ಐಫೋನ್ ಮೇಲೆ ಭಾರೀ ರಿಯಾಯಿತಿ! ಫ್ಲಿಪ್‌ಕಾರ್ಟ್ ಫೆಸ್ಟಿವಲ್ ಧಮಾಕಾ ಸೇಲ್ ಆರಂಭ
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಫ್ಲಿಪ್‌ಕಾರ್ಟ್ ಹೊಸ “ಬಿಗ್ ಫೆಸ್ಟಿವಲ್ ಧಮಾಕಾ ಸೇಲ್” ಆರಂಭಿಸಿದೆ. ಈ ಸೇಲ್‌ನಲ್ಲಿ ಐಫೋನ್ 16 ಸರಣಿಯ ಮೇಲೆ ಭಾರೀ ರಿಯಾಯಿತಿ ಹಾಗೂ ಬ್ಯಾಂಕ್ ಆಫರ್‌ಗಳು ಲಭ್ಯ.

Smartphone Offers: ದೀಪಾವಳಿ ಹಬ್ಬದ ಖರೀದಿಗೆ ಫ್ಲಿಪ್‌ಕಾರ್ಟ್ (Flipkart Discount) ಗ್ರಾಹಕರಿಗೆ ಹೊಸ ಆಫರ್ ತಂದಿದೆ. “ಬಿಗ್ ಫೆಸ್ಟಿವಲ್ ಧಮಾಕಾ ಸೇಲ್” ಎಂಬ ಹೆಸರಿನಲ್ಲಿ ಅಕ್ಟೋಬರ್ 4ರಿಂದ ಸೇಲ್ ಪ್ರಾರಂಭವಾಗಿದ್ದು, ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿದೆ.
ಇತ್ತೀಚೆಗೆ ಮುಗಿದ “ಬಿಗ್ ಬಿಲಿಯನ್ ಡೇಸ್ ಸೇಲ್” ನಂತರ ಕೇವಲ ಒಂದು ದಿನದಲ್ಲೇ ಫ್ಲಿಪ್‌ಕಾರ್ಟ್ ಮತ್ತೊಂದು ಸೇಲ್ ಘೋಷಿಸಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.
ಈ ಸೇಲ್‌ನ ಪ್ರಮುಖ ಆಕರ್ಷಣೆ ಐಫೋನ್ 16 ಸರಣಿ. ರೂ.79,990 ಬೆಲೆಯ ಐಫೋನ್ 16 ಈಗ ಕೇವಲ ರೂ.56,999ಗೆ ಲಭ್ಯ. ಅದೇ ರೀತಿ ಐಫೋನ್ 16 ಪ್ರೋ ರೂ.1,19,900 ಬದಲು ರೂ.85,999ಗೆ ದೊರೆಯುತ್ತದೆ.
ಐಫೋನ್ 16 ಪ್ರೋ ಮ್ಯಾಕ್ಸ್ (256GB) ಮಾದರಿಯ ಬೆಲೆ ರೂ.1,44,900 ಆಗಿದ್ದು, ಸೇಲ್‌ನಲ್ಲಿ ಕೇವಲ ರೂ.1,04,999ಗೆ ಸಿಗುತ್ತಿದೆ. ಜೊತೆಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ 5% ರಿಯಾಯಿತಿ (ಸುಮಾರು ರೂ.4000) ದೊರೆಯಲಿದೆ.
ಐಫೋನ್‌ಗಳ ಜೊತೆಗೆ ಸಾಮ್ಸಂಗ್ S24, ಮೋಟೊ ಎಡ್ಜ್ 60 ಫ್ಯೂಷನ್, ವಿವೋ T4, ರಿಯಲ್‌ಮಿ P3X, ನಥಿಂಗ್ ಫೋನ್ 2 ಪ್ರೋ, ಮತ್ತು ಗೂಗಲ್ ಪಿಕ್ಸೆಲ್ 9 ಮಾದರಿಗಳ ಮೇಲೂ ಆಕರ್ಷಕ ಆಫರ್‌ಗಳಿವೆ. HDFC ಬ್ಯಾಂಕ್ ಕಾರ್ಡ್‌ಗಳು ಬಳಸಿದರೆ ತಕ್ಷಣ 10% ಇನ್‌ಸ್ಟಂಟ್ ಡಿಸ್ಕೌಂಟ್ ಕೂಡ ದೊರೆಯಲಿದೆ.
ಮೊಬೈಲ್ ಖರೀದಿ ಮಾಡಲು ಯೋಜಿಸುತ್ತಿರುವವರು ಈ ಫೆಸ್ಟಿವಲ್ ಸೇಲ್ ನಲ್ಲಿ ತಪ್ಪದೆ ಪ್ರಯೋಜನ ಪಡೆಯಬಹುದು.
Flipkart Big Festival Dhamaka Sale Offers Huge iPhone Discounts



