ಕೆನರಾ ಬ್ಯಾಂಕ್ ಅಕೌಂಟ್ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು? ಬ್ಯಾಂಕ್‌ನಿಂದ ನಿಯಮ ಬದಲಾವಣೆ!
Canara Bank account : ಬ್ಯಾಂಕ್ ಅಕೌಂಟ್ ವಿಚಾರದಲ್ಲಿ ಎಲ್ಲರೂ ನೆನಪಿಡಬೇಕಾದ ಪ್ರಮುಖವಾದ ಅಂಶ, ಮಿನಿಮಮ್ ಬ್ಯಾಲೆನ್ಸ್ (Minimum Bank Balance) ಆಗಿರುತ್ತದೆ.
Canara Bank account : ನರೇಂದ್ರ ಮೋದಿ ಅವರು ನಮ್ಮ ದೇಶದ ಪಿಎಮ್ ಆಗಿ ಮೊದಲು ಆಯ್ಕೆಯಾದ ಬಳಿಕ, ದೇಶದ ಸಾಮಾನ್ಯ ಜನರಿಗೂ ಬ್ಯಾಂಕಿಂಗ್ (Banking) ವ್ಯವಸ್ಥೆ ತಲುಪುವ ಹಾಗೆ ಮಾಡಿದರು.
ಸರ್ಕಾರದ ಕಡೆಯಿಂದ ಹಲವು ಯೋಜನೆಗಳನ್ನು ಜಾರಿಗೆ ತಂದು, ಅವೆಲ್ಲವೂ ಕಷ್ಟದಲ್ಲಿ ಇರುವವರ ಬ್ಯಾಂಕ್ ಖಾತೆಗೆ (Bank Account) ನೇರವಾಗಿ ವರ್ಗಾವಣೆ ಮಾಡಿದ ಕಾರಣ, ಹಳ್ಳಿಯಲ್ಲಿ ಇರುವ ಜನರಿಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಸೌಲಭ್ಯ ಸಿಗುವುದಕ್ಕೆ ಶುರುವಾಯಿತು. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಎಲ್ಲರೂ ಬ್ಯಾಂಕ್ ಅಕೌಂಟ್ ತೆರೆಯುವುದಕ್ಕೆ ಶುರು ಮಾಡಿದರು..
ಪ್ರಸ್ತುತ ಬಹಳಷ್ಟು ಜನರು ಬ್ಯಾಂಕಿಂಗ್ ಸೌಲಭ್ಯ ಪಡೆಯುತ್ತಿದ್ದಾರೆ, ಸಣ್ಣ ಪುಟ್ಟ ಕೆಲಸ ಮಾಡುವವರು, ರೈತರು ಎಲ್ಲರೂ ಕೂಡ ತಮಗೆ ಹತ್ತಿರ ಇರುವ ಬ್ಯಾಂಕ್ ಗಳಲ್ಲಿ ಖಾತೆ ಓಪನ್ ಮಾಡಿ, ಹಣಕಾಸಿನ ವ್ಯವಹಾರಗಳನ್ನು ಬ್ಯಾಂಕ್ ಮೂಲಕವೇ ಮಾಡುತ್ತಿದ್ದಾರೆ.
ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಯಾವುದೇ ಬ್ಯಾಂಕ್‌ನಲ್ಲಿ ಗೋಲ್ಡ್ ಲೋನ್ ಪಡೆದಿದ್ರೆ ಬಿಗ್ ಅಪ್ಡೇಟ್
ಹಾಗೆಯೇ ಈ ಡಿಜಿಟಲ್ ಯುಗದಲ್ಲಿ ಆನ್ಲೈನ್ ಬ್ಯಾಂಕ್ಕಿಂಗ್, ಯುಪಿಐ ಪೇಮೆಂಟ್ (UPI Payment) ಇದೆಲ್ಲದರ ಬಳಕೆ ಕೂಡ ಜಾಸ್ತಿಯಾಗುತ್ತಿದೆ. ಹಾಗೆಯೇ ಬ್ಯಾಂಕ್ ಅಕೌಂಟ್ ತೆರೆಯುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹೌದು, ಹಳ್ಳಿಗರು, ರೈತರು ಎಲ್ಲರೂ ಬ್ಯಾಂಕ್ ಖಾತೆ ತೆರೆಯುತ್ತಿದ್ದಾರೆ. ಮತ್ತೊಂದು ಕಡೆ ಕೆಲಸ ಮಾಡುವವರ ಬಳಿ ವೇತನ ವರ್ಗಾವಣೆಗೆ ಹಾಗೂ ಇನ್ನಿತರ ಕಾರಣಗಳಿಗೆ ಬ್ಯಾಂಕ್ ಅಕೌಂಟ್ ಇರಲೇಬೇಕು. ಅವರುಗಳು ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಅನ್ನು ಓಪನ್ ಮಾಡುತ್ತಿದ್ದಾರೆ.
ಬ್ಯಾಂಕ್ ಅಕೌಂಟ್ ವಿಚಾರದಲ್ಲಿ ಎಲ್ಲರೂ ನೆನಪಿಡಬೇಕಾದ ಪ್ರಮುಖವಾದ ಅಂಶ, ಮಿನಿಮಮ್ ಬ್ಯಾಲೆನ್ಸ್ (Minimum Bank Balance) ಆಗಿರುತ್ತದೆ. ಯಾವುದೇ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು.
ಹೌದು, ಬ್ಯಾಂಕ್ ಅಕೌಂಟ್ ಹೊಂದಿರುವ ಎಲ್ಲರೂ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು, ಮಿನಿಮಮ್ ಬ್ಯಾಲೆನ್ಸ್ ಬ್ಯಾಂಕ್ ಇಂದ ಬ್ಯಾಂಕ್ ಗೆ ಬದಲಾಗುತ್ತದೆ. ಆದರೆ ಆಯಾ ಬ್ಯಾಂಕ್ ನಿಯಮದ ಅನುಸಾರ ನೀವು ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಿಲ್ಲ ಎಂದರೆ, ನಿಮ್ಮ ಅಕೌಂಟ್ ಇಂದ ಹೆಚ್ಚುವರಿ ಶುಲ್ಕಗಳನ್ನು ಕಡಿತಗೊಳಿಸಲಾಗುತ್ತದೆ.
ಇದರಿಂದ ನಿಮಗೆ ಆಗುವ ನಷ್ಟಗಳೇ ಹೆಚ್ಚು. ಹಾಗಾಗಿ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡುವುದು ಒಳ್ಳೆಯದು. ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವವರು ಎಷ್ಟು ಮಿನಿಮಮ್ ಬ್ಯಾಲೆನ್ಸ್ ಇಡಬೇಕು ಎಂದು ಇಂದು ತಿಳಿಸಲಿದ್ದೇವೆ..
ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್! ಬಂಪರ್ ಕೊಡುಗೆ
ಕೆನರಾ ಬ್ಯಾಂಕ್ ಅಕೌಂಟ್ ಮಿನಿಮಮ್ ಬ್ಯಾಲೆನ್ಸ್:
ಕೆನರಾ ಬ್ಯಾಂಕ್ ಅಕೌಂಟ್ ನಲ್ಲಿ ಮೆಂಟೇನ್ ಮಾಡುವ ಮಿನಿಮಮ್ ಬ್ಯಾಲೆನ್ಸ್ ಬಹಳ ಕಡಿಮೆ ಇದೆ. ಹಳ್ಳಿಯ ಪ್ರದೇಶಗಳಲ್ಲಿ ಕೆನರಾ ಬ್ಯಾಂಕ್ ಅಕೌಂಟ್ ಓಪನ್ ಮಾಡುವವರು ₹500 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು, ನಗರ ಮತ್ತು ಮೆಟ್ರೋ ಸಿಟಿ ಬ್ರಾಂಚ್ ಗಳಲ್ಲಿ ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವವರು ₹1000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು. ಇದು ಬ್ಯಾಂಕ್ ನಿಯಮ ಆಗಿದ್ದು, ಎಲ್ಲರೂ ಅನುಸರಿಸಬೇಕು.
Do you know what is the minimum balance in Canara Bank account