಹುದು.
ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಬಳಕೆದಾರರಿಗೆ ಹೆಚ್ಚುವರಿ ಕ್ಯಾಶ್ಬ್ಯಾಕ್ ಮತ್ತು ರಿವಾರ್ಡ್ಗಳು ನೀಡಲಾಗುತ್ತಿವೆ. ಈ ಬಿಗ್ ಬ್ಯಾಂಗ್ ಸೇಲ್ ಫ್ಲಿಪ್ಕಾರ್ಟ್ನ ಇತ್ತೀಚಿನ ಬಿಗ್ ಬಿಲಿಯನ್ ಡೇಸ್ ಸೇಲ್ ನಂತರ ನಡೆಯಲಿದ್ದು, ಹಬ್ಬದ ಖರೀದಿಗಳಿಗೆ ಮತ್ತೊಂದು ಅವಕಾಶವಾಗಿ ಪರಿಣಮಿಸಿದೆ.
ದೀಪಾವಳಿ ಮುನ್ನದ ಈ ಸೇಲ್ನಲ್ಲಿ ಗ್ರಾಹಕರು ಮನೆ ಬಳಕೆಯ ಉತ್ಪನ್ನಗಳಿಂದ ಹಿಡಿದು ಗ್ಯಾಜೆಟ್ಗಳವರೆಗೆ ಖರೀದಿ ಮಾಡಲು ಉತ್ಸಾಹದಿಂದ ಕಾಯುತ್ತಿದ್ದಾರೆ.
Flipkart Big Bang Diwali Sale 2025 Starts on October 11



