5 ನಿಮಿಷಗಳಲ್ಲಿ ಪಡೆಯಿರಿ 1 ಲಕ್ಷ ಲೋನ್! ಆಧಾರ್ ಕಾರ್ಡ್ ಇದ್ರೆ PhonePe ಮೂಲಕವೇ ಅಪ್ಲೈ ಮಾಡಿ
5 ನಿಮಿಷಗಳಲ್ಲಿ ಒಂದು ಲಕ್ಷದವರೆಗು Loan ಪಡೆಯಲು ಸಾಧ್ಯ ಇರುವುದು ಫೋನ್ ಪೇ ಆಪ್ (PhonePe App Loan) ಮೂಲಕ.
ಹಣಕಾಸಿನ ಅಗತ್ಯತೆಗಳು ಕೆಲವೊಮ್ಮೆ ನಾವು ಊಹಿಸದೇ ಬಂದುಬಿಡುತ್ತದೆ. ಅಂಥ ಸಮಯದಲ್ಲಿ ನಮ್ಮ ಬಳಿ ಹಣ ಇಲ್ಲದೇ, ಯಾರನ್ನಾದರೂ ಕೇಳಿದಾಗ ಅವರ ಬಳಿ ಕೂಡ ಸಿಗದೇ ಕಷ್ಟ ಆಗುತ್ತದೆ. ಇಂಥ ಪರಿಸ್ಥಿತಿ ಎದುರಾದಾಗ ನೀವು ಇನ್ನುಮುಂದೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಈ ಒಂದು ಆಪ್ ಮೂಲಕ ನೀವು ಸುಲಭವಾಗಿ 5 ನಿಮಿಷಗಳಲ್ಲಿ ಒಂದು ಲಕ್ಷದವರೆಗೂ ಸಾಲ (Personal Loan) ಪಡೆದುಕೊಳ್ಳಬಹುದು. ಅದು ಹೇಗೆ? ಯಾವ ಆಪ್ ಮೂಲಕ? ಎಲ್ಲವನ್ನು ತಿಳಿಯೋಣ..
ಮೇಲೆ ತಿಳಿಸಿದ ಹಾಗೆ 5 ನಿಮಿಷಗಳಲ್ಲಿ ಒಂದು ಲಕ್ಷದವರೆಗು Loan ಪಡೆಯಲು ಸಾಧ್ಯ ಇರುವುದು ಫೋನ್ ಪೇ ಆಪ್ (PhonePe App Loan) ಮೂಲಕ. ಫೋನ್ ಪೇ ಅನ್ನು ಯುಪಿಐ ಪೇಮೆಂಟ್ ಆಪ್ ಆಗಿ ಬಳಕೆ ಮಾಡಲಾಗುತ್ತದೆ. ಜೊತೆಗೆ ಈ ಆಪ್ ನಲ್ಲಿ ಇನ್ನು ಸಾಕಷ್ಟು ಆಯ್ಕೆಗಳಿವೆ.
ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಯಾವುದೇ ಬ್ಯಾಂಕ್‌ನಲ್ಲಿ ಗೋಲ್ಡ್ ಲೋನ್ ಪಡೆದಿದ್ರೆ ಬಿಗ್ ಅಪ್ಡೇಟ್
ಈ ಆಪ್ ನಲ್ಲಿ ನೀವು ಫೈನಾನ್ಸ್ ಕಂಪನಿ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ಆ ಫೈನಾನ್ಸ್ ಕಂಪೆನಿಯ ಆಯ್ಕೆಗಳಿಗೆ ಹೋಗಿ, ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಫೋನ್ ಪೇ ಜನರಿಗೆ ಸಹಾಯ ಮಾಡುವುದಕ್ಕಾಗಿ ಹಲವು ಫೈನಾನ್ಸ್ ಕಂಪನಿಯ ಜೊತೆಗೆ ಸಹಭಾಗಿತ್ವ ಹೊಂದಿದೆ.
ಜೊತೆಗೆ ಇದರಲ್ಲಿ NBFC ಆಯ್ಕೆಗಳು ಸಹ ಇದೆ. ಫೋನ್ ಪೇ ಆಪ್ ನಲ್ಲಿ ಲಾಗಿನ್ ಆದರೆ ನೀವು ಸಾಕಷ್ಟು ಆಪ್ಶನ್ ಗಳನ್ನು ನೋಡುತ್ತೀರಿ. ಆಪ್ ನಲ್ಲಿ ಕೆಳಗೆ ಬಂದಾಗ Sponsored Links ಎನ್ನುವ ಆಪ್ಶನ್ ಇರುತ್ತದೆ, ಇದರಲ್ಲಿ ಪೂನಾವಾಲಾ ಪರ್ಸನಲ್ ಲೋನ್ (Personal Loan), ಎಲ್&ಟಿ ಪರ್ಸನಲ್ ಲೋನ್, ಶೇರ್.ಮಾರ್ಕೆಟ್, ಟಾಟಾ ನ್ಯೂ ಪರ್ಸನಲ್ ಲೋನ್ ಈ ಎಲ್ಲಾ ಆಪ್ಷನ್ ಗಳು ಕಾಣುತ್ತದೆ. ಇಲ್ಲಿ ನೀವು ಪೂನಾವಾಲಾ ಲೋನ್ ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
ಈಗ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ. ಈ ಹೊಸ ಪೇಜ್ ನಲ್ಲಿ ನೀವು ಅಂದರೆ ಕೆಲಸ ಮಾಡುತ್ತಿರುವವರು ಸುಲಭವಾಗಿ 5 ಲಕ್ಷದವರೆಗು ಸಾಲ ಪಡೆದುಕೊಳ್ಳಬಹುದು.
ಈ ಯೋಜನೆಯಲ್ಲಿ ಸಾಲ ಪಡೆಯಲು ನಿಮ್ಮ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಜಾಸ್ತಿ ಇರಬೇಕು. ಹಾಗೆಯೇ ಇಲ್ಲಿ ಬಡ್ಡಿದರ ಉತ್ತಮವಾಗಿರುತ್ತದೆ. ತಕ್ಷಣವೇ ಸಾಲ ಪಡೆಯುತ್ತೀರಿ, ಇನ್ಯಾವುದೇ ಶುಲ್ಕ ಪಾವತಿ ಮಾಡುವ ಅಗತ್ಯವಿರುವುದಿಲ್ಲ. ಇಲ್ಲಿ ನೀವು 1 ಲಕ್ಷ ಸಾಲ ಪಡೆದರೆ, 15% ಬಡ್ಡಿ ಇರಲಿದೆ, ತಿಂಗಳಿಗೆ ₹3467 EMI ಕಟ್ಟಬೇಕಾಗುತ್ತದೆ. EMI ಅವಧಿ 3 ವರ್ಷಗಳ ಕಾಲ ಇರುತ್ತದೆ.
ಕೆನರಾ ಬ್ಯಾಂಕ್ ಅಕೌಂಟ್ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು? ಬ್ಯಾಂಕ್‌ನಿಂದ ನಿಯಮ ಬದಲಾವಣೆ!
ಈ ಸಾಲ ಪಡೆಯಲು ಆಧಾರ್ ಕಾರ್ಡ್ ಡೀಟೇಲ್ಸ್ ಹಾಕಿ, ಫೋನ್ ನಂಬರ್ ಗೆ ಓಟಿಪಿ ಪಡೆಯಬೇಕು. ಈ ರೀತಿಯಾಗಿ ಸಾಲ ಪಡೆಯುವ ಪ್ರಕ್ರಿಯೆ ಶುರು ಮಾಡಿ, ಅರ್ಜಿ ಸಲ್ಲಿಸಬಹುದು.
ಇದಕ್ಕಾಗಿ ನಿಮ್ಮ ಕೆಲಸದ ಬಗ್ಗೆ ಮಾಹಿತಿ, ಅಡ್ರೆಸ್ ಡೀಟೇಲ್ಸ್ ಇದೆಲ್ಲವನ್ನು ಕೂಡ ನೀಡಬೇಕಾಗುತ್ತದೆ. ಹಾಗೆಯೇ ಆಟೋ ಡೆಬಿಟ್ ಆಪ್ಶನ್ ಆಯ್ಕೆ ಮಾಡಬೇಕು. ಈ ಸಾಲ ನಿಮಗೆ CIBIL score ಆಧಾರದ ಮೇಲೆ ಸಿಗಲಿದ್ದು, ಇದರ ಆಧಾರದ ಮೇಲೆ ಸಾಲ ಸಿಗುವ ಮೊತ್ತ ಹೆಚ್ಚು ಅಥವಾ ಕಡಿಮೆ ಆಗಬಹುದು.
Get 1 lakh loan in 5 minutes, Apply through PhonePe if you have Aadhaar card